ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೧೫ ಶಕುಂತಲೆಯು ರಾಯನಾಡಿದ ವಾಕ್ಯವಂ ಕೇಳಿ ತನ್ನ ಎದೆಯಲ್ಲಿ ಹಸ್ತಗಳ ನ್ನಿರಿಸಿ ನಡುಗುತ್ತಿರುವ ಮನವ ಕುಲ ತು- ಎಲೆ ಮನವೇ, ಪೂಜ್ಯನಾದ ದುಷ್ಯಂತರಾಯನ ಮನೋವೃತ್ತಿಯಂ ಚೆನ್ನಾಗಿ ತಿಳಿಯದೆ ದೊರೆಯದವನು ಪರ ಸ್ತ್ರೀಯಂ ನೋಡಬಾರದೆಂದು ಸಾಧಾರಣವಾಗಿ ಹೇಳಿದ ಮಾತ್ರದಿಂದಲೇ ನಡುಗ ಬೇಡ, ಧೈಠ್ಯವನ್ನವಲಂಬಿಸು ಎಂದು ತನ್ನೊಳು ತಾನು ನುಡಿದುಕೊಳ್ಳುತ್ತಿರಲು, ಸೋಮರಾತನೆಂಬ ಪುರೋಹಿತನು ರಾಯನಂ ಕುರಿತು ಎಲೆ ಮಹಾರಾಯನೇ, ಈ ಋಷಿಗಳಂ ಧೂಪ ಮೊದಲಾದ ವೇದೋಕ್ತವಾದ ಉಪಚಾ ರಂಗಳಿಂ ಪೂಜೆಯಂ ವಿರಚಿಸಿರುವೆನು. ಇವರ ಗುರುವಾದ ಕಣ್ವ ಮಹಾಮುನಿ ಯು ಸ್ವಾಮಿಯವರಿಗೆ ಕೆಲವು ವಾಕ್ಯವಂ ವಿಜ್ಞಾಪನೆಯಂ ಗೆಯ್ಯುವುದೆಂದು ಕಳುಹಿಸಿರುವನಂತೆ. ಅದಂ ಚಿತ್ತವಿಟ್ಟು ಕೇಳಬೇಕು ” ಎಂದು ಆಕೆ ಕೆ ಗೆಯು ಕೆಲದೊಳ್ ನಿಲ್ಲಲು; ಆರಾಯನು ಆ ಪುರೋಹಿತನ ವಾಕ್ಯವಂ ಮನದಲ್ಲದೆ ಋಷಿಗಳು ಪ್ರಶ್ನೆ ಯಂ ಗೆಯ್ಯುವೆನೆಂದು ಹೇಳುತ್ತಿರ್ದನು. ಎಂಬಲ್ಲಿಗೆ ಕೃಷ್ಣರಾಜವಾಣೀವಿಲಾಸ ರತ್ನಾ ಕರವೆಂಬ ಶಾಕುಂತಲನಾಟಕ ನವೀನಟೀಕಿನಲ್ಲಿ ಶಕುಂತಲೆ ಗೆ'ತಮಿ ಶಾ೯ರವ ಶಾರತ ಋಷಿಗಳು ದುಷ್ಪಂ ತಮಹಾರಾಯನಂ ಕಂಡರೆಂಬ ತೃತೀಯಕಲ್ಲೋಲದಲ್ಲಿ ತೃತೀಯತರಂಗಂ ಸಂಪೂರ್ಣ೦. s !VERSITY '೦. - ತೃತೀಯ ಕಲ್ಲೊಲದ ಚತುರ್ಥತರಂಗು. ಅನಂತರದಲ್ಲಿ ಆ ದುಷ್ಯಂತರಾಯನು ಆ ಋಷಿಗಳಂ ಕು ತ ಪ್ರಶ್ನೆ ಯಂ ಗೆಯ್ಯಬೇಕೆಂದು ಮನದಲ್ದಾಲೋಚನೆಯಂ ಗೆಯ್ಯುತ್ತಿರುವಷ್ಟಲ್ಲೇ ಆ ಋಷಿಗ ಳೀಶ್ವರು ತಮ್ಮ ಹಸ್ತಗಳನ್ನೆತ್ತಿ_ಎಲೈ ಮಹಾರಾಯನೇ ! ಜಯವುಳ್ಳವನಾಗಿ, ಪುತ್ರಪೌತ್ರಾಭಿವೃದ್ಧಿ ಯಿಂ ಯುಕ್ತನಾಗು ! ” ಎಂದು ಆಶೀತ್ಯಾದವ ಗೆಯ್ಯಲು; ರಾಜನು ತಾನು ಕುಳಿತಿರ್ದ ರತ್ನ ಪೀಠದಿಂದೆದ್ದು ಆ ಋಷಿಗಳ ಪಾದಗ ಳಿಗೆ ವಂದನೆಯಂ ಗೆಯ ವಿನೆಯನ್ವಿತನಾಗಲು; 14