ಕಾದಂಬರಿ ಸಂಗ್ರಹ ತರಿಸಿ : ಇದರಲ್ಲಿರುವುದನ್ನು ನೀವು ತಿಳಿಸಬೇಕು; ಯಾರಮಾತು ಸುಳ್ಳಾಗುವುದೋ ಅವರನ್ನು ಕಲ್ಲು ಗಾಣಕ್ಕೆ ಹಾಕಿಸಿ ಅರೆಯಿಸುತ್ತೇನೆ. ” ಎಂದು ಹೇಳಿ ಸಭೆಯನ್ನು ಬೀಳ್ಕೊಟ್ಟನು. ಉಭಯಪಕ್ಷದವರೂ ಸ್ವಸ್ವಗೃಹಾಭಿಮುಖರಾದರು, ಸೌಗತರು ಆ ರಾತ್ರಿ ಯೆಲ್ಲಾ ಒಂದು ಕೊಳದಲ್ಲಿ ಕಂಠಪರ್ಯಂತ ನೀರಿನಲ್ಲಿ ನಿಂತು ಸೂರ್ಯನಂ ಕುರಿತು ತಪವಂ ಗೈದು ನಿಶ್ಚಿತಾಂಶವನ್ನು ಸೂರ್ಯದೇವನಿಂದ ತಿಳಿದು ರಾಜನ ಸಭೆಗೆ ಪ್ರಾತಃ ಕಾಲ ಹೊತ್ತಿಗೆಮುಂಚೆ ಬಂದರು, ಬ್ರಾಹ್ಮಣರು ಆ ರಾತ್ರಿಯೆಲ್ಲಾ ಸುಖವಾಗಿ ನಿದ್ರೆಮಾಡಿ ಸ್ವಕರ್ಮಾನಂತರ ರಾಜನ ಸಭೆಗೆ ಬಂದರು, ಸೌಗತರೂ ಆ ಕುಂಭದಲ್ಲಿ ಕರೀಘಟಸರ್ಪವಿದೆ ಎಂದರು. ಬ್ರಾಹ್ಮಣರು ( ನನ್ನ ಒಂದಂಶದಿಂದ ಈ ಪ್ರಪಂಚವನ್ನೆಲ್ಲಾ ವ್ಯಾಪಿಸಿದ್ದೇನೆ ” ಎಂಬ ಭಗವದ್ಯಾಪ್ರಾಮಾಣ್ಯದಿಂದ ಕುಂಭದಲ್ಲಿ ಸರ್ಪಶಾಯಿಯಾದ ಮಹಾವಿಷ್ಣು ವಿರುವನೆಂದರು. ರಾಜನು ಬ್ರಾಹ್ಮಣರನ್ನು ಕೊಲ್ಲಿಸಬೇಕೆಂದು ಬಹಳ ಬಿನ್ನ ನಾದನು. ಸೌಗ ತರು ಆ ಸರ್ಪದಿಂದಲೇ ಭಟ್ಟಪಾದನನ್ನು ಕೊಲ್ಲಿಸಬೇಕೆಂದು, ( ನಿನ್ನ ಮಾತು ನಿಜ ವಾಗಿದ್ದರೆ ಆ ಕುಂಭದಿಂದ ವಿಷ್ಣುವನ್ನು ತೆಗೆ ಎಂದರು. ಆ ಕುಂಭದಿಂದ ಶೇಷಶಯನನಾದ ವಿಷ್ಣು ಪ್ರತಿಮೆಯನ್ನು ತೆಗೆದು ತೋರಿಸಿದರು. ಅನಂತರ ರಾಜನು ಸೌಗತರನ್ನೆಲ್ಲಾ ಕೊಲ್ಲಿಸಿಬಿಟ್ಟನು. -~~೨೨೫೯--- M (೧ ಜ ದ್ವಿತೀಯವಲ್ಲರೀ ಕೇರಳೀ ಸರಳೇ ದೇಲೆ ಕರುಣಾನೀರಧಿಃ ಶಿವಃ | ಪೂರ್ಣಾನದೀಪುಣ್ಯತ ಸ್ವಯಂಭೂ ರ್ಭಾತಿ ಸಂತತಮ್ || ತಿಪಕ್ಷ CX4 # ರಳದೇಶದಲ್ಲಿ ವೃಷಭಾಚಲದೊಳಗೆ ಇರುವ ಪುರ್ಣವಾಹಿನೀನದಿಯ 191 ದಡದಲ್ಲಿ ಮಹೇಶ್ವರನು ಜ್ಯೋತಿರ್ಲಿಂಗರೂಪದಿಂದ ಅವತರಿಸಿದ್ದನು. ಹಿಂದೆ ದೇವರ ಭಕ್ತರವಾಂಛಿತಾರ್ಥಗಳು ಕೊಡುತ್ತಾ ಪ್ರಸಿದ್ಧನಾಗಿ
ಪುಟ:ಶಂಕರ ಕಥಾಸಾರ.djvu/೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.