ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ಶಕ್ತಿವು, ಮಾಡಿರುವನು. ಆದ್ದರಿಂದ ಅವನು ಯಾವ ವಿಧದಿಂದಲೂ ಸೇಡಿಗೆ ಪಾತ್ರನಲ್ಲ; ಅವನು ವಿಶೇಷವಾದ ಆದರಾರ್ಹನೇ ಆಗಿರುವನು. ಕರ್ತವ್ಯಕ್ಕಾಗಿ ಶ್ರೀ ರಾಮಚಂದ್ರನೇನು ಮಾಡಿದನೆಂಬದನ್ನು ಬಲ್ಲಿ ಯಾ? ನಿನ್ನೊಡನೆ ವಿವಾಹಬೆಳಸುವದರಿಂದ ಕುಮಾರನ ವಂಶಕ್ಕೆ ಕಲ೦ಕವುಂಟಾಗುವದರಿಂದ ಅವನು ನಿನ್ನನ್ನು ಉದಾಸೀನಮಾಡಿಬಿ ಡುವದು ಅವನ ಧರ್ಮವಾಗಿರುತ್ತದೆ. ಶಕ್ತಿಯು ಸಿಟ್ಟಿನಿಂದ ಬೆಂಕಿಯಾಗಿ ಅವನು ಆದರಾರ್ಥನೇ; ಅವನು ತೀರ ಪಶುವಿನಂತೆ ವರ್ತಿಸುತ್ತಿದ್ದರೂ ಅವನು ಕರ್ತವ್ಯದಕ್ಷ ನೂ ಆದರಕ್ಕೆ ಪಾತ್ರನೂ ಆಗಿರುವನಲ್ಲವೆ? ಶ್ರೀ ರಾಮನು ಸೀತೆಯ ನ್ನು ಅರಣ್ಯಕ್ಕೆ ಅಟ್ಟಿದ್ದು ಮಹಾ ಪೌರುಷಮಾಡಿದಹಾಗಾಯಿತೇ ನು? ಅದರಿಂದ ಅವನ ಹೇಡಿತನವು ಮೂತ್ರ ಚನ್ನಾಗಿ ವ್ಯಕ್ತವಾಗು ವಂತಿದೆ. ಅವನ ಈ ಅವಿಚಾರಕ್ಕಾಗಿ ಅವನ ಪೂಜ್ಯ ದೇವನಾಮವು ಕೂಡ ಕಲಂಕಿತವಾಗುವದೆಂದು ನಾನು ಭಾವಿಸಿರುವೆನು. ಸೀತೆಯು ಅವನ ಧರ್ಮಪತ್ನಿ ಯಾಗಿದ್ದಂತೆ, ನಿಷ್ಠಾವಂತೆಪ್ರಜೆಯೂ ಆಗಿದ್ದ ಳು. ಲೋಕಾಪವಾದದ ಭಯಕ್ಕಾಗಿ ನಿರ್ದೋಷಿಯಾದ ಅವಳನ್ನು ತ್ಯಜಿಸಿದ ಅವನು ಪತಿಯ ಕರ್ತವ್ಯ, ರಾಜಕರ್ತವ್ಯ ಮತ್ತು ದೇವ ಕರ್ತವ್ಯ ಹೀಗೆ ಎಲ್ಲ ಕರ್ತವ್ಯಗಳಿಂದ ಭ್ರಷ್ಟನಾದನು. ಬಿಡು, ಆ ಕಾಪುರುಷನ ಹೆಸರನ್ನು ಕೂಡ ಎತ್ತಬೇಡ, ಇದರಂತೆ ಅವನನ್ನೇ ಪತಿಯೆಂದು ತಿಳಿದು, ಅವನ ಧ್ಯಾನದಲ್ಲಿಯೇ ಕಾಲಹರಣಮಾಡುತ್ತಿ ರುವ ನನ್ನನ್ನು ಮಿಥ್ಯಾಪವಾದದ ಭಯದಿಂದ ತ್ಯಜಿಸಿದ ಕುಮಾರ ಗಣೇಶದೇವನು ತಾನೊಬ್ಬನೇ ಕರ್ತವ್ಯಭ್ರಷ್ಟನಾದನಂತಲ್ಲ, ಹೃದಯ ಪೂರ್ವಕವಾಗಿ ವರಿಸಿದ ಪತಿಯನ್ನು ಬಿಟ್ಟು ಬಿಟ್ಟು ಸಮಾಜಾಚಾರ ಕ್ಕಾಗಿ ಅನ್ಯಸತಿಯನ್ನು ವರಿಸಹಚ್ಚಿ ನನ್ನನ್ನು ವ್ಯಭಿಚಾರಕೃತ್ಯಕ್ಕೆ ಪ್ರೇರಿಸಿ, ಧರ್ಮ-ನೀತಿಭ್ರಷ್ಟಳನ್ನಾಗಿ ಮಾಡುತ್ತಿರುವನು. ಇಂಥ