ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೮ ವೈಶಾಖ ದೀಪಾವಳಿಯ ನೆನಪು ಅವಳ ಸ್ಮತಿಪಟಲದ ಮೇಲೆ ಹಾದುಹೋದಂತೆ, ಆ ರಾತ್ರಿ ದರುಮನಳ್ಳಿಯ ಮನೆಮನೆಯ ಮುಂದೆಯೂ ಬೆಳಗಿದ ಹಣತೆಯ ಸಾಲು ತೊಡರುಗಳು, ಹೊತ್ತಿಸಿದ ಪಂಜು ಹಿಡಿದು ಊರಿನೊಳಗೆ ಹಾಡುತ್ತ ಸಾಗುವ ಯುವಕರ ತಂಡ, ಪಾಣವಾಳದ ಬೆಂಡುಗಳನ್ನು ಬೆಂಕಿಯಿಂದ ಕಾಯಿಸಿ ಆ ಬೆಂಡುಗಳನ್ನು ಕುಟ್ಟಿ ಕಿಡಿಯೇಳಿಸುತ್ತ ಓಲಾಡಿ ಓಲಾಡಿ ಊರಿನ ನಡುವೆ ಹಾಡುತ್ತ ಕೂರುವ ಬಾಲೆಯರು-ಎಲ್ಲರೂ ಎಲ್ಲವೂ ಅವಳ ಕಣ್ಣಿಗೆ ಕಟ್ಟಿ ನಿಂತವು. ಆ ರಾತ್ರಿ ಊರಿಗೆ ಊರೇ ಧಿಗಿಧಿಗಿ ಉರಿಯುತ್ತ ಬೆಳಕಿನ ಒಂದು ಮೋಹಕ ಜಾತ್ರೆಯನ್ನೇ ಸೃಷ್ಟಿಸಿದಂತಿತ್ತು. ಇವೆಲ್ಲದರ ಜೊತೆಗೆ ಮುದ್ದಿನ ಬಾಣಬಿರುಸುಗಳೂ ಸೇರಿ, ಊರು ಒಂದು ಕಿನ್ನರನಗರಿಯೇ ಆಗಿತ್ತು. ಊರಿನಲ್ಲಿ ಎಲ್ಲೆಲ್ಲೂ ಉತ್ಸಾಹ, ಸಡಗರ, ಆನಂದ... ಆದರೆ ಅಂದು ಅವಳ ಅಂತರಾಳದೊಳಗೆ ಮಾತ್ರ ಕಗ್ಗತ್ತಲು. ತನ್ನ ನೆಲನಿಲ್ಲದ ಆ ಬೆಳಕಿನ ಹಬ್ಬ ಅವಳ ಎದೆಯೊಳಗೆ ಸಂಭ್ರಮದ ಹಣತೆ ಹಚ್ಚಲು ಅಸಮರ್ಥವಾಗಿತ್ತು... ೭ ರುದ್ರಪಟ್ಟಣ ರುಕ್ಕಿಣಿಯಿಲ್ಲದ ಮೂರು ವರ್ಷದಲ್ಲಿ ಅಂಥ ಬದಲಾವಣೆಯನ್ನೇನೂ ಕಂಡಿರಲಿಲ್ಲ. ಅದೇ ಕಾವೇರಿ ನದಿ, ನದೀತೀರದ ಅದೇ ಶ್ರೀ ಪ್ರಸನ್ನ ರಾಮೇಶ್ವರ ಗುಡಿ, ಊರೊಳಗಿನ ಅದೇ ಶ್ರೀ ಚೆನ್ನಕೇಶವ ದೇವಾಲಯ ಮತ್ತು ರಾಮಮಂದಿರ. ಊರ ಹೊರಗೆ ನದಿಗೆ ಅನತಿ ದೂರದಲ್ಲಿ ರಕ್ತರಂಜಿತ ವರ್ಣದಲ್ಲಿ ರೌದ್ರಾವತಾರಿಯಾಗಿ ನಿಂತ ಬೃಹದ್ಗಾತ್ರದ ವೀರಾಂಜನೆಯ ಮೂರ್ತಿ, ಸಮೀಪದಲ್ಲೆ ಮಾರಿಗುಡಿ, ಆದರಿಂದ ಕೊಂಚ ದೂರಕ್ಕೆ ತಲೆಹೊಟರಾಯ. ಹೆಂಚು ಕೌಚಿದ, ಒಳಗೆ ಉಯ್ಯಾಲೆ ತೂಗುವ ಅದೇ ಬ್ರಾಹ್ಮಣರ ತೋಟಿಮನೆಗಳು. ಅದೇ ಗಡಾರಿಗೌಡರ ಮಾರ. ಅವೇ ಗಂಗಡಕಾರರ, ಮುಸಲ್ಮಾನರ, ಗಂಗಮತದವರ, ಮರಾಠಿಗರ, ಹರಿಜನರ, ಮತ್ತಿತರರ ಕೇರಿಗಳು. ಅವು ಯಾವುದರಲ್ಲೂ ಆಗೂ ಈಗೂ ಅಂಥದೇನೂ ವ್ಯತ್ಯಾಸ ಕಾಣದುಹೆಚ್ಚೆಂದರೆ, ತನಗೆ ಪರಿಚಿತರೂ ಆಪ್ತರೂ ಆದವರಲ್ಲಿ ಕೆಲವರು ಈಗ ಅಲ್ಲಲ್ಲಿ. ಕೆಲವರು ಮೃತರಾಗಿದ್ದರು. ಇನ್ನು ಕೆಲವರು ಊರು ಬಿಟ್ಟು ಮೈಸೂರು, ಬೆಂಗಳೂರು, ಬೊಂಬಾಯಿ, ದೆಹಲಿ ನಗರಗಳಲ್ಲಿ ತೆರಳಿ ಅಲ್ಲೇ ನೆಲೆಸಿದ್ದಾರೆ. ಹಾಗೆ ನೆಲೆಸಿದವರಲ್ಲಿ ಸಂಗೀತಶಿಖಾಮಣೆಗಳಾಗಿ ಮೆರೆದವರು ಕೆಲವರು, ಸರ್ಕಾರಿ ನೌಕರಿ ಹಿಡಿದು ವಿಖ್ಯಾತರಾದವರು ಹಲವರು...