ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಸ, ಚಂದ್ರಿಕ. ರಿದುಂಬಿಸಿ ಒಮ್ಮೆ ಅವನನ್ನು ಅವನ ಪ್ರೀತಿಯ ಸಾರಂಗವಾದ್ಯದೊ ತನೆ ಆ ಪುಷ್ಕರಿಣಿಯ ದಂಡೆಗೆ ಕರೆತಂದಿದ್ದರು. ಸ್ವಾಭಾವಿಕ ಉತ್ಸಾಹಯುಕ್ತ ಆ ಗವಾಯಿಯು ಪುಷ್ಕರಿಣಿ-ವನಪ್ರದೇಶಗಳ ಸೌಂದರ್ಯವನ್ನು ಕಂಡು ತನ್ನ ಮನಸ್ಸಿನ ಚಿಂತೆಯನ್ನು ಕ್ಷಣ ಹೊತ್ತು ಮರೆತು ಬಿಟ್ಟು ಸಾ೦ರಗಿಯನ್ನು ಬಾರಿಸುತ್ತ ಬಾಯಲ್ಲಿಯೇ ಸಪಿ ನವ ಶ್ರಾವಣ ಮಾಸ! ಜಲದ ಘನಘಟಾ, ದಿವಸೆ ಸಾ೦ರು ಛಟಾ, ರುಪ್ ರುಪ್ ರಂಭೆ ಆಕಾಶ ಹೀಗೆ ಹಾಡತೊಡಗಿದನು. ಆಗ ಸಂಗಡಿಗರು ಆತನನ್ನು ಕುರಿತು ಗಾಯಕ ಮಹಾರಾಜ, ಯಾವದೊಂದು ಸುಂದರ ಗಾನವನ್ನು ಬಾಯಿಬಿಚ್ಚಿ ಹಾಕಿ ಮನೋರಂಜನವನ್ನುಂಟು ಮಾಡಬಾರ ದಿರಾ? ಎಂದು ಆಗಾಗ್ಗೆ ಕೇಳುತ್ತಿದ್ದರು. ಆದರೂ ಅವರ ಮಾತಿನ ಕಡೆಗೆ ಗಾಯಕನ ಲಕ್ಷವಿಲ್ಲದ್ದರಿಂದ ಅವನು ಅದೇ ಹಾಡನ್ನು ಪುನಃ ಪುನಃ ಅನ್ನುತ್ತ, ಸಾರಂಗಿಯನ್ನು ಗತ್ತಿನಿಂದ ಬಾರಿಸುತ್ತ, ತಲೆಯ ೮ಾಡಿಸಿ ವಾಹವ್ಯಾ-ಭಲೆ, ಎಂದಂದುಕೊಳ್ಳು ತ್ರ ತಲ್ಲೀನನಾಗಿದ್ದನು. ಬಳಿಕ ಸಂಗಡಿಗರೆಲ್ಲರೂ ಅಲ್ಲಿಂದೆದ್ದು ಆ ಪುಷ್ಕರಿಣಿಯ ಬೇರೆ ಕಡೆಗೆ ಮತ್ತೇನನ್ನೋ ನೋಡುತ್ತ ಹರಿಸಹತ್ತಿದರು. ಆಗ ಒಬ್ಬ ಅಪರಿ ಚಿತ ಸ್ತ್ರೀಯು ಆ ಗಾಯಕನ ಒಮ್ಮಗ್ಗಲಿನಲ್ಲಿ ಒಟ್ಟಿಗೆ ಮರೆಗೆ ನಿಂತು ಅವನ ಆ ಗಾಯನವನ್ನು ಆಸ್ಥೆಯಿಂದ ಕೇಳುತ್ತಿದ್ದಳು. ಇಷ್ಟರಲ್ಲಿ ಸಂಧ್ಯಾ ಕಾಲವಡಗಿತು; ರಾತ್ರಿಯ ಚಿಹ್ನವು ಸ್ಪಷ್ಟವಾಗಿ ತೋರಹತ್ತಿತು. ಮೋಡಗಳೆಲ್ಲವೂ ಇಲ್ಲದಂತಾದ್ದರಿಂದ ನಿರ್ಮಲ ಶುಭ್ರವಾದ ಆಕಾಶದಲ್ಲಿ ಚಂದ್ರನು ಪ್ರಕಾಶಮಾನನಾದನು. ವನ ಮಧ್ಯದಲ್ಲಿ ಛಾಯಾಯುಕ್ತವಾದ ಚಂದ್ರಕಿರಣಗಳು ಮಂದ ಮಂದ " ವಾಗಿ ಬೀಳುತ್ತಿದವು; ಮತ್ತು ಇಂಥ ಈ ಪ್ರಶಾಂತ ಸಮಯದಲ್ಲಿ