ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ಮೆಳೆ ಮರೇಲಿ ಕುಂತ...ಆ ವಯಸ್ಸಲ್ಲಿ ಬಿಸಿಬಿಸ್ಕಾಗಿ ಸ್ಯಾವಿಗೆ ವತ್ತಿದಂಗೆ ಇಂದಿನಿಂದ ತೊಡೆಗಳ ಸಂದೀಲಿ ಈಚೆ ಕಡೆಯೋವ್ರ ಬಗ್ಗೆ ಬಗ್ಗೆ ಕ್ವಾಡ್ತಾ ಇರಕ್ಕೆ ಕುಸಿಯೋ ಕುಸಿ: - ನ್ಯಾಡ್ತಾನೆ ಇದ್ದ. ಒಂದು ದಪ್ಪನೆ ಕೊಂತ ಬಿತ್ತು. ಅದರ ಇಂದೇಯ ಒಂದು ಉದ್ದಾನೆ ಎರೆ ಉಳ- ಇನ್ನೂ ಜೀವ ಇರಾದು!- ತಿಕದಿಂದ ಅರ್ಧ ಈಚೆಗೆ ಬಂದು, ಹಾವಿನಂಗೆ ಆಚೆ ತೊಡೆ ಕಡಿಂದ ಈಚೆ ತೋಡೇಗೆ ಬಡಿದಾಡಿ ನುಲಿದಾಡ್ತ ಇತ್ತು... ಲಕ್ಕ ಹಾವು ಅಂತಾನೆ ಬ್ರಮುಸಿ- “ಹಾವು...ಹಾವು!” ಅಂಚ ಗಟ್ಯಾಗಿ ಅರಚಿ, ನಿಂತ ಜಾಗ್ಗಲ್ಲೇ ತಕಪಕ ಕುಣಿದಾಡಿದ್ದ. ಆಟಗುಳಿ ಹೈಕಳು ಎಮ್ಮೆ ದನಗಳ ಮೇಯಕ್ಕೆ ಬುಟ್ಟು ಯಾವುದೋ ಆಟ ಆಡ್ತಿದ್ರುವು ಲಕ್ಕ ಹಾವೂಂತ ಕಿರುಚಿದ ಕೂಡ್ಲೆ ಆ ಕೂಗು ಕ್ಯಾಳಿ ಒಂದೇ ಉಸುರೆ ವಾಟ ವೊಡದು ಅವು ನಿಂತಿದ್ದ ತಾವಿಗೆ ಬಂದೋ-ನ್ಯಾಡಿದ್ರೆ- ಚಡ್ಡ ಬಿಚ್ಚಾಕಿ, ಒಂದು ಕಯ್ಲಿ ಇಡುದು, ಬೆತ್ತಾನೆ ಮರಿ ಕುಣ್ಯ ಕುಣಿತಾ ಅವೈ... ಇನ್ನೂ ಸಮೀಪ ಬಂದು ಸ್ವಾಡಿದಾಗ ವಸಿ ಹೈಕಳು ಹಾವೊಂತಾನೆ ಎದರಿ ದೂರದೂರೆ ವೋದೊ. ಅದರಾಗೆ ಆ ಎಣ್ಣು, ಗಂಗಿಯೇ ಧೈರ್ಯ ಮಾಡಿದೋಳು... ಅವ್ವ ನಮ್ಮೆಲ್ಲಾರಿಗಿಂತ ದೊಡೋಳು. ಆಗ್ಗೆ ಎಣ್ಣಾಗಕ್ಕೆ ಬತ್ತಾ ಇದ್ದು... ಏಡು ವಣುಗಿದ ಕಡ್ಡಿಗಳ ಮೆಳಿಂದ ಮುತ್ತು, ಏಡು ಕಡ್ಡಿಗೂ ಎರೆ ಹುಳುವ ಇಕ್ಕಳಿಕ್ಕೆ ಸಿಕ್ಕಸ್ಟಂಗೆ ಸಿಕ್ಕುಸಿ, ಈಚೆಗೆ ಎಳದಾಕಿ- “ಇದಕ್ಯಾಕೊ ಲಕ್ಕ ಈ ಪಾಟಿ ಎದರಿ ಎಪ್ಪಳಿಸೋದೆ? -ಸ್ವಾಡು, ಇದು ಹಾವಲ್ಲ... ಎರೆಹುಳ!”... ಕೆದಕಿ ಕೆದಕಿ, ತೋರಿದ್ದು... ಅಲ್ಲೀಗಂಟ ಇಲ್ಲಿದ್ದ ನಾಚಿಕೆ, ಎರೆಹುಳ ಈಚೆ ಕಡೀಲ್ಲೆ, ತನ್ನ ಮುತ್ತುಗಂಡಿತ್ತು. ಆತ್ರ ಎಲ್ಲೂ ನೀರು ಸಿಕ್ಕದೆ, ತಮ್ಮೂರ ದೊಡ್ಡಕೆರೆ ತಾವಿಕೆ ಓಡೋದ, ಸರಸರ ತಿಕ ತೊಳದು, ಚಡ್ಡಿ ಸಿಕ್ಕುಸಿ, ಇಂದ್ರೆ ಓಡೋಗಿ ಕ್ವಾಡಿದ್ರೆ- ತನ್ನೆಮ್ಮೆಗಳೇ ಕಾಣುತ್ತಿಲ್ಲ.... ಬಾಕಿಯೋರ ಎಮ್ಮೆ ದನಗೋಳೆಲ್ಲ ವೋಟೋಟು ದೂರಕೆ ಮೇಯಾ ಇದ್ರೋ!... ಜೀವ ಹಚಾಡು ಪಚಾಡಾಗಿ ಮೆಳೆಗಳ ಸಂದುಸಂದೀಲೂ ತಡಕಾಡ್ಡ, ತನ್ನ ಎಮ್ಮೆಗಳು ಮಾತ್ರ ಯಾತಾವೂ ಕಾಣಿಲ್ಲ. ತನ್ನ ಜೊತೆಗಾರ ಹೈಕಳೂವೆ, ಪಾಪ- ಅವೂವೆ ಒಂದು ಮೆಳೆ ಸಂದನೂ ಬುಡದೆ ಸೋಸಿ ಸೋಸಿ ಬೆಪ್ರಾದೊ, ಯಾತಾವೂ ಎಮ್ಮೆಗಳ ಸುಳುವೇ ಇಲ್ಲ!- ಸಂದೆ ದನ ಅಟ್ಟಿ ಊರಿಗೆ ಇಂತಿರುಗೊವರಿಗೂ ಉಡುಲ್ಲೊ. ಸಿಕ್ಕನೇ ಇಲ್ಲ. ಹ್ಯಾಪಮ್ಹಾರೆ ಅಕ್ಕಂಡು ವೊತ್ತೂ ಗಿನ್ವಾಡ್ಲಿ? ಅನ್ನುಸ್ತು. ದುಕ್ಕ ನಳುನ್ನಿಂದ ವತ್ತೊತ್ತಿ ಏಡು ಕಣ್ಣನೂವೆ ತುಂಬಿಕತ್ತು, ಊರು ಮುಟ್ಟತ್ತೂವೆ ಮೊದ್ಲು ಸಿಕ್ಕೋದೆ ವೊಲಗೇರಿ, ಲಕ್ಕ ಮೆತ್ತಗೆ