ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಸ.ಚಂದ್ರಿಕ. ಿತವಾಗಿ ಬಂದಿದ್ದ ಆ ದೀನವೇಷದ ಆದರೆ ಅತ್ಯಂತ ಚಲುವೆಯಾದ ಯುವತಿಯ ಜಿಜ್ಞಾಸೆಯಲ್ಲಿ ತೊಡಗಿತ್ತು. ಯುವಕರ, ಅದರಲ್ಲಿಯ ರೂಪ, ತಾರುಣ್ಯ, ಅಧಿಕಾರ, ಸಂಪತ್ತುಗಳಿಂದ ಯುಕ್ತರಾದ ಯು ವಕರ ಆಲೋಚನೆಗೆ ಕಾಮಿನಿಯರೇ ಕಾರಣರಲ್ಲವೆ? ಅವನ ಮನಸಿ ನಲ್ಲಿ ಆ ತರುಣಿಯ ಸುಸ್ವರೂಪ, ಅಪರಿಚಿತರಲ್ಲಿಯ ಸುಚಿತಭಾವ ದಿಂದ ನಡೆಯುವ ವಿಲಕ್ಷಣ ಸಾಹಸ, ಸಭಾಮಧ್ಯದಲ್ಲಿ ಶುಷ್ಕ ಮಾಲೆಯ ತೂರುವಿಕೆ, ಅಲ್ಲಿಂದ ಪುನಃ ಒಯ್ಯೋಣ, ಸಭಾಮಂಟಪ ದಲ್ಲಿ ಬರುವಾಗ ಸಹ ತನ್ನ ಗರ್ವದ ಇರವನ್ನು ತೋರಿಸುವ ಆಕೆಯ ದೃಢಪದಕ್ಷೇಪ ಇವೆಲ್ಲವುಗಳು ಕ್ರಮವಾಗಿ ಬಂದು ಅವನನ್ನು ಆಲೋ ಚನೆಗೆ ಗುರಿಮಾಡಿದ್ದವು. ಹೀಗೆ ವಿಸ್ಮಯದ್ಯೋತಕಳಾದ ಆ ಅಪ ರಿಚಿತ ಯುವತಿಯು ಯಾರೆಂಬದನ್ನು ತಿಳಿಯುವದು ಅವನಿಗೆ ಬಹು ಕಠಿಣವೆನಿಸಿತು. ಆಕೆಯ ಆ ದೀನವೇಷ, ವಿಚಾರಾರ್ಹವಾದ ವ್ಯವ ಹಾರ, ಪುನಃ ಪುನಃ ನೋಡುವಂತಿರುವ ಹಾವಭಾವ, ಅದರಂತೆ ಆಕೆಯ ಕಡೆಗಣ್ಣನೋಟ, ದೃಢಪದಕ್ಷೇಪ ಇವುಗಳಿಂದ, ಆಕೆಯ ಅಂಚಿನ ಸೀರೆಯಿಂದಲೂ ಆಕೆಯು ಸನ್ಯಾಸಿನಿಯು ಅಲ್ಲೆಂಬದು ಸ್ಪ ಷ್ಟವಾಗುತ್ತಿತ್ತು. ಅಲ್ಲದೆ ಆಕೆಯಲ್ಲಿ ತ್ರಿಪುಂಡಗಳು, ಜಟಾ (ಅಥವಾ ಕೇಶವಿಹೀನ) ವಿಭೂತಿ-ರುದ್ರಾಕ್ಷ ಮಾಲೆ ಮುಂತಾದ ಸನ್ಯಾ ಸಲಕ್ಷಣದ್ಯೋತಕ. ಚಿಹ್ನಗಳೊಂದೂ ಇದ್ದಿಲ್ಲ. ಆಕೆಯು ತನ್ನ ಸೂಕ್ಷ್ಮ ಸೀರೆಯ ಸೆರಗನ್ನು ತಲೆಯ ಮೇಲೆ ಹಾಕಿಕೊಂಡಿದ್ದರೂ ಸಡಿಲಾಗಿ ಕಟ್ಟಿದ್ದ ಆಕೆಯ ಹೆಳಲಗಂಟು ಎದ್ದು ಕಾಣುತ್ತಿತ್ತು. ಆಕೆಯ ಮುಂಗುರುಳುಗಳು ಸೆರಗಿನಿಂದ ಮುಚ್ಚದೆ ಇದ್ದ ಮುಂದಲೆ ಯಿಂದ ಜರಿದು ಕೆಲವು ಹಣೆಯಮೇಲೂ, ಕೆಲವು ಗಲ್ಲಗಳಮೇಲೂ ಬಿದ್ದು, ಕಮಲದಂತಿರುವ ಆಕೆಯ ಮುಖಮಂಡಲದ ಸೌಂದರ್ಯ ವನ್ನು ಹೆಚ್ಚಿಸುತ್ತಿದ್ದವು. ಆಕೆಯು ಅವಿವಾಹಿತಳೊ, ತೀರ್ಥ