ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೪೫ “ನೀವು ತಲೆ ಬೋಳಿಸಿ, ಕತ್ತೆ ಮೇಲೆ ಕೂರಿಸಿ, ಊರಿನಂದಾಚೆಗೆ ಓಡಿಸ್ತೀವಿ ಎಂದು ತೀರಾನ ಮಾಡಿದೆ. ಅವಳು ನಿಮ್ಮಿಂದ ಆ ವಿರೂಪ ತಪ್ಪಿಸಿಕೊಳೊಕೆ ಕೆರೆಗೊ ಬಾವಿಗೆ ಹಾರಿರಬೇಕು.......” “ಏನೆಂದಿರಿ?” “ಹೌದು, ರಾತ್ರಿ-ನಾವೆಲ್ಲರೂ ಮಲಗಿದ್ದಾಗಲೆ ಅವಳು ಮೆಲ್ಲನೆದ್ದು ಹೊರಟುಹೋಗಿರಬೇಕು... ಈಗ ನಿಮಗೆ ತೃಪ್ತಿಯಾಯಿತೆ?” ಆ ಬ್ರಾಹ್ಮಣರು ಮನೆಯೊಳಗೆ ಕಾಲಿಟ್ಟ ಸಮಯದಿಂದಲೂ ಮೆಲ್ಲೆ ಆಳುತ್ತಿದ್ದ ಸರಸಿಗೆ, ಶಾಸ್ತ್ರಿಗಳ ಮಾತಿನಿಂದ ನಿಜಸ್ಥಿತಿ ಸ್ವಲ್ಪ ಸ್ವಲ್ಪವಾಗಿ ಅರಿವಾದಂತೆ, ಅವಳು ಜೋರಿನಿಂದ ಬಿಕ್ಕುವುದಕ್ಕೆ ಆರಂಭಿಸಿದಳು. “ಅಳಬೇಡ ಸರಸು... ಅಳಬೇಡ ಕಂದ” ಎಂದು ಮಗುವನ್ನು ಸಂತೈಸುವಾಗ ತಾವೂ ಗದ್ಗದಿತರಾಗಿ, ಶಾಸ್ತ್ರಿಗಳು ಆ ಬ್ರಾಹ್ಮಣರ ತಂಡವನ್ನು ತಮ್ಮ ಮನೆಯೊಳಗೇ ಬಿಟ್ಟು ಹೊರನಡೆದರು. ಆ ಗುಂಪಿನಲ್ಲಿ ಯಾರೋ ಅಂದೇ ಅಂದರು: “ಅವಳು ಮಾಡಿದ ಪಾಪಕ್ಕೆ ದೇವರೇ ಶಿಕ್ಷೆ ಕೊಟ್ಟ, ನಾವು ಮಾಡಬೇಕು ಅಂತ ಇದ್ದದ್ದನ್ನ ಆ ದೇವರೇ ಮಾಡಿದ ಹಾಗಾಯಿತು!” ಊರಿನ ಎಲ್ಲ ಬಾವಿಗಳು, ಕೆರೆಕಟ್ಟೆಗಳು, ತೋಟದ ಕೊಳಗಳು, ನೆಲ ಬಾವಿಗಳು ಎಲ್ಲೆಡೆಯೂ ಶೋದಿಸಿಯಾಯಿತು. ದಿನಗಳು ಕಳೆದುಹೋದವೇ ವಿನಯ ರುಕ್ಕಿಣಿಯೂ ಮಾತ್ರ ಎಲ್ಲೂ ಸಿಗಲಿಲ್ಲ. ಅವಳು ಎಲ್ಲಿಗೆ ಹೋದಳೆಂಬ ಸುಳಿವೂ ಸಹ ಹತ್ತಲಿಲ್ಲ. ಅವಳು ಬಾವಿಗೊ ಕೆರೆಗೆ ಬಿದ್ದಿರಬೇಕು ಎಂದು ಹೇಳುತ್ತಿದ್ದವರ ಮಾತು ಸುಳ್ಳಾಯಿತು. ಯಾಕೆಂದರೆ ವಾರಗಳು ಉರುಳಿದರೂ ಯಾವ ಕೆರೆ, ಕಟ್ಟೆ, ಬಾವಿ, ಕೊಳಗಳಿಂದಲೂ ರುಕ್ಕಿಣಿಯ ಹೆಣ ತೇಲಲಿಲ್ಲ.... ರುದ್ರಪಟ್ಟಣ, ಭೀಮನಳ್ಳಿಗಳಿಗೂ ಹೋಗಿ ಬಂದದ್ದಾಯುಇತು, ಎಲ್ಲೂ ಅವಳಿಲ್ಲ. ವೈಣಿಕ ಶ್ಯಾಮ ಕೆಲವು ದಿನಗಳಿಂದಲೂ ಊರಿನಲ್ಲಿದ್ದವನು ಮೈಸೂರಿಗೆ ತುರ್ತಾಗಿ ಹೋಗಬೇಕಾಗಿದೆಯೆಂದು ರುಕ್ಕಿಣಿ ಕಾಣೆಯಾದ ಹಿಂದಿನ ಸಂಜೆಯೇ ಊರು ಬಿಟ್ಟಿದ್ದನಂತೆ, ಅವನೇನಾದರೂ ಹಿಕಮತ್ತು ಮಾಡಿ ರುಕ್ಕಿಣಿಯನ್ನು ಹಾರಿಸಿಕೊಂಡು ಹೋಗರಬಹುದೆ? ಎಂದು ಕೆಲವರ ಸಂದೇಹ, ಆ ಸಂದೇಹ ಪರಿಹರಾರ್ಥವಾಗಿ ಮೈಸೂರಿಗೂ ಕೆಲವರನ್ನು ಕಳಿಸಿ ಶ್ಯಾಮನ ಮನೆಯಲ್ಲಿ ಸಪಾಸಣೆ ಮಾಡಿದ್ದಲ್ಲದೆ, ಮೈಸೂರು ಮತ್ತು ಹುಣಸೂರು ಪೋಲೀಸ್ ಸ್ಟೇಷನ್ನುಗಳ್ಳಿ ಕಂಪ್ಲೇಂಟ್ ದಾಖಲೆ