ಈ ಪುಟವನ್ನು ಪ್ರಕಟಿಸಲಾಗಿದೆ



೬೮
ಕಾದಂಬರೀಸಂಗ್ರಹ

ಹೀಗೆ ಕಲಿಕಲ್ಮಷಘ್ನಗಳೂ ಶುಭಗಳೂ,ಆದ ಚರಿತ್ರೆಗಳಿಂದ ಪ್ರಕಾಶಿಸುತ್ತಲಿ
ರುವ ಕೀರ್ತಿರಾಶಿಯುಳ್ಳ ಶಂಕರಾವತಾರಿಗಳಾದ ಶಂಕರರಿಗೆ ದ್ವಾತ್ರಿಂಶದಬ್ದಗಳು
ಕಳೆದವು.
ಬಳಿಕ ಶಂಕರರು ಸಶಿಷ್ಯರಾಗಿ ಕೇದಾರಕ್ಕೆ ಹೋಗಿ, ಅಲ್ಲಿನ ಶೀತದಿಂದ
ಶಿಷ್ಯರೆಲ್ಲರೂ ಪೀಡಿತರಾಗುತ್ತಿರುವುದನ್ನು ನೋಡಿ,ಮಹಾದೇವನನ್ನು ಉಷ್ಟೋದಕ
ವನ್ನು ಕೊಡಬೇಕೆಂದು ಪ್ರಾರ್ಥಿಸಿದರು.
ಚಂದ್ರಶೇಖರನು ಯತಿರಾಜರಾದ ಶಂಕರರಿಂದ ಹೀಗೆ ಸ್ತುತಿಸಲ್ಪಟ್ಟು ಕೂಡಲೇ
ಉಷ್ಟೋದಕಪ್ರವಾಹವುಳ್ಳ ಒಂದು ನದಿಯನ್ನು ತನ್ನ ಪದಾರವಿಂದದ ದೆಸೆಯಿಂದ
ಸೃಷ್ಟಿಸಿದನು. (ಅದು ಈಗಲೂ ಹಿಮಾಲಯದಲ್ಲಿ ಪ್ರಸಿದ್ದವಾಗಿದೆ.)
ಅನಂತರ ಹೀಗೆ ದೇವಕಾರ್ಯವನ್ನು ಮಾಡಿದ ಈಶ್ವ ರಾವತಾರಿಗಳಾದ ಶಂಕರ
ದೇಶಿಕರಲ್ಲಿಗೆ,ಬ್ರಹ್ಮೇಂದ್ರಾದಿ ಸುರಮುಖ್ಯರು, ಮಹರ್ಷಿಗಳು, ಪ್ರಸಿದ್ದರು ಇವರು
ಗಳಿಂದ ಸಹಿತರಾಗಿಬಂದು, ಯತಿವೇಷಧಾರಿಯಾದ ಆ ಸ್ವಾಮಿಯಂ ಸ್ತುತಿಸಿ
"ಎಲೈ ಸ್ವಾಮಿಯೇ ! ನೀನೇ ಸರ್ವಕಾರಣನು; ಪ್ರಪಂಚರಕ್ಷಣೆಗೋಸ್ಕರವೇ:
ಹಾಲಾಹಲವೆಂಬ ವಿಷವನ್ನು ಧರಿಸಿದ್ದೀಯೇ; ಕಾಮವನ್ನು ದಹಿಸಿರುವಿ; ತ್ರಿಪುರವನ್ನು
ನಾಶಮಾಡಿರುವಿ; ಜಗದುತ್ಪತ್ತಿಕಾರಣನಾದ ತ್ರಿನಯನನೇ ನೀನಾಗಿದ್ದೀಯೆ;ಈಗ
ವೇದಮರ್ಯಾದೆಯನ್ನುದ್ಧರಿಸಲು ಅವತರಿಸಿದ್ದೀಯೆ;ಈಗ ನಿನ್ನ ಕಾರ್ಯವು ಸಂಪೂರ್ಣ
ವಾದಕಾರಣ ನಮ್ಮ ಸುಖಕ್ಕೋಸ್ಕರ ಸ್ವರ್ಗಕ್ಕೆ ಬರಬೇಕು' ಎಂದು ಪ್ರಾರ್ಥಿಸಿದರು.
ಹೀಗೆ ಬ್ರಹ್ಮೇಂದ್ರೋಪೇಂದ್ರ ದೇವ ಪ್ರಮುಖರುಗಳಿಂದ ಪ್ರಾರ್ಥಿಸಲ್ಪಟ್ಟ
ಶಂಕರರು, ಬ್ರಹ್ಮನಿಂದ ಕೂಡಲ್ಪಟ್ಟ ಹಸ್ತ ವನ್ನು ಹಿಡಿದುಕೊಂಡು ಶ್ರೇಷ್ಠವಾದ
ನಂದಿಯನ್ನು ಹತ್ತಿ ಪ್ರಕಟಮಾಡಲ್ಪಟ್ಟ ಸುಒಟಾಬೂಟಗಳೂ, ಚಂದ್ರನೂ ಉಳ್ಳವ
ರಾಗಿ ಋಷಿಗಳಿಂದ ಸ್ತುತಿಸಲ್ಪಡುತ್ತ ಸಶರೀರವಾಗಿ ಕೈಲಾಸವನ್ನು ಸೇರಿದರು.

ಭದ್ರಂ!
ಶುಭಂ !!
ಮಂಗಳಂ !!!

ಜಯತು ಜಯತು ಜೀವೊಬ್ರಹ್ಮರೂಪದತ್ಯಾ
ಜಯತು ಜಯತು ಭಾಷಂತಾಂಕರಂಭಸುರೇಷು |
ಜಯತು ಜಯತು ನಿತ್ಯಂ.ಮಸ್ಯಾ ದಿವಾಕೃ
ಜಯತು ಜಯತು ಶುದ್ಯಾತಮಾ ಚಂದ್ರತಾರವ: ||

ಓಂ ತತ್ಸತ್.

ಸಂಪೂರ್ಣಮ.