ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ ಕರ್ಣಾಟಕ ಕಾವ್ಯಕಲಾನಿಧಿ ಪದಿಕೆಯೆಂಬ ಸ್ತ್ರೀಯಂ ಕುತು, ತುಂಬಿಯನ್ನೆ ನಗೆಯು ಚೆನ್ನಾಗಿ ಎನ್ನ೦ ನಿಂದಿ ಸುತ್ತಿರುವೆ, ಎಂದು ಹೇಳುವುದು ” ಎನ್ನಲು ವಿದೂಷಕನು-ಆಜ್ಞೆಯು ಯಾವ ಮೇರೆಗೆ ಆಗುವುದೋ ಆ ಪ್ರಕಾರವಾಗಿ ನಡೆದು ಕೊಳ್ಳುವೆನೆಂದು ತಾನಿರ್ದ ಸ್ಥಾನದಿಂದೆದ್ದು, ( ಕಾಮಕ್ರೋಧಾದಿಗಳಿಂ ವಿರಹಿತನಾದ ಪುರುಷನಾದರೂ ಸುಂದರಿಯಾದ ಅಪ್ಪರಸ್ತ್ರೀಯ ಕೆಯ್ಯಲ್ಲಿ ತನ್ನ ಜುಟ್ಟು ಕೊಟ್ಟು ಬಿಡಿಸಿಕೊಳ್ಳಲಾಗಿದೆ ಹೇಗೆ ಕಷ್ಟವಂ ಪೊಂದುವನೋ, ಅವನಂತೆ ನಾನು ಈ ದುಷ್ಯಂತರಾಯನ ಕೈಗೆ ಸಿಕ್ಕಿ ಬಿಡಿಸಿಕೊಳ್ಳಲಾಗಿದೆ ಶ್ರಮಪಡುವ ನಾಗುತ್ತಿರುವೆನು, ಮುಂದೆ ಎನಗೆ ಗತಿಯೇನು? ” ಎಂದು ನುಡಿಯುತ್ತಿರಲು; ಆ ವಾಕ್ಯವಂ ಕೇಳ ರಾಯನು ಮುಗುಳ್ಳಗೆಯಿಂ ಯುಕ್ತವಾದ ಮುಖಾ ರಸಿಂದನಾಗಿ,_* ಎಲೈ ವಿದೂಷಕನೇ, ನಿನ್ನ ಪರಿಹಾಸ್ಯದ ನುಡಿಯು ಹಾಗಿರಲಿ, ಚಾಣೆಯುಳ್ಳವನಾಗಿ ಪೋಗಿ ನಾ ಪೇಳ ವಾಕ್ಯವನ್ನಾ ಹಂಸಪದಿಕೆಗೆ ಪೇಳು ಎನಲು; ವಿದೂಷಕನು ಅದೇ ರೀತಿಯಿಂದ ಪೊಡಮಟ್ಟು ಪೋಗಲು ; ಆ ರಾಯನು, ಉಪಶ್ರುತಿಯಂತೆ ಉಂಟಾದ ಗಾನಸ್ವರವಂ ಕೇಳಿ, ಏನೋ ಒಂದು ಕಳವಳವೂ ಮನದಲ್ಲಿ ಉಂಟಾಗಿ, ಈ ಗಾನಸ್ವರವಂ ಕೇಳಿದಾರಭ್ಯವಾಗಿ ಇಷ್ಟ ಜನದಗಲಿಕೆ ಇಲ್ಲದಿರ್ದರೂ ಹೃದಯದಲ್ಲಿ ಮಹತ್ತಾದ ಸಂತಾಪವುಂಟಾ ದುದು.” ಎಂದು ತನ್ನೊಳು ತಾನು ಆಲೋಚನೆಯಂ ಗೆಯ್ಯುತ್ತಾ, ಮತ್ತು ಲೋಕದಲ್ಲಿ ಇಷ್ಟ ಜನರಿಂದೊಡಗೂಡಿ ಸಂತುಷ್ಟಹೃದಯನಾಗಿರ್ದ ಪುರುಷನು ತನ್ನ ಮನಸ್ಸಿಗೆ ಆನಂದವನ್ನುಂಟುಮಾಡುವ ಸಂದರಗಳಾದ ಪದಾರ್ಥಂಗಳಂ ನೋಡಿದ್ದ೬.೨೦ರ ಕರ್ಣಸುಖವನ್ನು ಂಟುಮಾಡುವ ಗಾನಸ್ವರವಂ ಕೇಳಿದ್ದ ಇ೦ದ, ಜನ್ಮಾಂತರದಲ್ಲಿ ತಾನು ಮಾಡಿದ ಮಿತ್ರತ್ವ ಮೊದಲಾದ ವ್ಯಾಪಾ ರಮಂ ಮನದಲ್ಲಿ ಸ್ಮರಿಸಿ ಇಂಥದೆಂದು ಹೇಳುವುದಕ್ಕಾಗದೆ ಪರ್ಯಾಕುಲ ನಾಗುವಂತೆ ಈಗ ನಾನೀTಾನಸ್ವರವಂ ಕೇಳಿದ್ದ ಕ೦ ಪೂರ್ವದಲ್ಲಿ ಒಂದು ಕಾರವಂ ನಾನು ಮಾಡಿದವನಂತೆಯ ಆದಂ ಈಗ ಮತತು ಕಳವಳವಂ ಪೊಂದುವನಂತೆ ಯ ತೋಡುವುದೆಂದು ಆಲೋಚನೆಯಂ ಗೆಯ್ಯುತಿರಲು ; ಅಷ್ಟ ಇಲ್ಲೇ ಬಾಗಲು ಕಾವಲಲ್ಲಿರ್ದ ವೃದ್ಧನಾದ ದ್ವಾರಪಾಲಕನು ರಾಯ ಸಿಗುವ ಹಜಾರಕ್ಕೆ ಪ್ರವೇಶವಂ ಗೆಯ್ಯು, ಮೊದಲು ಯೌವನಕಾಲದಲ್ಲಿ ಅನೇಕ