ಈ ಪುಟವನ್ನು ಪ್ರಕಟಿಸಲಾಗಿದೆ

೬೨

ಕಾದಂಬರೀಸಂಗ್ರಹ

ಅದಕ್ಕೆ ಶಂಕರರು“ನಿನ್ನಿಂದ ಚೆನ್ನಾಗಿ ಹೇಳಲ್ಪಟ್ಟಿತು ; ನೀನು ನನ್ನ ಸಮೀಪ
ದಲ್ಲಿಯೇ ಇರು ; ಪರೀಕ್ಷಾ ಸಮಯಬಂದಾಗ ನಿನ್ನನ್ನು ಕೇಳುತ್ತೇನೆ” ಎನ್ನಲು
ಅವನು ಹಾಗೆಯೇ ಆಗಲೆಂದು ಒಪ್ಪಿ ಅವರ ಸಮೀದಲ್ಲಿದ್ದನು.
ಅನಂತರ ಶಂಕರರು ಶಂಬಲನೆಂಬ ಬೌದ್ಧಮತವಾದಿಯನ್ನೂ, ಮಲ್ಲಾರಿ
ಮತೋಪಾಸಕರನ್ನೂ, ವಿಷ್ವಕ್ಸೇನ ಮತಾನುಯಾಯಿಗಳನ್ನೂ, ಮನ್ಮಥ ಭಕ್ತರನ್ನೂ
ಕುಬೇರೋಪಾಸಕರನ್ನೂ, ಇಂದ್ರಭಕ್ತರನ್ನೂ , ಯಮೋಪಾಸಕರನ್ನೂ, ಪ್ರಯಾಗ
ದಲ್ಲಿದ್ದ ವರುಣೋಪಾಸಕರನ್ನೂ, ಶೂನ್ಯಮತವಾದಿಯನ್ನೂ ಪರಾಹೋಪಾಸಕರನ್ನೂ,
ಸಾಂಖ್ಯ ಮತಾನುಯಾಯಿಗಳನ್ನೂ, ಕಾಲಮತಾನುಯಾಯಿಗಳನ್ನೂ , ಸುಧೀರಶಿವ
ರೆಂಬ ಅಣುಕಮತದವರನ್ನೂ, ಭರ್ರನೇ ಮೊದಲಾದ ಚಂದ್ರೋಪಾಸಕರನ್ನೂ, ಮತ್ತು
ಭೌಮಾದಿಗ್ರಹೋಪಾಸಕರನ್ನೂ, ಸೋಲಿಸಿದಮೇಲೆ, ಮೇಲೆ ಹೇಳಲ್ಪಟ್ಟ ಕ್ಷಪಣಕನು
ಆಚಾರ್ಯರನ್ನು ವಂದಿಸಿ ಸ್ವಾಮಿ ?ನಿಮ್ಮ ಅಧೀನದಲ್ಲಿಯೇ ನನಗೆ ಆರು ತಿಂಗಳು
ಕಾಲವು ಕಳೆದುಹೋಯಿತು ; ಕಾಲಬ್ರಹ್ಮಬೋಧಕವಾದ ನನ್ನ ಮತವನ್ನು ನೀವು
ಆಶ್ರಯಿಸಿ ಮುಕ್ತರಾಗಿ ”ಎನ್ನಲು-- ಆಚಾರ್ಯರು 'ಈ ಕಾಲವು ಸಂವತ್ಸರವಾಯಿತು' ಎಂಬ ಶ್ರುತಿಯಿಂದ
ಕಾಲಕ್ಕೆ ನಿತ್ಯತ್ವವು ಹೇಗೆ ? ಆದ್ದರಿಂದ ಎಲೈ, ಮದನೇ ! ನಿನ್ನ ಕುಬುದ್ದಿಯನ್ನು
ಬಿಟ್ಟು, ಶುದ್ದಾದ್ವೈತಮತವನ್ನು ಆಶ್ರಯಿಸಿ ಮುಕ್ತನಾಗು ಎನ್ನಲು-
ಅವನು, ಆಚಾರ್ಯರಿಗೆ ನಮಸ್ಕರಿಸಿ ಅದ್ವಯಬ್ರಹ್ಮದಲ್ಲಿ ಅನುರಕ್ತನಾದನು,

ಮಲ್ಲಾರಿಮತಖಂಡನವು

ಅನಂತರ ಆಚಾರ್ಯರಿಗೆ ಅನುಮಲ್ಲ ಪುರಕ್ಕೆ ಹೋಗಿ ಅಲ್ಲಿ ಇಪ್ಪತ್ತೊಂದು ದಿನ
ಇದ್ದು, ಅಲ್ಲಿನವರನ್ನು ನೀವು ಪ್ರಭಾತಾದಿಕಾಲದಲ್ಲಿ ಮಾಡುವ ಕಾರ್ಯವನ್ನು ತಿಳಿಸಿ,
ಎನ್ನಲು, ಅವರು ಸ್ವಾಮಿ !ನಾವು, ಮಲ್ಲಾಸುರನನ್ನು ಸಂಹರಿಸಿ ಮಲ್ಲಾರಿಯೆಂದು

ಪ್ರಸಿದ್ಧನಾದ ಆ ಸ್ವಾಮಿಯನ್ನೂ, ಅವನವಾಹನವಾದ ಶುನಕವನ್ನೂ, ತ್ರಿಕಾಲದ
ಲ್ಲಿಯೂ ನೃತ್ಯವಾದ್ಯಾದಿಗಳಿಂದ ಪೂಜಿಸಿ, ಕತ್ತಿನಲ್ಲಿ ವರಾಟಕ (ಕವಡೆ)ಗಳನ್ನು ಧರಿಸಿ
ಸ್ವಾಮಿಯನ್ನು ಪ್ರಸನ್ನನಾಗಿ ಮಾಡಿಕೊಂಡಿದ್ದೇವೆ; ಆ ಸ್ವಾಮಿಯ ಕಟಾಕ್ಷದಿಂದ
ಸುಖಸಾಗರಗಳು ಅಭಿವೃದ್ಧಿಯಾಗುವುವು; ಇದಲ್ಲದೆ ಅವನವಾಹನಕ್ಕೆ ವೇದದಲ್ಲಿ
(ಶ್ವಭ್ಯಶ್ವಪತಿಭ್ಯಶ್ವವೋನಮಃ' ಎಂದು ಮಹಿಮೆಯು ಹೇಳಲ್ಪಟ್ಟಿದೆ; ನಾವು ನಿಮಗೆ
ಉತ್ತಮಗಳಾದ ವರಾಟಕಗಳನ್ನು ಕೊಡುತ್ತೆವೆ; ನೀವೂ ಅದನ್ನು ಧರಿಸಿ ನಮ್ಮಂತೆ
ಮುಕ್ತಿಯಂ ಪಡೆಯಿರಿ” ಎಂದರು.