ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಕುಂತಲನಾಟಕ ನವೀನಟೀಕೆ ಕಣ್ಯಮುನಿಯು ಎಲ್‌ ಮಗಳೇ, ಕೇಳು, ಯಾವ ಮೃಗವಂ ದರ್ಭೆ ಗಳ ಕೊನೆಯಿಂ ಗಾಯವಾಗಿರುವ ಮುಖದಲ್ಲಿ ವ್ರಣಹರವಾದ ಇಂಗಳದ ಎಣ್ಣೆ ಯಂ ಹತ್ತಿಸಿ ಸಲಹಿದೆಯೋ, ಮತ್ತು ಕಾಡಿನಲ್ಲಿ ಬೆಳೆದ ಸಾಮೆಯೆಂಬ ಧಾನ್ಯವು ಷ್ಟಿಯಿಂ ವೃದ್ದಿ ಯಂ ಪೊಂದಿಸಿದೆಯೋ, ಹಾಗೆ ನಿನ್ನಿಂದ ಪೋಷಿತವಾಗಿ ಪುತ್ರನಂತೆ ಪ್ರೇಮಾಸ್ಪದವಾಗಿರುವ ಈ ಹುಲ್ಲೆಯ ಮಿಯು ನೀನು ಪೋಗುವ ಮಾರ್ಗವಂ ಬಿಟ್ಟು ಎಂತು ಪೋಗುವುದು ! ” ಎಂದು ನುಡಿಯಲು; - ಶಕುಂತಲೆಯು ಆ ಹುಲ್ಲೆ ಯ ಮ ಯಂ ಕುಜ ತು– ಮೊಗುವೇ, ನಿನ್ನ ಸಹವಾಸವನ್ನೇ ಬಿಟ್ಟು ವೋಗುತ್ತಿರುವ ಎನ್ನ ಯಾತಕ್ಕೆ ಅನುಸರಿಸಿ ಬರುತ್ತಿ ರುವೆ ? ನೀನು ನವಮಾಸವೂ ಹೊಟ್ಟೆಯೊಳಿಟ್ಟು ಸೆತ್ತ ತಾಯಿಯಿಲ್ಲದೆ ಎನ್ನಿಂದಲೇ ರಕ್ಷಿಸಿಕೊಂಡಿರುವೆ. ಈಗಲೂ ಎನ್ನ ಅಗಲಿರುವ ನಿನ್ನ ತಂದೆಯಾದ ಕಣ್ಯ ಮುನಿಯುಹಾನಿವೃದ್ಧಿಯಂ ಚಿಂತಿಸುತ್ತ ಸಂರಕ್ಷಿಸುವನಾದ್ದ 3೦ ಹಿಂದಿರುಗಿ ಪೋಗು ” ಎಂದು ನುಡಿದು, ಅಧಿಕ ಮಾಗಿ ಕಣ್ಣೀರುಗಳಂ ಬಿಡುತ ಪೋಗುತ್ತಿರಲು; ಕಣ್ಯ ಮುನೀಶ್ವರನಾಶಕುಂತಲೆಯ ಮುಏವಂ ನೋಡಿ ಎಲ್‌ಪಿಯೇ, ಮನವಂ ದೃಢನಂ ಗೆಯ್ಯು ಉನ್ನ ತಂಗಳಾದ ರೆಪ್ಪೆಗಳಿಂದೊಪ್ಪತ್ತಿರುವ ನಿನ್ನ ನೇತ್ರಗಳಿಂ ಪೊ *ಮಡುತ್ತಿರುವ ಕಂಬನಿಗಳಂ ಹೊಸೂಸದಂತೆ ಸಿರೋಧವೇ ಗೆಯ್ಯುವುದು. ಏಕೆಂದರೆ ಈ ತಪೋವನದ ಮಾರ್ಗವು ಕಾಣದೆ ವ್ಯತ್ಯಾಸಗಳಾ ಗುವುದು.” ಎಂದು ನುಡಿದು ಅವಳ ದುಃಖವಂ ಸಮಾಧಾನವಂ ಗೆಯ್ಯುತ್ತಿರಲು ; ಶಾರ್ಬ್ಲರವನೆಂಬ ಶಿಷ್ಯನು ಗುರುವಾದ ಕಣ್ವಮುನೀಶ್ವರನಂ ಕುಯ ತು,- “ಎಲೈ ಷಡ್ಗುಣೈಶ್ವರ ಸಂಪನ್ನ ನಾದ ಸ್ವಾಮಿಯೇ, ಕಳುಹಿಸುವುದಕ್ಕೆ ಸಂಗಡ ಒಂದ ಬಂಧುಗಳು ಜಲವಂ ದಾಂಟಿ ಬರಕೂಡದು, ಎಂಬ ಶಾಸ್ತ್ರವು ಕೇಳಿರುವೆನು. ಆದ್ದ ಇ೦ ಮುಂಗಡೆಯಲ್ಲಿ ಸರೋವರವು ಕಾಣುತ್ತಿರುವುದು. ಇಲ್ಲಿ ನಿಂತು ನಮಗೆ ಹೇಳತಕ್ಕ ನೀತಿಮಾರ್ಗವಂ ಪೇಳಿ ಹಿಂದಿರುಗಿ, ಸರ್ಣಶಾಲೆಯಂ ಕುತು ಪೋಗ ಬಹುದು' ಎಂದು ಬಿನ್ನೆ ಸಲು; ಆ ವಾಕ್ಯಕ್ಕೆ ಕಣ್ವಮುನಿಯು ಸಮ್ಮತನಾಗಿ, ಮುಂಭಾಗದಲ್ಲಿರ್ದ ಹಾಲೆ ಯ ಮರದ ನೆರಳಂ ಸೇರುವೆನೆಂದು ಶಕುಂತಲೆ ಮೊದಲಾದ ಸಮಸ್ತರಿಂದೊಡ ಗೂಡಿ ಬಂದು, ಪೂಜ್ಯನಾದ ದುಷ್ಯಂತರಾಯಂಗೆ ಯುಕ್ತವಾದ ಏನು ವಾಕ್ಯವಂ ಪೇಳಿ ಕಳುಹಿಸಲಿ, ಎಂದು ತನ್ನ ಮನದೊಳಾಲೋಚನೆಯಂ ಗೆಯ್ಯುತ್ತಾ ನಿಲ್ಲಲು ; ಶಕುಂತಳೆಯು ಆ ಕೊಳದ ಅಂಚಿನಲ್ಲಿ ಸಂಚರಿಸುವ ಒಂದಾನೊಂದು ಚಕ್ರ 12