ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೬೨ , ಚಂದ್ರ, ಕಡಲೆ ಅವನು ಚಟಕ್ಕನೆದ್ದು ನಿಂತು 'ಭಗವತೀ, ಸನ್ಯಾಸಿನೀ, ನೀನು ಇಲ್ಲಿ ಹೇಗೆ ಬಂದೆ? ಎಂದು ವಿಸ್ಯ ಯಭರದಿಂದ ಕೇಳಿದನು. ಸನ್ಯಾಸಿನಿ-ಇಲ್ಲಿ ಅದನ್ನೆಲ್ಲ ಹೇಳುತ್ತ ಕೂಡುವಂತಿಲ್ಲ; ಇಗೋ ಈ ವಸ್ತ್ರವನ್ನು ಟ್ಟು ಕೊಂಡು ಈ ಶಾಲನ್ನು ಬರೇ ಕಣ್ಣುಗಳಷ್ಟು ಹೊರಗೆ ಕಾಣುವಹಾಗೆ ಮೈ ಮೇಲೆ ಚೆನ್ನಾಗಿ ಹೊದ್ದು ಕೋ; ಹಾಗು ನನ್ನನ್ನು ಹಿಂಬಾಲಿಸಿ ಬಾ, ಎಂದು ನುಡಿದವಳೇ ಆ ಕೋಣೆಯ ಬಾಗಿಲ ಕಡೆಗೆಬಂದಳು. ಶಕ್ತಿಯೇ ಈ ಸಾಹಸಕ್ಕೆ ಕಾರಣಳೆಂಬದ ಅವಳು ಸನ್ಯಾಸಿನಿಯೊಡನೆ ಇಲ್ಲಿಗೆ ಬಂದಿರುವಳೆಂದೂ ಅವನಿಗೆ ತಿಳಿಯದು. ಅದರಿಂದ ಅವನು ಅರಕ್ಷಣದಲ್ಲಿ ಸನ್ಯಾಸಿನಿಯ ಆಜ್ಞೆಯ ಪ್ರಕಾರ ವೇಷಧರಿಸಿಕೊಂಡು ಅವಳನ್ನು ಹಿಂಬಾಲಿಸಿದನು. ಬಳಿಕ ಅವರೀರ್ವರೂ ಬಂದ ದಾರಿಯಿಂದ ತಿರುಗಿದರು. ತಲೆಬಾಗಿಲ ಬಳಿಯ ಮುಖ್ಯ ಪಹರೆ ಯವನ ಕೈಯಲ್ಲಿ ಸನ್ಯಾಸಿನಿಯು ಉಂಗುರವನ್ನು ಚೆಲ್ಲಿದಳು. ಅವನು ಅದನ್ನು ತಕ್ಕೊಂಡವನೇ ಮೈ ಮೇಲೆ ಚೆನ್ನಾಗಿ ಹೊದ್ದುಕೊಂಡು ಅಡ್ಡಾದನು. ಮುಖ್ಯ ಕಾವಲುಗಾರನ ಸ್ಥಿತಿಯೇ ಹೀಗಾದಬಳಿಕ ಪಕ್ಕ ಸಹಾಯಕ ಪಹರೆಯವರ ಪಾಡೇನು? ಗಾಢನಿದ್ರೆಯಲ್ಲಿ ತಮ್ಮ ಸಹ ರೆಯ ಸರತಿ ಬಂದದ್ದು ಕೂಡ ಅವರಿಗೆ ಗೊತ್ತಿರದಿರುವಾಗ, ಸನ್ಯಾಸಿ ನಿಯು ಗಣೇಶದೇವನೊಡನೆ ಮೋಸದಿಂದ ಪಲಾಯನ ಮಾಡಿದ ಸುದ್ದಿ ಯು ಅವರಿಗೆ ಹೇಗೆ ತಿಳಿಯಬೇಕು? ಯಾವಸಂಕೋಚವನ್ನೂ ತಕೊಳ್ಳದೆ ಗಣೇಶದೇವನು ಸನ್ಯಾ ಸಿನಿಯೊಡನೆ ಒಮ್ಮೆ ಹೊರಟು ಹೋದಮೇಲೆ, ಇಡಿ ಆಯುಷ್ಯ ದಲ್ಲಿ ಎಂದೂ ಆಗದಷ್ಟು ಸಮಾಧಾನವು ಶಕ್ತಿಮಯಿಗೆ ಅಂದು ಉಂಟಾಯಿ ತು, ಆಗ ಶಕ್ತಿಯು ಈವರೆಗೆ ಅಡಗಿಕೊಂಡು ಕುಳಿತಿದ್ದ ಆ ಕೋಣೆ ಯ ಮೂಲೆಯೊಳಗಿಂದ ಎದ್ದು ಗಣೇಶದೇವನು ಮಲಗಿದ್ದ ಸ್ಥಳಕ್ಕೆ ಬಂದಳು. ಅಲ್ಲಿ ಗಣೇಶದೇವನು ಬಿಟ್ಟು ಹೋಗಿದ್ದ ಒಂದು ಹರಕ