ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಸ, ಚಂದ್ರ, ಯಲಿಕ್ಕಿಲ್ಲ? ಆದರೆ ಶಕ್ತಿ, ಎಷ್ಟೇ ಆದರೂ ನೀನು ಹೆಂಗಸು; ಈ ಕುತುಬನು ನಿನಗೆ ಮೀರಿದ ಸಾಹಸಿಯೆಂಬದು ತುಸು ದಿವಸಗಳಲ್ಲಿ ಯೇ ನಿನ್ನ ನಿದರ್ಶನಕ್ಕೆ ಬರದೆ ಇರಲಿಕ್ಕಿಲ್ಲ, “ಶಕ್ತಿಮಯಿ, ಎಷ್ಟೇ ಸಾಹಸಮಾಡು, ಆದರೆ ಗಣೇಶದೇವನ ನ್ನು ಈ ಕುತುಬನ ಜಾಲದಿಂದ ಪ್ರಾಣ ಸಹಿತವಾಗಿ ನೀನು ಎಂದೂ ಬಿಡಿಸಲಾರೆ. ಇದು ಪಣತೊಡಬಹುದಾದ ಸಂಗತಿಯೆಂದು ತಿಳಿ, ಇನ್ನು ಪ್ಯಾಗೂ ನೀನು ಅವನ ಬಿಡುಗಡೆಯ ವಿಷಯವಾಗಿ ಮಾಡ ಬಾರದ ಪ್ರಯತ್ನಗಳನ್ನು ಕೂಡಾ ಮಾಡಹತ್ತು, ಆದರೆ ಆ ನಿನ್ನ ಸಾಹಸದ ಉಪಯೋಗವನ್ನು ಬೇರೆ ರೀತಿಯಾಗಿ ಉಪಯೋಗಿಸಿ ಕೊಂಡು, ಗಾಯಸುದ್ದೀನನ ಮನಸ್ಸಿನಲ್ಲಿ ನಿನ್ನ ವಿಷಯವಾಗಿ ಸಂಶ ಯ ಪಿಶಾಚವನ್ನು ಹೋಗಿಸಿ, ಆ ನಿನ್ನ ಹಂಚಿಕೆಯಿಂದಲೇ ಮೊದಲು ನಿನಗೆ, ಬಳಿಕ ಗಣೇಶದೇವನಿಗೆ ಮರಣವೊದಗುವಂತೆ ಆಟಹೂಡುವೆ ನು, ನಿಮ್ಮಿಬ್ಬರ ಅ೦ತವಾದ ಮರುದಿನವೇ ಈ ಕುತುಬನು ಗಾಯ ಸುದ್ದೀನನ ವಿಷಯದ ಶೇಷಕಾರ್ಯವನ್ನು ಮುಗಿಸಿಕೊಂಡು, ನಂಗೇಶ್ವರನ ಪೀಠವನ್ನು ಆರೋಪಿಸಿದನೆಂದು ಖಂಡಿತವಾಗಿ ತಿಳಿ ದುಕೋ, ಈ ದೇಹವಿರುವವರೆಗೆ ಒಂದಿಲ್ಲೊಂದು ದಿನವಾದರೂ ನಾನು ಈ ವಂಗರಾಜ್ಯಕ್ಕೆ ಅಧಿಪತಿಯಾಗಿ ಮೆರೆಯಬೇಕೆಂದಿರು ತೇನೆ; ಹಾಗು ಈ ಹವ್ಯಾಸಕ್ಕಾಗಿಯೇ ನಾನು ಸೇಕಂದರಶಹನನ್ನು ಯುದ್ಧದಲ್ಲಿ ಕೊಲ್ಲಿಸಿ, ಅವನ ಉಳಿದಮಕ್ಕಳನ್ನು ಗುಪ್ತವಾಗಿ ಸಂಹರಿ ಸಿರುತ್ತೇನೆ. ಹೀಗೆಕುತುಬನು ಮನಸ್ಸಿನಲ್ಲಿಯೇ ಮಾತಾಡುತ್ತ ಆ ಪುಷ್ಪವಾ ಟಿಕೆಯ ಗುಪ್ತದ್ವಾರದಿಂದ ಹೊರಬಿದ್ದು ಪಟ್ಟಣದ ಒಂದು ಅಪ್ರಸಿದ್ದ ಸಂದಿಯ ಓಣಿಯನ್ನು ಹಿಡಿದು ತನ್ನ ಮನೆಯ ಕಡೆಗೆ ನಡೆದನು. ದಾರಿ ನಡೆಯುತ್ತಿರುವಾಗ ಅವನ ಮನಸ್ಸು ಮೇಲಿನ ತರಹದ ವಿಚಾ