ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪9 ಕೆ. ಚಂದ್ರಿಕ. ಮುಂದೆ ಅಖಂಡವಾಗಿರುವವು. ನಮ್ಮ ಶಕ್ತಿಮಯಿಯಾದರೂ ಸ ಮಾಜದ ಈ ಓಘವನ್ನು ಹೇಗೆ ಬಿಟ್ಟು ನಡೆದಾಳು? ಬರಬರುತ್ತ ಕುತುಬನು ರಾಜಕೋಶದ ಪಾರು ಕಾರಾಗೃಹದ ಸಂಗತಿಗಳನ್ನು ಶಕ್ತಿಮಯಿಗೆ ತಿಳಿಸಹತ್ತಿದನು. ಕಾರಾಗೃಹದೊಳಗೆ ಹೊಸದಾಗಿ ತಂದಿಟ್ಟಿರುವ ಗಣೇಶದೇವನ ಕಷ್ಟವನ್ನು ಒಳ್ಳೆ ಕನಿಕರ ದಿಂದ ಆಕೆಗೆ ಆಗಾಗ್ಗೆ ಹೇಳತೊಡಗಿದನು. ಶಕ್ತಿಮಯಿಯು ಎಂ ಥ ನಿಷ್ಟುರಳೂ, ಗಟ್ಟಿ ಮನಸ್ಸಿನವಳೂ ಆಗಿದ್ದರೂ, ಬಾಲ್ಯಸ್ನೇಹದಿಂದ ಬಿಗಿಯಲ್ಪಟ್ಟ ಗಣೇಶದೇವನ ಕಷ್ಟ-ನಷ್ಟಗಳನ್ನು ದಿನಾಲು ಕೇಳಹ ತಿದ ಬಳಿಕ ಅವಳ ಮನಸ್ಸು ಆದ್ರ್ರವವಾಯಿತು. ಆಕೆಯು ಒಮ್ಮೆ ಕಾರಾಗಾರಕ್ಕೆ ಹೋಗಿ ಮರೆಗೆ ನಿಂತು ಅವನನ್ನು ಕಣ್ಣು ಮುಟ್ಟ ನೋಡಿ ಬಂದಳು. ಆಗಿನ ಗಣೇಶದೇವನ ವೇಷ, ಮುಖಲಕ್ಷಣ ಇವುಗಳನ್ನು ನೋಡಿ ಶಕ್ತಿಮಯಿಯ ಅಂತರಂಗದೊಳಗಿನ ಆತನ ವಿ ಷಯದ ಸೇಡಿನ ಹವ್ಯಾಸವೆಲ್ಲ ಅಳಿದು ಹೋಯಿತು. ಆಗ ಅವ ಳು ಯೋಚಿಸಿದ್ದೇನಂದರೆ, ಯಾವನ ಸೇಡು ತೀರಿಸಿಕೊಳ್ಳುವ ಸಲು ವಾಗಿ ನಾನು ಕುಲಗೆಟ್ಟು ಸಾಮಾಜಿಕ ಬಂಧನಗಳನ್ನು ಮುರಿದ ಅಪ. ರಾಧಕ್ಕೆ ಇಹಲೋಕದಲ್ಲಿಯ ಪರಲೋಕದಲ್ಲಿಯ ಗುರಿಯಾಗಿರು ವೆನೋ, ಆ ಗಣೇಶದೇವನ ಈ ಸಂಕಟವನ್ನು ನಿವಾರಿಸಲು ಪ್ರಯತ್ನಿ ಸುವಾಗ ನನ್ನ ಈ ದೇಹವು ಬಿದ್ದರೂ ಚಿಂತೆಯಿಲ್ಲ; ಆದರೆ ಈ ಕೆಲಸ ವನ್ನು ಮಾಡಲೇ ಬೇಕು. ಅಂದರೆ ಈ ಕೃತಿಯಿಂದ ನನ್ನ ಅಪರಾ ಧವು ಕೆಲಮಟ್ಟಿಗಾದರೂ ಕ್ಷಮ್ಯವಾಗಬಹುದು, ಬಳಿಕ ಒಂದು ದಿವಸ ಅವಳು ಬಾದಶಹನಿಗೆ ಏಕಾಂತದಲ್ಲಿ ಪ್ರಾರ್ಥಿಸಿದ್ದೇನಂದರೆ-ಪ್ರಿಯತಮಾ, ಕಾರ್ಯಗೌರವಕ್ಕಾಗಿ ತಾವು ರಾಜ್ಯದೊಳಗಿನ ಎಷ್ಟೋ ಕೆಲಸಗಳನ್ನು ತಮ್ಮ ಧೋರಣಕ್ಕನುಸರಿಸಿ ಮಾಡಬೇಕಾಗುತ್ತದೆ. ಆದರೆ ಆ ವಿಷಯದಲ್ಲಿ ಈ ದಾಸಿಯು ಮನಸ್ಸು