ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಕಾದಂಬರೀಸಂಗ್ರಹ ದರೆ ನಿನ್ನನ್ನು ಸಂಹರಿಸಿಬಿಡ ವರು. ಆದ್ದರಿಂದ ಅವರಿಲ್ಲದಿರುವ ಕಡೆಯಲ್ಲಿ ನಾನು ಸಮಾಧಿನಿಷ್ಠನಾಗಿರುವಾಗ ನಿನ್ನ ಭಿಲಾಷೆಯಂ ತೀರಿಸಿಕೋ ” ಎಂದರು, ಅದರಂತೆ, ಕಾಪಾಲಿಕನು ಅವರು ಒಬ್ಬಂಟಿಗರಾಗಿರುವ ಸಮಯದಲ್ಲಿ ಅಲ್ಲಿಗೆ ಹೋಗಿ ತಲೆಯನ್ನು ಕತ್ತರಿಸಬೇಕೆಂದು ಕತ್ತಿಯನ್ನೆಲು ಯೋಗನಿಷ್ಠರಾಗಿ ಕುಳಿತಿದ್ದ ಪದ್ಮಪಾದರು ಯೋಗಮಹಿಮೆಯಿಂದ ಆಚಾರರಿಗೆ ಸಂಭವಿಸಿದ ವಿಪತ್ತುಗಳನ್ನು ತಿಳಿದು ನೃಸಿಹ್ಮರೂಪದಿಂದ ಬಂದು ತನ್ನ ದರ್ಶನ ಮಾತ್ರದಿಂದಲೇ ಕಾಪಾಲಿಕನನ್ನು ಸಾಯು ವಂತ ಮಾಡಿದರು. ಅವನು ಬಿದ್ದ ಶಬ್ದದಿಂದ ಆಚಾರೈರು ಬಹಿರ್ಮುಖರಾಗಿ ಅಲ್ಲಿ ನಡೆದ ವಿಷಯ ವನ್ನೆಲ್ಲಾ ಅವನಿಂದ ತಿಳಿದು ನೀನ ನೃಸಿಹ್ಮನನ್ನು ಹೇಗೆ ಪ್ರತ್ಯಕ್ಷ ಮಾಡಿಕೊಂಡೆ ??? ಎನ್ನಲು ಪದ್ಮಪಾದರು “ ಗ.ರ.ಗಳೇ ! ನಾನು ಆಯೋಬಲದಲ್ಲಿ ನೃಹರಿಯಂ ಕುರಿತು ತಪಸ್ಸು ಮಾಡುತ್ತಿದ್ದೆನು. ಆಗ ದೆ: ರನು ಸ್ವಲ್ಪಕಾಲ ದರ್ಶನವನ್ನಿತ್ತು ಅದೃಶ್ಯನಾದನು. ನಾನು ಪುನಃ ಸ್ವಾಮಿಯಂ ಕಾಣಬೇಕೆಂದು ರ್ತಸ್ಸು ಮಾಡುತ್ತಿರಲು ಒಬ್ಬ ಬೇಡನು ಬಂದು “ ನೀನು ಹೀಗೆ ಏತಕ್ಕೆ ಶ್ರವಡುತ್ತಲಿರ 5 ? ' ಎಂದು ಪ್ರಶ್ನಿಸಿದಾಗ ನಾನು ನನ್ನ ಭಿಪ್ರಾಯವನ್ನು ತಿಳಿಸಲು ಬೇಡನು ಹೊರಗೆ ಹೋಗಿ ಸ್ವಲ್ಪಕಾಲದಲ್ಲಿ ನರಸಿಹ ನನ್ನು ಬಳ್ಳಿಗಳಿಂದ ಬಿಗಿದು ನನ್ನಲ್ಲಿಗೆ ತಂದನು. ಆಗ ನಾನು ಸ್ವಾಮಿಯನ್ನು ಪೂಜಿಸಿ ಕಾಡುಬೇಡನಿಗೆ ದೇವನು ವಶವಾದ ವಿಷ ಯವನ್ನು ಕೇಳಲು ಸ್ವಾಮಿಯು ಇವನು ನನ್ನನ್ನೆಲ್ಲರಿಗಿಂತಲೂ ಭಕ್ತಿಯಿಂದ ಭಜಿಸಿದ ನೆಂದು ಹೇಳಿ ಅದೃಶ್ಯನಾದನು ” ಎಂದನು, ಅದನ್ನು ಕೇಳಿ ಆಚಾರರು ನೃಹರಿಯಂಸ್ತುತಿಸಲಾಮಹಾತ್ಮನು ಪ್ರತ್ಯಕ್ಷನಾಗಿ ಸೌಮ್ಯರೂಪದಿಂದ ಪದ್ಮಪಾದರನ್ನ ನುಗ್ರಹಿಸಿ ಅಂತರ್ಧಾನವನ್ನು ಹೊಂದಿದನು. ಈ ಚರಿತ್ರೆಯನ್ನು ತ್ರಿಸಂಧ್ಯಾಕಾಲಗಳಲ್ಲಿಯೂ ಯಾರು ಪಠನೆಮಾಡುತ್ತಾ ರೋ ಅಥವಾ ಕೇಳುತ್ತಾರೋ ಅಂತಹರು ಅಪಮೃತ್ಯುವಿನಿಂದ ಬಿಡಲ್ಪಟ್ಟವರಾಗಿ ದೇವ ರಲ್ಲಿ ಭಕ್ತಿಯನ್ನು ಹೊಂದಿ ಇಹಲೋಕದಲ್ಲಿ ಸಕಲಭೋಗಗಳನ್ನೂ ಅನುಭವಿಸಿ ದೇಹಾಂತ್ಯದಲ್ಲಿ ಮೋಕ್ಷವನ್ನು ಹೊಂದುತ್ತಾರೆ. -- --+% ----

  • 3

M

  • -