LY ತ, ಚಂದ್ರ, ಸನ್ಯಾಸಿನಿಯು ಕಣ್ಣಿಗೆ ಬಿದ್ದಳು. ಕೂಡಲೆ ಸೈನಿಕರಿಗೆ ಹೇಳಿ, ಅವರು ಬಿಡುವದಿಲ್ಲೆಂದರೂ ನಿಮ್ಮ ಸೇನಾಪತಿಗಳ ಮುಂದೆ ಹೇಳುವೆನೆಂದು ತಿಳಿಸಿ ಸನ್ಯಾಸಿನಿಯನ್ನು ಬಂಧವಿಮೋಚನ ಮೂಡಿದೆನು. ಅದರಿಂದ ತಿರುಗಿ ಬರಲಿಕ್ಕೆ ಸ್ವಲ್ಪ ತಡವಾಯಿತು, ಆಜೀಮ-ತೋಬಾ, ತೋಬಾ, ಕುನೂರ ನೀನು ಇದೇನು ಮೂಡಿ ಬಂದೆ? ನಬಾಬಯಸುದ್ದೀನನ ಪಾರುಪತ್ಯ ಮಾಡಲು ಮಿಸಿದ ಬಾದಶಹನು, ನಿನ್ನನ್ನು ತನ್ನ ಸಹಾಯಕ್ಕೆ ಬರಮೂಡಿಕೊಳ್ಳ ಲಿಕ್ಕೆಂದು ನನ್ನನ್ನು ನಿನ್ನ ಬಳಿಗೆ ಕಳಿಸಿದ್ದನು. ಆದರೆ ಆ ರಾಜ ದ್ರೋಹಿಯಾದ ಸನ್ಯಾಸಿನಿಯನ್ನು ರಾಜಾಜ್ಯವಿನಃ ಬಂಧನ ಕೈಮಾಡಿ ನೀನೂ ರಾ ಜಾ ಪರಾ ಧ ಕ್ಯಾ ಗಿ ಗುರಿಯಾದೆಯಲ್ಲ? ಕುನೂರ, ವಿಚಾರಮೂಡು; ಈ ಪ್ರಸಂಗದಲ್ಲಿ ನೀನು ಬಾದಶಹನಿಗೆ ಮನಮುಟ್ಟಿ ಸಹಾಯ ಮಡಿದರೆ ನೀನು ಬೇಗನೆ ಘನತೆಗೇರುವೆ? ಆದರೆ ಈಗಿನ ನಿನ್ನ ಈ ಕೃತಿಯಿಂದ ನಿನಗೆ ಯಾವ ಪ್ರಯೋಜನವೂ ಆಗದೆ, ಕೇವಲ ರಾಜದ್ರೋಹಿಯಾಗಿ ರಾಜಶಾಸನಕ್ಕೆ ಮೂತ್ರ ಗುರಿಯಾಗುವದು ಖಂಡಿತ. ಆದ್ದರಿಂದ ಕುವರ ನೀನು ಈಗಿಂದೀ ಗಲೆ ಆ ಸನ್ಯಾಸಿನಿಯನ್ನು ಪುನಃ ನಮ್ಮ ದಂಡಾಳುಗಳ ವಶಕ್ಕೆ ಕೊಟ್ಟು ನಿನ್ನ ದಂಡಿನೊಡನೆ ಬಾದಶಹನ ಸಹಾಯಕ್ಕೆ ಬಾ, `ಕುಮಾರ-ಸೇನಾಪತಿ, ಅದಾಗದು; ಕಾಲತ್ರಯದಲ್ಲಿಯ ಆ ಸಂಗತಿಯು ನನ್ನಿಂದಾಗದು. “ಶರಣಾಗತ ರಕ್ಷಕ' ಧರ್ಮವು ನಮ್ಮ ಹಿಂದೂ ರಾಜರ ಮುಖ್ಯಧರ್ಮವಾಗಿದ್ದು, ಅದಕ್ಕಾಗಿ ಪ್ರಸಂಗಬಿದ್ದರೆ ನಾವು ನಮ್ಮ ರಾಜ್ಯ ಹಾಗು ಪ್ರಾಣಗಳನ್ನು ಕೂಡ ಕಳಕೊಳ್ಳಲಿಕ್ಕೆ ಹಿಂದುಮುಂದು ನೋಡಲಾರೆವು. ಮೇಲಾಗಿ ಆಸನ್ಯಾ ಸಿನಿಯು ಕೇವಲ ನಿರಪರಾಧಿಯಾದ್ದರಿಂದ ಆಕೆಯ ವಿಷಯದಲ್ಲಂತೂ ನಿಮ್ಮ ಆಲೋಚನೆಯನ್ನು ನಾನು ಎಂದೂ ಮನ್ನಿಸಲಾರೆನು,
ಪುಟ:ಶಕ್ತಿಮಾಯಿ.djvu/೭೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.