ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರತಿಗಳಲ್ಲಿ 'ಖಾದ್ರಿಪುರ'ವೆಂದು ಹೇಳಿಲ್ಲ. ಶತಕದ ಕೊನೆಯ ಪದ್ಯದಲ್ಲಿ " ತುಂಗಭದ್ರ
ತೀರದೊಳೆಸೆವ ಕದ್ರುಭವಪುರವಾಸ ನಿಜಲಿಂಗ ಭವಭಂಗ ಶರಣಜನ ವರದ
ಜಯತು " ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಕದ್ರುಭವ ಎಂದರೆ ಸರ್ಪ, ಹಾವು
ಎಂದು ಅರ್ಥ. 'ಕದ್ರುಭವಪುರ' ಎಂದರೆ 'ಹಾವನೂರು' ಎಂದಾಗುವುದು.
ತುಂಗಭದ್ರಾತೀರದಲ್ಲಿ 'ಖಾದ್ರಿಪುರ' ಎಂಬ ಗ್ರಾಮ ಇಲ್ಲ. ಗುತ್ತಲದ ಸಮೀಪದಲ್ಲಿ
'ಹಾವನೂರು' ಎಂಬ ಒಂದು ಗ್ರಾಮವಿದೆ. ಮತ್ತು ನಮ್ಮಲ್ಲಿದ್ದ ಒಂದು ಪ್ರತಿಯ
ರಟ್ಟಿನ ಮೇಲೆ " ನಿಜಲಿಂಗ ಗುತ್ತಳದ ವಾರ್ಧಿಕ ಷಟ್ಪದಿ " ಎಂದು ಬರೆಯಲಾಗಿದೆ.
ಇದರಿಂದ ನಿಜಲಿಂಗಾರಾಧ್ಯನು ಗುತ್ತಲಗ್ರಾಮಕ್ಕೆ ಸಂಬಂಧಪಟ್ಟವನೆಂದು ನಂಬಲು
ಆಧಾರದ ಎಳೆ ಸಿಗುತ್ತದೆ. ಇಷ್ಟೇ ಅಲ್ಲದೆ ಶತಕದಲ್ಲಿ ಹೇಳಿದ " ಕದ್ರುಭವಪುರದ
ನಿಜಲಿಂಗೇಶ್ವರನು " ಕವಿಯ ಇಷ್ಟದೈವವಾಗಿದ್ದಾನೆ. ಹಾವನೂರು ಗುತ್ತಲದ
ಸಮೀಪದಲ್ಲಿದೆ. ಹಾವನೂರಲ್ಲಿ ಸಿದ್ದೇಶ್ವರ ದೇವಾಲಯವಿದ್ದು ಇಂದಿಗೂ
ಪುಣ್ಯಕ್ಷೇತ್ರವಾಗಿದೆ. ಆ ಸಿದ್ದೇಶ್ವರನೇ ಕವಿಯ ಇಷ್ಟದೇವತೆ ನಿಜಲಿಂಗನಾಗಿರಲು
ಸಾಧ್ಯವಿದೆ. ಹೀಗಿರಲು ತುಂಗಭದ್ರತೀರದಲ್ಲಿ ಸಮಿಸಮೀಪವಾಗಿರುವ ಹಾವನೂರು,
ಗುತ್ತಲಗ್ರಾಮಗಳು ನಿಜಲಿಂಗಾರಾಧ್ಯನು ಹುಟ್ಟಿ, ಬಾಳಿದ ಸ್ಥಳಗಳಾಗಿರಬೇಕೆನಿಸುತ್ತದೆ ".
(ಪೂರ್ವೋಕ್ತ ಪ್ರಸ್ತಾವನೆ.ಪು.೧೨-೧೩).
ಈಗ ದೊರೆತ ಎಲ್ಲ ಹಸ್ತಪ್ರತಿಗಳಲ್ಲಿಯೂ 'ಕದ್ರುಭವಪುರ' ಎಂದೇ
ಇರುವುದರಿಂದ ಅದರ ಕನ್ನಡ ರೂಪ 'ಹಾವನೂರು' ಎಂಬುದೇ ಕವಿಯ
ಸ್ಥಳವಾಗಿದೆ ಎಂದು ಸ್ಪಷ್ಟವಾಗುತ್ತದೆ. ನಿಜಲಿಂಗೇಶ ಈತನ ಇಷ್ಟದೈವ. ಅದೇ
ಹೆಸರನ್ನು ಈ ಕವಿಗೆ ಇಡಲಾಗಿದೆ. ಹೀಗಾಗಿ ಕವಿಯ ಹೆಸರಿನಿಂದಲೇ ಈ ಶತಕ
ಪ್ರಸಿದ್ಧವಾಗಿದೆ - ಎಂದು ಹೇಳಬಹುದು.
ಕೃತಿಯಲ್ಲಿ ಅದರ ರಚನಾ ಕಾಲದ ವಿಷಯವೂ ಉಲ್ಲೇಖವಾಗಿಲ್ಲ. ಅನ್ಯ
ಮೂಲಗಳಿಂದಲೂ ಈ ಕುರಿತು ಯಾವುದೇ ಆಧಾರಗಳು ಸದ್ಯಕ್ಕೆ ಲಭ್ಯವಿಲ್ಲ.
ಹೀಗಾಗಿ ನಿಜಲಿಂಗಾರಾಧ್ಯನ ಕಾಲವೂ ನಿಶ್ಚಿತವಾಗಿಲ್ಲ. ಕವಿಚರಿತ್ರೆಕಾರರು ಕೃತಿಯ
ಭಾಷಾಶೈಲಿಯನ್ನು ಗಮನಿಸಿ ಈ ಕವಿ ಕ್ರಿ.ಶ. ೧೮೦೦ರಲ್ಲಿ ಬಾಳಿಬದುಕಿರಬೇಕು
ಎಂದು ಊಹಿಸಿದ್ದಾರೆ. ಇದನ್ನು ಡಾ. ಎಂ. ಎಸ್. ಸುಂಕಾಪುರ ಮೊದಲಾದವರೂ
ಸಮ್ಮತಿಸಿದ್ದಾರೆ. ಬೇರೆ ಹೆಚ್ಚಿನ ಆಧಾರಗಳು ದೊರೆಯುವವರೆಗೆ ಇದನ್ನೇ
ಒಪ್ಪಿಕೊಳ್ಳಬಹುದು.
ನಿಜಲಿಂಗಾರಾಧ್ಯನ ಹೆಸರು, ಇಷ್ಟದೈವ, ಆತನ ಕೃತಿಯಲ್ಲಿ ವಿಶೇಷವಾಗಿ
ಬರುವ ಶಿವಸ್ತುತಿ ಮುಂತಾದವುಗಳನ್ನು ಗಮನಿಸಿದರೆ ಈತ 'ವೀರಶೈವ' ಮತಕ್ಕೆ

xxxi