ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಸ.ಚಂದ್ರಿಕೆ ಹ್ನದಲ್ಲಿ ಅವನು ನೋಡಿದ್ದನೋ, ಹಾಗೂ ಯಾವಳ ನಿಜಧ್ಯಾಸದಲ್ಲಿ ಅವನ ಮನಸ್ಸು ತೊಡಗಿತ್ತೋ ಅದೇ ಆ ಲಾವಣ್ಯವತಿಯು ಒಂದು ಗಿಡದ ಕೆಳಗೆ ನರ್ತಿಮತ್ತಾಗಿ ನಿಂತು ತನ್ನನ್ನು ನಗೆಮೊಗದಿಂದ ನೋಡುತ್ತಿರುವಂತೆ ಅವನ ಕಣ್ಣಿಗೆ ಬಿತ್ತು. ಆಗ ರಾಜಕುಮಾರನಿ ಗೆ ಇಂದು ತಾನು ಬೆಳಗಿನಿಂದ ಸ್ವಪ್ನ ಸೃಷ್ಟಿಯಲ್ಲಿರುವೆನೋ ಏನೋ ಎಂಬಂತೆ ತೋರಿದ್ದು ಆಶ್ಚರ್ಯವಿಲ್ಲ. ಕುದುರೆಯನ್ನು ತರುಬಿದ ರಮಣಿಯು ಕುಮಾರನ ಆಶ್ಚರ್ಯವಿಸ್ಮಯಗಳಿಗೆ ಅವಕಾಶವನ್ನು ಕೊಡದೆ, ಅವನ ಹತ್ತರಕ್ಕೆ ಬಂದು ಮೃದುಹಾಸ್ಯ ಮಾಡಿಕುಮಾರ, ಗುರ್ತುಹತ್ತಲೊಲ್ಲದೇನು? ಎಂದು ಕೇಳಿದಳು. ಅದರಿಂದಮತ್ತಿಷ್ಟು ಎಸ್ಕಯಾಶ್ಚರ್ಯಚಕಿತನಾದದರಿಂದ ಆವನಬಾಯಿಂದ ಶಬ್ದಗಳೇ ಹೊರಡದಾದವು. ಆಗ ಅವಳೇ ಇನಃ ನುಡಿದಳೇನಂದರೆ. ಮಹೀಪಾಲಸರೋವರದ ಬಳಿಯ ಆಟಗಳು ನೆನಪಾಗುತ್ತವೆಯೇನು? ನಿದ್ದೆಯಿಂದೆಚ್ಚವನಂತೆ ಕುಮಾರನು ಎಚ್ಚತ್ತು, ಮೆಲ್ಲಗೆ ಹೀಗೆ ನುಡಿದನು:-ಬಾಲ್ಯ ಸಭೀ ಶಕ್ತಿಮಯಾ! ಶಕ್ತಿ-ಕುಮಾರ, ನೀನು ನನ್ನನ್ನು ಮರೆತಿರಬಹುದೆಂದು ತಿಳಿದಿದ್ದೆನು. ನಾನು ಮಾತ್ರ ನಿನ್ನನ್ನು ನೋಡಿದ ಕೂಡಲೆ ಗುರ್ತಿಸಿದನು. ಆ ಕ್ಷಣದಲ್ಲಿ ಕುಮಾರನ ಹೃದಯವು ಒಂದು ತರದ ಆವೇಗದಿಂ ದ ಕಾತರಿಸಿತು. ಉತ್ತರಕ್ಷಣದಲ್ಲಿ ಪುನಃ ಸ್ಥಿರವಾಯಿತು. ಆ ಸಂ ಧ್ಯಾ ಸಮಯದ ನಿರ್ಜನಪ್ರದೇಶದಲ್ಲಿ ಕುಮಾರನೇ ಕುಮಾರನು, ಶಕ್ತಿ ಯೇ ಶಕ್ತಿಯು, ಹೀಗಾದ್ದರಿಂದ ಅವನ ಭಾವನೆಯು ಮಟ್ಟನ್ನು ತಿಳಿಯದಷ್ಟು ಚಂಚಲವಾಯಿತು. ಆದರೆ ಒಂದು ಕಾಲದಲ್ಲಿ ಯಾವ ಳೊಡನೆ ಬಾಲ್ಯದಲ್ಲಿ ಆಟವಾಟಗಳಲ್ಲಿ-ಮಾತುಕಥೆಗಳಲ್ಲಿ-ಸಂಚಾರವಿ ಹಾರಗಳಲ್ಲಿ ನಿಶ್ಚಲಿಕೆಯಿಂದ ಹಗಲಿರುಳುಗಳನ್ನು ಕಳೆಯುತ್ತಿದ್ದನೋ,