ಈ ಪುಟವನ್ನು ಪ್ರಕಟಿಸಲಾಗಿದೆ

"ಪ್ರಜೆಯಂ ಪಾಲಿಸಬಲ್ಲೊಡಾತನರಸಂ", "ಕೈಯಾಸೆಯಂ ಮಾಡದಂ
ನಿಜಮಂತ್ರೀಶ್ವರ" ಎಂದು ಅರಸ ಮತ್ತು ಮಂತ್ರಿಗಳ ಮುಖ್ಯಲಕ್ಷಣವನ್ನು ಹೇಳಿ
ಮುಂದೆ ಇತರ ಗುಣಾದಿಗಳನ್ನು ವಿವರಿಸುತ್ತಾನೆ.
ದೊರೆಯ ಒಡ್ಡೋಲಗದ ಚಿತ್ರ ಹೀಗಿದೆ:
" ವರವಿದ್ವಾಂಸ ಕವೀಂದ್ರ ಗಾಯಕ ಪುರಾಣಜ್ಞ‌ರ್ ಮಹಾಪಾಠಕರ್
ಪರಿಹಾಸೋಚಿತಿತಿಹಾಸ ಮಂತ್ರ ಶಕುನಜ್ಞರ್‌ ವಾಗ್ಮಿಗಳ್ ವೇಶಿಯರ್
ಶರಶಸ್ತ್ರಾದಿ ಸಮಸ್ತ ವಿದ್ಯೆಯಲೆದರ್ ಕಾಲಾಳು ಮೇಲಾಳಿರಲ್
ದೊರೆಯೊಡ್ಡೋಲಗ ಚೆಲ್ವುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ- ೬೧
ಅರಸ ಈ ಕೆಳಗಿನ ವಿಷಯಗಳಲ್ಲಿ ಎಚ್ಚರದಿಂದಿರಬೇಕಂತೆ :
ಧುರದೊಳ್ ತನ್ನಯ ವೀರರೊಳ್ ಪ್ರಜೆಗಳೊಳ್ ದಾಯಾದ್ಯರೊಳ್ ಭೃತ್ಯರೊಳ್
ಪುರದೊಳ್ ಬಂಧುಗಳೊಳ್ ಸುಭೋಜನಗಳೊಳ್ ವೈದ್ಯಂಗಳೊಳ್ ಸಂಗದೊಳ್
ಅರಿಯೊಳ್ ಜೋತಿಷಮಂತ್ರವಾದದೆಡೆಯೊಳ್ ವಿದ್ವಾಂಸರೊಳ್ ತತ್‌ಕ್ಷಣಂ
ಅರಸಂಗೆಚ್ಚರು ಬೇಕೆಲೈ ಹರಹರ ಶ್ರೀ ಚೆನ್ನಸೋಮೇಶ್ವರಾ - ೬೪
ಮಂತ್ರಿಯ ಲಕ್ಷಣಗಳೇನು ?
ಅತಿಗಂಭೀರನುದಾರಧೀರನು ಮಹಾಸಂಪನ್ನ ಸದ್ವರ್ತನೂ
ರ್ಜಿತ ನಾನಾಲಿಪಿಭಾಷೆಯೊಳ್ ಪರಿಚಿತಂ ಲಂಚಕ್ಕೆ ಕೈನೀಡದಂ
ವ್ರತಿ ಸದ್ದರ್ಮ ವಿಚಾರಶಾಲಿ ಚತುರೋಪಾಯಂಗಳಂ ಬಲ್ಲವಂ
ಪತಿಕಾರ್ಯಂ ಪ್ರತಿಮಂತ್ರಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ - ೭೦
ಕುತಂತ್ರಿ ಗಣಕನ ಚಿತ್ರ ಹೀಗಿದೆ:
ಅಣುಮಾತ್ರಂ ನದರಿಲ್ಲದಾಣ್ಮನೆಡೆಯೊಳ್ ಲಂಚಕ್ಕೊಡಂಬಟ್ಟು ಮಾ
ರ್ಪಣಮಂ ಕೊಂಡತಿವಿತ್ತಮಂ ಕೆಡಿಸಿ ಚಾಡೀ ಕೇಳಿ ದ್ರೋಹಂಗಳಂ
ಎಣಿಸುತ್ತೆಲ್ಲರ ಬಾಳ್ಗೆ ನೀರನೆದಾರುಂ ಕಾಣದೇ ಭಕ್ಷಿಪಾ
ಗಣಕಂ ಹೆಗ್ಗಣಕಂ ಸಮಂ ಹರಹರಾ ಶ್ರೀ ಚೆನ್ನಸೋಮೇಶ್ವರಾ - ೭೩
ಹೀಗೆಯೇ ದಳವಾಯಿ, ಶಾನುಭೋಗ ತಳವಾರರು ನಡೆಸುವ ಅವ್ಯವಹಾರಗಳನ್ನೂ
ಇಲ್ಲಿ ಬಿಚ್ಚಿಡಲಾಗಿದೆ (ಪದ್ಯ ೭೨, ೭೪, ೭೫).
ವೇಶ್ಯಾ ನೀತಿಯಲ್ಲಿ ಗಣಿಕಾಸ್ತ್ರೀಯರ ಸ್ವಭಾವಚಿತ್ರವನ್ನು ಚೆನ್ನಾಗಿ ಬಿಡಿಸಲಾಗಿದೆ:
( ನೋಡಿ ಪದ್ಯ ೮೨, ೮೩, ೮೪, ೮೫ ).
ಹಣಮುಳ್ಳಂ ಹೆಣನಾದೊಡಂ ಮಮತೆಯಿಂ ತಾನಾವಗಂ ಬಿಟ್ಟಿರಲ್
ಕ್ಷಣಮಾತ್ರಂ ಬಲುಬೂಟಕಂ ಗಳಪಿ ಹರ್ಷೋತ್ಸಾಹದಿಂ ಹಾಲ ಮುಂ

xxvii