ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಶಂಕರಕಥಾಸಾರ
೩೩

ಭಂಡೆಯ ಪೊಟರೆಯಲ್ಲಿಟ್ಟು, ಅದನ್ನು ಕಾಪಾಡುವಂತೆ ಶಿಷ್ಯರಿಗೆ ಹೇಳಿ ತಮ್ಮ ಆತ್ಮ
ವನ್ನು ಅಮರುಕರಾಯನ ದೇಹಕ್ಕೆ ಪ್ರವೇಶಗೊಳಿಸಲು, ಅಮರುಕರಾಯನು
ಮೂರ್ಛಹೋಗಿ ಎದ್ದವನಂತೆ ಎದ್ದನು.
ಅದನ್ನು ನೋಡಿ ಆ ರಾಜನ ಪೂರ್ವವಯಸ್ಕರೂ ಸುಂದರಿಗಳೂ ಆದ
ಪತ್ನಿಯರು, ಮತ್ತು ಮಂತ್ರಿಗಳು ಪುರೋಹಿತನಿಂದ ಅನೇಕ ಶಾಂತಿಕರ್ಮಗಳಂ
ಮಾಡಿಸಿ ರಾಜನನ್ನು ಮಂಗಳ ವಾದ್ಯಘೋಷದೊಡನೆ ಪಟ್ಟಣಕ್ಕೊಯ್ದರು.
ಆಚಾರರು ನೃಪತಿಯ ಬರದಲ್ಲಿದ್ದು ಬಹಳ ನೀತಿಯಿಂದ ರಾಜ್ಯವನ್ನಾ
ಳುತ್ತಾ ಅಂತಃಪುರದ ಕಾಂತಿಯು ಸಹವಾಸು ,ದ ಕಾಮಶಾಸ್ತ್ರವನ್ನು ತಿಳಿದರು.
ಇವರು ರಾಜ್ಯವಾಳ ತಕ್ಕ ಕಾಲದಲ್ಲಿ ಕಾಲಕಾಲಕ್ಕೆ ಮತಿಯಾಗಿ ದೇಶವೆಲ್ಲಾ ಸುಭಿಕ್ಷ
ವಾಗಿತ್ತು.
ಆ ಭೂಮಿಪಾಲನ ಪಟ್ಟ ಮಹಿಷಿಯಾದ ಕನಕಮಂಜುಯೆಂಬವಳು ಆತನ ಅಮಾ
ನುಷಪ್ರಜ್ಞಾ ವಿಶೇಷಕ್ಕೆ ಆಶ್ರವನ್ನು ಹೊಂದಿ, ತನ್ನ ಮಂತ್ರಿಯಂ ಕರೆದು ಅಯ್ಯ!
ಈ ಶರೀರವು ನಮ್ಮ ಪತಿ ಯವೇ ಹೊರತು ಆತ್ಮವು ಪತಿಯದಲ್ಲ. ಯಾವನೋ ಒಬ್ಬ
ಯೋಗಿವರ್ಯನು ನಮ್ಮ ಪತಿಯ ದೇಹವನ್ನು ಪ್ರವೇಶಿಸಿರುವಂತೆ ತೋರುತ್ತದೆ,
ಆದ್ದರಿಂದ ಈ ಪ್ರಾಂತ್ಯದಲ್ಲಿ ರತಕ್ಕೆ ಶವಗಳನ್ನೆಲ್ಲಾ ಸುಡಿಸಬೇಕೆಂದಾಜ್ಞಾಪಿಸಲು.
ಅವನು ಅದರಂತೆ ಸಿಕ್ಕಿದ ಶವಗಳನ್ನು ಸಹಿಸುತ್ತಾ ಶಂಕರಾಚಾರೈರ ಶವವಿದ್ವಸ್ಥ
ಳಕ್ಕೂ ಬಂದು, ಆಚಾರೈರ ದೇಹವನ್ನು ನೋಡಿ ಅದನ್ನೂ ಬೆಂಕಿಯ ಮೇಲಿಡಿಸಿದನು.
ಆಗ ಶಿಷ್ಯರು, ಆಚಾರರ ಸಮೀಪಕ್ಕೆ ಬಂದು ತತ್ತ್ವಮಸಿ,
ತಮಸಿ, ತಮಸಿ ರಾಜ! ಎಂದು ಸ್ತೋತ್ರಮಾಡಲು ಆಚಾರರು ಆ ದೇಹವನ್ನು
ಬಿಟ್ಟು ಗಿಣಿಯರೂಪದಿಂದ ಹಾರಿಬಂದು, ತಮ್ಮ ದೇಹವು ಸುಡುತ್ತಾ ಇರುವುದಂ
ಕಂಡು ಅದರಲ್ಲಿ ಪ್ರವೇಶಮಾಡಿ---
( 4 ಶ್ರೀಮತ್ಪಯೋನಿಧಿ ನಿಕೇತನಚಕ್ರಪಾಣೇ |
ಭೋಗೀಂದ್ರಭೋಗಮಣಿರಂಜಿತವುಣ್ಯಮೂರ್ತೇ ||
ಯೋಗೀಶ ಶಾಶ್ವತ ಶರಣ್ಯ ಭವಾಬಿ ಪೋತ |
ಲಕ್ಷ್ಮೀನೃಸಿ ಮಮ ದೇಹಿ ಕರಾವಲಂಬಮ'
11೧11. * ಭಕ್ತರಾದ ವಾಚಕರು ಆಚಾರರಿಂದ ರಚಿತವಾದ ಈ ಕರಾವಲಬ ಸತ್ಯವನ್ನು ನಿತ್ಯ
ಪಾರಾಯಣದಲ್ಲಿಡುವುದು ಶ್ರೇಯಸ್ಕರವು.