ಶಂಕರಕಥಾಸಾರ ಕೌಸಿಯು ರಾಮನನ್ನು ಪಡೆದಂತೆಯೂ, ದೇವಕಿಯು ಶ್ರೀ ಕೃಷ್ಣನಂ ಪಡೆದಂತೆಯೂ, ಅದಿತಿದೇವಿಯು ವಾಮನಮೂರ್ತಿಯಂ ಪಡೆಯದಂತೆಯೂ ಪಾರ್ವತಿಯು ಕುಮಾರಸ್ವಾ ಮಿಯಂ ಪಡೆದಂತೆಯೂ, ಸುದಕ್ಷಿಣಾದೇವಿಯು ರಘುಮಹಾರಾಯನನ್ನು ಪಡೆದಂತೆ ಯ, ಶಿವಗುರುಪತ್ನಿ ಯಾದ ಆರ್ಯಾಂಬೆಯು, ಗ್ರಹಗಳೆಲ್ಲವೂ ಉಚ್ಚಸ್ಥಾನದಲ್ಲಿರು ವಾಗ, ಚಿದ್ರೂಪನಾದ, ಲೋಕಶಂಕರನನ್ನು ಶುಭಮುಹೂರ್ತದಲ್ಲಿ ಪ್ರಸವಿಸಿದಳು. ಆ ಶಿವನ ಜನ್ಮದಿಂದ ಮಳೆಇಲ್ಲದಿದ್ದರೂ ಕಾಡುಗಿಡ್ಡು ಶಾಂತವಾಯಿತು. ಪ್ರಾ ಣಿಗಳೆಲ್ಲವೂ ತಮ್ಮ ತಮ್ಮ ಶತ್ರುಗಳನ್ನು ಮಿತ್ರರನ್ನಾಗಿ ಗಣನೆಮಾಡಿದವು. ಅಕಾಲವಾದ ರೂ, ವೃಕ್ಷಗಳೆಲ್ಲಾ ಫಲ ಪುಷ್ಪಭರಿತವಾದವುಹೋಮ ಕುಂಡದಯಣ್ಣೀಶ್ವರನು ಪ್ರದ ಕ್ಷಿಣಾಕಾರವಾಗಿ ಹವಿಸ್ಸನ್ನು ತೆಗೆದುಕೊಂಡನು. ಸೌಗತಾದಿಗಳ ಕೈಲಿದ್ದ ಪುಸ್ತಕಗಳು ಕೆಳಗೆ ಬಿದ್ದವು. ದುರ್ಮತ ಪ್ರವರ್ತಕರಾದ ಕಾಪಾಲಿಕರೇ ಮೊದಲಾದವರ ಕಣ್ಣುಗಳು ಮಂಜಾದವು. ಬ್ರಾಹ್ಮಣರ ಮನಸ್ಸಿನಲ್ಲಿ ಸಂತೋಷ ಉಕ್ಕಿತು. ಈ ಶಿಶುವಿನ ಜನನವಾ ದಕೂಡಲೇ ಅಲ್ಲಿದ್ದ ದೀಪಗಳೆಲ್ಲಾ ಚಿತ್ರ್ರಾ ತಪ್ರತಿಮೆಗಳಂತಾದವು. ಅಲ್ಲಿ ಒಂದು ವಿಧವಾದ ಕಾಂತಿಯುಂಟಾಯಿತು. ಶಿವಗುರುವು ಮಗುಹುಟ್ಟಿತೆಂಬ ಶುಭವಾಕ್ಯವನ್ನು ಕೇಳಿದ ಕೂಡಲೇ ಸ್ನಾನ ಮಾಡಿಬಂದು ಮಗುವಿಗೆ ಚಾತಕರ್ಮಾದಿಗಳನ್ನು ಮಾಡಿ ಬ್ರಾಹ್ಮಣರಿಗೆ ಅನೇಕಭೂ ಗೋ ಹಿರಣ್ಯದಾನಗಳನ್ನಿತ್ತನು. ಜ್ಯೋತಿಷಿಕರು ಚಾತಕವನ್ನು ಬರೆದರು. ಅದರಫಲವಷ್ಟೆಂದು ಹೇಳಲೂ ಆವ ರು ಶಕ್ತರಾಗಲಿಲ್ಲ. ಒಂದುದಿನ ಆಮಗುವು ತೊಟ್ಟಲಿನಲ್ಲಿ ಆಟವಾಡುತ್ತಿರುವಾಗ ಆದಿಶೇಷನು ಆ ಮಗುವನ್ನು ಸೇವಿಸುತ್ತಿದ್ದನು ತೊಟ್ಟಲಿನಲ್ಲಿ ಸರ್ಪಸಿರುವುದನ್ನು ಮನೆಯವರು ಕಂಡು ಘಾಬರಿಯಿಂದ ನೋಡುವಲ್ಲಿ ಅದು ರುದ್ರಾಕ್ಷಮಾಲೆಯಂತೆ ಕಾಣಬಂದಿತು. ಅನಂತರ ಅವರು ಇದೆಲ್ಲಾ ದೇವರ ಮಾಯೆಯೆಂದು ತಿಳಿದರು. ಒಂದುದಿನ ಮಗುವು ಯಾರಕಣ್ಣಿಗೂ ಕಾಣದೇ ಮಾಯವಾಯಿತು. ಎಲ್ಲರೂ ಹುಡುಕಲಾರಂಭಿ ಸಿದರು. ಆಗ ಓರ್ವ ವೃದ್ಧನು ಸಾಮಗಾನವಂ ಮಾಡುತ್ತಾ ಬಂದು ಅಲ್ಲಿ ಇದ್ದ ಒಂದು ಕಾಂಡವನ್ನು ಯಾಚಿಸಿದನು. ಅವನು ಅದನ್ನು ಮುಟ್ಟದಕೂಡಲೇ ಅದು ಒರಿದುಹೋಯಿತು. ಅದರ ಒಳ ಗಣಿನಿಂದ ಶಿಶುವು ಹೊರಕ್ಕೆ ಬಂದಿತು. ಎಲ್ಲರೂ ಆ ಮಗುವಿಗೆ ಅನೇಕ ರಕ್ಷಾದಿಗಳ ನ್ನಿಟ್ಟು ತಾಯಿಯ ಸಾಪಕ್ಕೆ ಕೊಟ್ಟರು. Y)
ಪುಟ:ಶಂಕರ ಕಥಾಸಾರ.djvu/೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.