ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿತುಂA ವನ್ನು ಪಾಲಿಸು.” ಎಂದು ಗದ್ದದ ದನಿಯಿಂದ ಪ್ರಾರ್ಥಿಸಿದಳು, 'ಹೊಂದಲಾರೆ-ಅವನನ್ನು ಎಂದೂ ಹೊಂದಲಾರೆ' ಎಂಬ ಉತ್ತರವು ವಜ್ರ-ಗಂಭೀರ ಸ್ವರದಲ್ಲಿ ಕೇಳಬಂತು. ಇದನ್ನು ಕೇಳಿ ಶಕ್ತಿಯ ಮೈಯೊಳಗಿನ ರಕ್ತವೆಲ್ಲ ಕಾದುಹೋಯಿತು. ಆಗ ಅವಳು ಅತ್ಯಂತ ಸಿಟ್ಟಿನಿಂದ-ಇದು ದೇವಿಯ ವಾಕ್ಯವಲ್ಲ; ಅದಾರು ಮ ಶಾಡುವವ ನೀನು? ಎಂದು ಕೇಳಿದಳು. ಬಳಿಕ ಅವಳು ದೇವಿಯ ಮೂರ್ತಿಯ ಹಿಂಬದಿಯಲ್ಲಿ ಸಿ ನೋಡಲು ರಕ್ತವರ್ಣವಸ್ತ್ರದಿಂದ ಪರಿವೇಷ್ಟಿತನ, ಜಟಾಧರನೂ ಆದ ಒಬ್ಬ ಶಾಸ್ತ್ರ ಸನ್ಯಾಸಿಯು ಕಂಡನು. ಅವನು ಹಣೆಗೆ ಕೆಂಪು ಚಂದನವನ್ನು ಭವ್ಯವಾಗಿ ಹಚ್ಚಿಕೊಂಡಿದ್ದನು; ಕೊರಳಲ್ಲಿ ಭೀಷಣ ವಾದ ರುಂಡಮಾಲೆಯನ್ನು ಧರಿಸಿದ್ದನು. ಕೆಲಹೊತ್ತಿನವರೆಗೆ ಶಕ್ತಿ ಯು ಅವನನ್ನು ಮಿಕಿಮಿಕಿನೋಡಿ-'ನೀನ್ಯಾರು?” ಎಂದು ಪುನಃ ಗಟ್ಟಿಯಾಗಿ ಒದರಿ ಕೇಳಿದಳು.

  • “ನಾನು ದೇವಿಯ ದಾಸನು, ದೇವಿಯ ಪ್ರೇರಣೆಯಂತ ದೇ ವವಾಣಿಯನ್ನು ನುಡಿಯುತ್ತ ನಾನು ಇಲ್ಲಿಯೇ ವಾಸಿಸುತ್ತೇನೆ ಇಂದು ನಿನ್ನ ದೈವವು ತೆರೆಯಿತೆಂದೇ ನಾನು ಭಾವಿಸುವೆನು, ನಿನ್ನ ಮನೋಬಯಕೆಯು ಪೂರ್ಣವಾಗುವದಕ್ಕಾಗಿ ನೀನು ಉಳಿಯ ಉಪಾಸನೆಯನ್ನು ಮಾಡು. ದೇವಿಯ ಕೃಪೆಯಿಂದ ನೀನು ನಿನ್ನ ಹಗೆಯ ಸೇಡನ್ನು ಚೆನ್ನಾಗಿ ತೀರಿಸುವೆ; ಹಾಗು ಶ್ರೇಷ್ಠ ಪತಿಯನ್ನು ಹೊಂದುವೆ. ಆದರೆ ಕ್ಷುಲ್ಲಕನ ಹರಿಗೆ ಮಾತ್ರ ಬೀಳಬೇಡ ಅದ ನಿಂದ ನೀನೆಂದೂ ಆದರ ಹೊಂದಲಾರೆ; ಅನಾದರಕ್ಕೆ ಮಾತ್ರ ನಿತ್ಯ ಯವಾಗಿ ಪಾತ್ರಳಾಗುವೆ. ಅವನ ಪತ್ನಿ ಯಾಗುವದೊತ್ತಟ್ಟಿಗೇ ಇರ ಲಿ, ಉಪಪತ್ನಿಯೆಂದು ಕೂಡ ನಿನ್ನನ್ನು ಅವನು ಗ್ರಹಿಸಲಾರನು. ಈ ವಚನವು ಖಂಡಿತವೆಂದು ತಿಳಿದುಕೋ. ಎಂದನು