ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+ ಸ, ಚಂದ್ರಿಕೆ ದಿದ್ದಾನೆ. ತಮ್ಮನ್ನು ಬೇಗನೇ ಕರೆಯಬೇಕೆನ್ನುವನು. ತಡವಾದರೆ ಘಾತ ವಾಗುವದಂತೆ ಎಂದು ಒಬ್ಬ ದಾಸಿಯು ಕೇವಲ ಅಂಜಿದವಳಾಗಿ ನುಡಿದು ಹೊರಟುಹೋದಳು, ಆದರೆ ಕುತುಬನು ಹೇಳಿಕಳಿಸಿದ ಅತಿಬರೂರಿಯ ಆ ಮಾತಿನ ಕಡೆಗೆ ಲಕ್ಷ್ಯಗೊಡಲಿಕ್ಕೆ ನವಾಬನ ಮನಸ್ಸು ಸ್ಥಿರವಿದ್ದಿಲ್ಲ. ಶಕ್ತಿಯು ತನ್ನ ಬೆದರಿಕೆಗೆ ಸೊಪ್ಪಹಾಕುವವಳಂಬದನ್ನು ಅರಿತು ಅವನು ಆಕೆಯನ್ನು ಕುರಿತು ನಡಗುವ ದನಿಯಿಂದ-ಪ್ರಿಯತಮೆಯೇ, ಕ್ಷಮಿ ಸು. ನಾನು ನಿನ್ನ ಆಜ್ಞಾಧಾರಕಗುಲಾವನು. ಯುದ್ಧದಲ್ಲಿ ಬದುಕಿ ಉಳಿದೇನೆಂಬ ನಿಶ್ಚಯವು ನನಗಿಲ್ಲ. ಒಂದುವೇಳೆ ಸತ್ತರ ನಿನ್ನ ಪ್ರೇ ಮಾಲಿಂಗನಹೊಂದಿ ಸತ್ತರೆ ನನಗೆ ದುಃಖವೆನಿಸಲಿಕ್ಕಿಲ್ಲ. ಆದ್ದರಿಂದ ಪ್ರಿಯೇ ಶಕ್ತಿಮಯಿ, ಬಾ ಇತ್ತ ಬಾ, ನಿನ್ನನ್ನು ಬಿಗಿಯಾಗಿ ಅಪ್ಪಿ ಕೊಳ್ಳ. • • • • • •ಎಂದು ಕೇಳಿಕೊಂಡನು. ಆದರೆ ಶಕ್ತಿಯು ನವಾಬ ನ ಆ ನಿಕೃಷ್ಟ ಪಕ್ಷದ ವಿನಂತಿಗೆ ಕೂಡ ಸಮ್ಮತಿಸದೆ ಜಹಾಂಪನಾ, ನಾನು ಸುಳ್ಳು ಹೇಳುವದಿಲ್ಲ. ಎಲ್ಲಿಯ ವರೆಗೆ ಈ ಯುದ್ಧವು ಪೂರೈ ಸುವದಿಲ್ಲವೋ ಅಲ್ಲಿಯ ವರೆಗೆ ನಮ್ಮಿಬ್ಬರಲ್ಲಿ ಪತಿಪತ್ನಿಯರ ಸಂಬಂಧ ವಿರಲಾರದು. ಯುದ್ಧವು ಪೂರೈಸಿ ನಾವಿಬ್ಬರೂ ಜೀವದಿಂದ ಉಳಿ ದರೆ, ನಾನು ನನ್ನ ಮಾತನ್ನು ಪಾಲಿಸಲಿಕ್ಕೆ ತಪ್ಪಲಿಕ್ಕಿಲ್ಲ. ನೀವು ನನ್ನ ನ್ನು ಅಲ್ಲಿಯ ವರೆಗೆ ಪ್ರತಿಬಂಧಿಸಿಡುವ ಯೋಚನೆಯನ್ನು ಒಂದು ವೇಳೆ ಮಾಡಬಹುದು. ಅದರೆ ತಮ್ಮ ಆ ನೂರಾರು ಕಾವಲುಗಾರರ ಕಣ್ಣು ಗಳಲ್ಲಿ ಮಣ್ಣು ತೂರಿ ಪಾರಾಗಿ ಹೋಗುವ ಸಾಮರ್ಥ್ಯವು ಈ ದೀನ ವೇಷದ ಬಾಲಿಕೆಯಲ್ಲಿರುವದೆಂಬದನ್ನು ಸ್ಪಷ್ಟವಾಗಿ ಈಗ ತಮಗೆ ತಿಳಿ ಸಿಡುತ್ತೇನೆ ಎಂದು ನುಡಿಯುತ್ತಿರಲು, ಮಹಾಲಿನ ಹೊರಬದಿಯಲ್ಲಿ ಕೊ ಲಾಹಲ ಧ್ವನಿಯಾಗುತ್ತಿರುವದು ಸ್ಪಷ್ಟವಾಗಿ ಕೇಳಬರಹತ್ತಿತು. ಅಷ್ಟರಲ್ಲಿ ಕುತುಬನು ನವಾಬನು ಹೊರಗೆ ಬರುವ ಹಾದಿಯ ನೋಡ