ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ೧೭ ಬೇಕಾಗಿತ್ತು. ಕರೀಮ-ಜಹಂಪನಾ, ಬಾಗಿಲ ಬಳಿಯಲ್ಲಿ ಈ ವಿದ್ರೋಹಿಗ ಆ ಸೈನ್ಯ-ಸಾಮಂತರಿರುವರಲ್ಲ, ಅವರನ್ನೇನು ಮಾಡಬೇಕು? ಬಾದಶಹ-ಅವರೆಲ್ಲರನ್ನೂ ಪ್ರತಿಬಂಧಗೊಳಿಸು.' .. ತತ್ಕ್ಷಣವೇ ರಾಜಾಜ್ಞೆಯು ಪರಿಪಾಲಿಸಲ್ಪಟ್ಟಿತು. ಆದೇಮ ಖಾನ ಹಾಗು ಗಣೇಶದೇವ ಇವರನ್ನು ಕರೀಮನು ಸೆರೆಹಿಡಿದೆದಿದ್ದನು. ಆಗ ಸುಲ್ತಾನನ ಮಂತ್ರಿಯು ತನ್ನ ತಲೆಗಟ್ಟಿಸಿಕೊಂಡು ಬಾದಶಹ ನಿಗೆ-ಸುಲ್ಯಾನ ಇದೇನು ಮಾಡಿದೆ? ಹೀಗೆ ಮಾಡಿ ನವಾಬನನ್ನು ಗೆಲ್ಲಲಿಕ್ಕೆ ಇನ್ನಾವ ಮಾರ್ಗವನ್ನೂ ಉಳಿಯಗೊಡಲಿಲ್ಲವಲ್ಲ! ನಿರ್ದೋ ಹಿಯಾದ ಆಜೀಮಖಾನನನ್ನು ಸುಮ್ಮ ಸುಮ್ಮನೆ ಏಕೆ ಸೆರೆ ಹಿಡಿಸಿದೆ? ಹಾಗು ಅದರಂತೆಯೇ ಗಣೇಶದೇವನನ್ನೂ ......... ಮಂತ್ರಿಯ ಮಾತನ್ನು ಪೂರ್ಣಮಾಡಗೊಡದೆ ನಡುವೇ ಬಾಯಿ ಹಾಕಿ ಬಾದಶಹನು-ಆದೇಮಖಾನನು ನಿರ್ದೋಷಿಯೇ? ನಿನ್ನ ಮಗನೆಂದು ತಿಳಿದು ನಾನು ಅವನನ್ನು ಈ ವರೆಗೆ ಸೇನಾಪತಿ ಯೆಂದು ಇಟ್ಟು ಕೊಂಡಿದ್ದೆನು, ಅವನಿಂದಲೇ ಆಗತಕ್ಕೆ ಕಾರ್ಯ ಗಳೆಲ್ಲ ಇಷ್ಟು ಮಂದವಾಗಿ ಸಾಗಿರುತ್ತವೆ. ಮಂತ್ರಿ-ಈಗ ಗಣೇಶದೇವನನ್ನು ಸೆರೆ ಹಿಡಿದದ್ದರಿಂದ ಮತ್ತೆ ಎರಡೂ ಕಡೆಗೆ ಯುದ್ಧ ಮಾಡಬೇಕಾಯಿತಲ್ಲ? ಬಾದಶಹ ಮಂತ್ರಿಯೇ, ವೃದ್ಧಾಪ್ಯದಮೂಲಕ ನಿನ್ನ ಬು ದ್ಧಿಯು ಭ್ರಂಶವಾಗಿರುವಂತೆ ತೋರುತ್ತದೆ. ಗಣೇಶದೇವನೇ ಸೆರೆ ಹಿಡಿಯಲ್ಪಟ್ಟ ಬಳಿಕ, ಅವನ ಕಡೆಯಿಂದ ಕಾದುವವರಾದರೂ ಯಾರು? ಮಂತ್ರಿ-ಅವನ ಸೈನಿಕರು, ಗಣೇಶದೇವನ ತಾಯಿಯು ಕಡಿಮೆಯವಳೆಂದು ತಿಳಿಯಬೇಡ, ಎಲ್ಲಿಯ ವರೆಗೆ ಒಬ್ಬ ಸೈನಿಕನಾ