ಈ ಪುಟವನ್ನು ಪ್ರಕಟಿಸಲಾಗಿದೆ



ಶಂಕರಕಥಾಸಾರ
೪೯

ಚಾರ್ಯರು, ಚಿದ್ವಿಲಾಸಾಚಾರ್ಯರು, ವಿಷ್ಣುಗುಪ್ತಾಚಾರ್ಯರು, ಶುದ್ಧ ಕೀರ್ತ್ಯಾಚಾರ್ಯರು,
ಭಾನುಮರೀಚ್ಯಾಚಾರ್ಯರು, ಕೃಷ್ಣದರ್ಶನಾಚಾರ್ಯರು, ಬುದ್ದಿ ವೃದ್ಧ್ಯಾಚಾರ್ಯರು, ವಿರಿಂಚಿ
ಪಾದಾಚಾರ್ಯರು, ಆನಂದಗಿರ್ಯಾಚಾರ್ಯರು, ಚಿತ್ಸುಖಾಚಾರ್ಯರು, ಶುದ್ಧಾಂತಾಚಾರ್ಯರು
ಮುನೀಶ್ವರಾಚಾರ್ಯರು, ಪರಮತಕಾಲಾನಲಾಚಾರ್ಯರು, ದಿವಾಕರಾಚಾರ್ಯರು, ಲಕ್ಷ್ಮಣಾ
ಚಾರ್ಯರು, ತ್ರಿಪುರಕುಮಾರಾಚಾರ್ಯರು, ಗಿರಿಜಾಕುಮಾಚಾರ್ಯರು, ಬಟುಕನಾಥಾಚಾ
ರ್ಯರು, ಶುದ್ಧಾನಂದಗಿರ್ಯಾಚಾರ್ಯರು, ಧೀಮದಾಚಾರ್ಯರು' ಇತ್ಯಾದಿ ಶಿಷ್ಯರಿಂದ
ಕೂಡಿ ಸುಧನ್ವರಾಜನಿಂದ ಹಿಂಬಾಲಿಸಲ್ಪಡುತ್ತಾ ಮೊದಲು ಸೇತುವಿನ ಕಡೆ ಹೊರಟರು.
ದಾರಿಯಲ್ಲಿ ಆಚಾರ್ಯರು ಮಧ್ಯಾರ್ಜುನಕ್ಷೇತ್ರಕ್ಕೆ ಬಂದು ಮಧ್ಯಾರ್ಜುನೇ
ಶ್ವರನನ್ನು ಪೂಜಿಸಿ "ಸ್ವಾಮಿಾ ! ನೀನು ಸರ್ವಜ್ಞನಾದ್ದರಿಂದ ನಿಗಮಾದಿ ತಾತ್ಪರ್ಯ
ಗೋಚರವಾದದ್ದು, ದ್ವೈ ತವೇ ? ಅಥವಾ ಅದ್ವೈತವೇ ? ಎಂದು ಪ್ರಾರ್ಥಿಸಲು,
ಈಶ್ವರನು ಮಧ್ಯಾರ್ಜುನೇಶಲಿಂಗದಿಂದ ಸಾಕಾರವಾಗಿ ದರ್ಶನವನ್ನು ಕೊಟ್ಟು ತನ್ನ
ಬಲಗೈಯನ್ನು ಮೇಲಕ್ಕೆತ್ತಿ ಗಂಭಿರವಾದ ಮಾತಿನಿಂದ " ಸತ್ಯ ಮದ್ವೈತಂ” ಎಂದು
ಮೂರುಸಲ ಹೇಳಿ ಅಂತರ್ಹಿತನಾದನು.

ಈ ಮಹದ್ವ್ಯಾಪಾರವನ್ನು ನೋಡುತ್ತಿದ್ದ ಜನರಿಗೆ ಬಹಳವಾದ ಆಶ್ಚರ್ಯ
ವಾಯಿತು.
ಅನಂತರ ಆ ದೇಶದಲ್ಲಿದ್ದವರೂ ಮತ್ತು ಆ ದೇವರ ಭಕ್ತರೂ ಶ್ರೀ ಶಂಕರ
ನನ್ನೇ ಸದ್ಗು ರುವನ್ನಾಗಿ ಮಾಡಿಕೊಂಡು (ಪಂಚ ಉಮಾ, ಗಣಪತಿ, ಈಶ್ವರ, ಸೂರ್ಯ,
ಅಚ್ಯುತ,) ಪೂಜಾರತರಾಗಿಯೂ, ಪ್ರಾತಸ್ನಾನಾದಿಗಳಿಂದ ವಿಶುದ್ಧರಾಗಿಯೂ, ಪಂಚ
ಯಜ್ಞಪರಾಯಣರಾಗಿಯೂ, ಶ್ರುತ್ಯುಪ್ತ ಕರ್ಮಾನು ಯಾಯಿಗಳಾಗಿಯೂ, ಶುದ್ದಾದ್ವೈತ
ಪರಾಯಣರಾಗಿಯೂ, ಆದರು.
ಹೀಗೆ ಆ ದೇಶದವರನ್ನು ಅದ್ವೈತಿಗಳನ್ನಾಗಿ ಮಾಡಿ ಪ್ರಮಥಗಣಯುಕ್ತನಾದ
ಈಶ್ವರನಂತೆ ಆಚಾರ್ಯರು ಶಿಷ್ಯಸಹಿತರಾಗಿ ರಾಮೇಶ್ವರಕ್ಕೆ ಹೋದರು.

ಶಾಕ್ತಮತಖಂಡನವು.

ಆಚಾರ್ಯರು ಅಲ್ಲಿರುವಾಗ್ಯೆ ಗಿರಿಜಾರ್ಚರತರಾದ ಕೆಲವರು ಬಂದು ಆಚಾರ್ಯ
ರೆದುರಿಗೆ ವಾದಕ್ಕೆ ನಿಲ್ಲಲು ಆಚಾರ್ಯರು ಅವರನ್ನು ಶ್ರುತ್ಯುಕ್ತ, ಪ್ರಮಾಣಗಳಿಂದ
ಗೆದ್ದು ಅವರನ್ನು ಅದ್ವೈತಿಗಳನ್ನಾಗಿ ಮಾಡಿದರು.