ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಶಾಖ ಕಾಲಗಳ ನೆಕ್ತಾ ಇದ್ದ ದೊಡ್ಡನ ಹಚಾ ಅಂತ ಓಡೀಸ್ಟ, ಅಲ್ಲಿ ಮಸ್ತಾಗಿ ಬಿಟ್ಟಿದ್ದ ದಪ್ಪದಪ್ಪ ಕಲ್ಲುಗಳ ಅವಳ ಸುತ್ತ ಒಂದೊಂದಾಗಿ, ಒಂದರಮ್ಯಲೊಂದ ಇಡಕ್ಕೆ ಸುರುಮಾಡಿದ. ಲಕ್ಕ ಹಿಮಗೆ ಕಲ್ಲುಸ್ಯವೆ ಮಾಡ್ತಿರೋನಾಗ, ಬೊಡ್ಡ ಕ್ಲಯಾಣಿಯ ಹೆಣದ ನಡುವಿನ ತಾವಿಕೆ ನಗೆದು ನೆಗೆದೂ ಕೆಳಕ್ಕೆ ತುಪ್ಪನೆ ಬೀಳಿದ್ದದ್ದು, ಒಂದು ಪದ ಲಕ್ಕ ಕಲ್ಲುಗಳ ಎತ್ತಿಗಂಡು ಬರಕ್ಕೆ ಹ್ವಾದ ಸಮಯ ಕಾದು ಆ ಹೆಣದ ಸ್ವಾಲೆ ನೆರಿಗೇಯ ಕಚ್ಚಿ ಏಳೀತು, ಆಗ ನೆರಿಗೆ ಬಿಟ್ಟೋಗಿ, ರೊಟ್ಟಿಗಳು ಕೆಳಿಕೆ ಬಿದ್ದದ್ದು ಕಾಣಿಸದೆ ಇದ್ರೂವೆ, ಸದ್ದಿನಲ್ಲಿ ಸ್ವತ್ತುಮಾಡಿಕಂಡು, ಸ್ಯಾಲೆ ಕೆಳೆ ನುಸುದು, ರೊಟ್ಟಿ ಕಚ್ಚಿ, ಈಚೆ ಎಳಕತ್ತು. ಲಕ್ಕ ಇದೇನು ಗಲಾಟೆ ಅಂತ ತಿರುಗಿ ಕ್ವಾಡ್ಡ, ಕ್ವಾಪ ಅತ್ತಿ, ಒಂದು ಸಣ್ಣಕಲ್ಲು ಎತ್ತಿ ಅದರ ಮ್ಯಾನೆ ಬೀಸ, ರೊಟ್ಟಿ ಕಚ್ಚಿದಂಗೇಯ ಬೊಡ್ಡ ದೂರಕೆ ಓಡೋಗಿ ತಿಂತಾ ನಿಂತುಕತ್ತು. “ಮಾಳೊತ್ತದ್ದಕ್ಕೆ ಬಕಾಸುರನ ವೊಟ್ಟೆ...” ಅಂತ ಬೈಕೊತ್ತ, ಬೊಡ್ಡನ ಜಗಾಗಟದಲ್ಲಿ ಬಿಚ್ಚಿದ ಅವ್ವನ ನೆರಿಗೆ ಸರಿಪಡಿಸ್ತ ಇರೋನೂವೆ, ಅವ್ವನ ವೊಕ್ಕಲದ ಸುತ್ತ ರೊಟ್ಟಿ ಆಗಲಕ್ಕೆ ಸುತ್ತೋಗಿ, ಗುಂಡಗಿನ ಗಾಯದ ಕಪ್ಪುಕಲೆ ಕಾಣುಸ್ತು, ಲಕ್ಕ ಬೆಟ್ಟೋದ, ಅವಸ್ಥೆ ಈಗ ವೋಳೀತು-ಅವ್ವ ತತ್ತಿದ್ದ ರೊಟ್ಟಿ, ಇಲ್ಲೆ ಬರೋಗಂಟ ಅದೆಂಗೆ ಬೆಚ್ಚಗೆ ಇರಿದ್ದೂ ಅಂತ!... ಇನ್ನೂ ಬಿಸಿಯಾಗಿದ್ದಂಗೇಯ ರೊಟ್ಟಿಗಳ ಮೊಡಿಸಿ ತನ್ನ ನೆರಿಗೈ ಸೆಕ್ಯುಸಿ ತತ್ತಿದ್ದಲು, ಕಿಬ್ಬಟ್ಟೆ ನೆರಿಗ್ಗೆ ನಡೂಮದ್ಯ ಅವು ತಮ್ಮ ಸಾಖ ಕಳಕೊಳ್ಳದೆ ಬೆಚ್ಚಗೆ ಇರಾ ಇದ್ದೂ... ಒಕ್ಕ ಅವ್ವನ ವೊಕ್ಕಳದ ಸುತ್ತ ಕಯ್ಯಡುಸ್ಲ, ೦ಲ್ಲನೆ ಕಣ್ಣಲ್ಲಿ ನೀರು ಬಸೀತು... ಅವ್ವ, ತನಗಾಗಿ ಅದೇಟು ಕ್ರಮ ತಕ್ಕತಿದ್ದಲು... ಮಗ ತಿನ್ನಬೇಕು, ಸುಕವಾಗಿರಬೇಕು. ಚೆಲುವಿಯ ಲಗ್ಗಮಾಡಿ, ಮೊಮ್ಮಗ ತತ್ತುಗಾಬೇಕು!... ನಾ ಚಿಕ್ಕೋನಾಗಿರೋ ಕಾಲದಿಂದ್ಧೂವೆ ಇದೊಂದೆ ಜಪ ಅವಳೆ... ಇವತ್ತು ಅನ್ನದ ಮಗ, ನಳಿಕೆ ಚಿನ್ನದ ಮಗ-ಅಂತ ತನ್ನ ಮೊಟ್ಟೆ ಕಟ್ಟಿ ಸಕಿದ್ದು... ನಂಗೆ ಗೆಪ್ತಿ ಇರೊ ಅಂಗೆ, ತಾನು ಅಸಿದಿದ್ರೂವೆ, ಒಂಜಿನ ಅದ್ರೂ ಲಕ್ಕ ಅಸಿದಿರಕ್ಕೆ ಬುಡ್ತಿರನಿಲ್ಲ. ಎಲ್ಲಿಂದಲೋ ಸಾಲ ಸೋಲ ಮಾಡಿ ತಂದಾಕಿ, ಅಮ್ಮಾಕೆ ಆ ಸಾಲ ತೀರುಸಕ್ಕೆ ತನ್ನ ಮೈ ಮುರುದು ಗೇಯಿಸಿದ್ದು.... ಆಗ ದ್ಯಾವ್ಯಜಿ ಕುಸಾಮತ್ತಿಗೆ ಅಂತಿದ್ದಲು? “ಊ-ನೀನು ಇಂಗೆ ತಿನ್ನದೇಯ, ಇವುಸ್ಥೆ ತಿನ್ನುಸಿ ತಿನ್ನುಸಿ, ಇವುನ ಅಂಡ ದಪ್ಪ ಮಾಡು. ಕೊನೀಕೆ ಇವನೇ ನಿನ್ನ ತಿಕ್ಕೆ ಗೇರು ಉಯ್ತಾನೆ...”