ಈ ಪುಟವನ್ನು ಪರಿಶೀಲಿಸಲಾಗಿಲ್ಲ.

คหy ಭ, ಚಂದ್ರ, ದು ಗಣೇಶದೇವನು ಮನಸ್ಸಿನಲ್ಲಿ ಭಾವಿಸಿದನು. ಆದರೆ ಗಣೇಶದೇವನ ತಾಯಿಯ ಮತವು ಇದಕ್ಕೆ ವಿರುದ್ಧ ವಾಗಿತ್ತು. ಸಾಹೇಬುದ್ದೀನನಿಗೆ ಆಶ್ರಯ ಕೊಡುವದು ನಮ್ಮ ಕ ರ್ತವ್ಯವಲ್ಲ. ಅವನಿಗೆ ಆಶ್ರಯ ಕೊಟ್ಟರೆ ನಾವು ಧರ್ಮಭ್ರಷ್ಟರಾ ಗುವೆವು ಒಬ್ಬನನ್ನು ಬದುಕಿಸ ಹೋಗಿ ಸಾವಿರಾರು ಜನರ ಪ್ರಾ ಣಗಳನ್ನು ಕಳೆಯುವರು ಎಲ್ಲಿಯ ನ್ಯಾಯವು? ಹ್ಯಾಗ ನಾವು ಕಳೆದ ಯುದ್ದ ಸಮಾಪ್ತಿಯ ದಿವಸವೇ ಆತನನ್ನು ಆತನ ದೊಡ್ಡ ಪ್ರನಿಗೆ-ಗಾಯಸುದ್ದೀನನಿಗೆ ಒಪ್ಪಿಸಿ ಬಿಡಬೇಕಾಗಿತ್ತು. ಆಗ ಯಾಕೊ ಒಪ್ಪಿಸಲಿಲ್ಲ! ಈಗ ಒಪ್ಪಿಸಿದರಾಯಿತು. ಹೀಗೆ ಮಾಡುವದರಿಂದ ನಮ್ಮ ಕರ್ತವ್ಯಪಾನ ಮಾಡಿದ ಹಾಗಾಗುವದಲ್ಲದೆ, ನಿರರ್ಥಕವಾಗಿ ನಮ್ಮ ಪ್ರಜೆಗಳಿಗಾಗಬಹುದಾದ ಅರ್ಥಹಾನಿ, ಪ್ರಾಣಹಾನಿಗಳನ್ನೂ ತಪ್ಪಿಸಿದ ಹಾಗಾಗುತ್ತದೆ, ಎಂದು ಆಕೆಯ ಅಭಿಪ್ರಾಯವಿತ್ತು. ಆದರೆ ಈ ಕಾರಣವು ಗಣೇಶದೇವನಿಗೆ ಸಮಂಜಸವಾಗಿ ತೋ ರಲಿಲ್ಲ. ಮುಂದೆ ಹೀಗೆಯೇ ಆದೀತೆಂಬ ಕಲ್ಪನೆಯನ್ನು ಮಾಡುತ್ತ ಪ್ರಸ್ತುತದ ಅವಶ್ಯ ಕರ್ತವ್ಯವನ್ನು ಬಿಟ್ಟು ಬಿಡುವುದು ಸರಿಯಲ್ಲ. ಹೀಗೆ ಕಲ್ಪನಾ ಸಾಮ್ರಾಜ್ಯದಲ್ಲಿ ಮಗ್ನರಾಗಿ ನಾವು ನ್ಯಾಯ, ಮ 'ಹತ್ವ, ಧರ್ಮ ಇವುಗಳ ಅಭಾದಿತ ಸಿದ್ದಾಂತಗಳ ಕಡೆಗೆ ಲಕ್ಷಗೊ ಡದಿದ್ದರೆ ಜಗತ್ತಿನಲ್ಲಿ ಧರ್ಮವುಳಿಯುವ ಸಂಭವವಾದರೂ ಉಂಟೇ? ಹತ್ತು ಜನ ಮರ್ಖರು ಕೂಡಿ ಯಾವನೊಬ್ಬ ನಿರಪರಾಧಿ ವ್ಯಕ್ತಿ ಯನ್ನು ಹಿಂಸಿಸುತ್ತಿರುವದನ್ನು ನಾಲೈದು ಜನ ಸಮಂಜಸರು ಸುಮ್ಮನೆ ನಿಂತು ಕಣ್ಣಲೆ ನೋಡಬಹುದೇ? ಆ ನಾಲೈದು ಜನರ ಶಕ್ತಿಯು ಪ್ರಾಯಶಃ ಆ ಮರ್ಖರಾದ ಹತ್ತು ಜನರ ಸಾಮ ರ್ಢಕ್ಕಿಂತ ಕಡಿಮೆಯೆಂಬದು ನಿಶ್ಚಿತವಿದ್ದರೂ, ಆ ನಿರಪರಾಧ ಮನುಷ್ಯನ ಸಹಾಯಕ್ಕಾಗಿ ಅವರು ಹೋಗಲೇ ಬೇಕಾಗುತ್ತದೆ.