ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನ ಟಿಕೆ nh ಅಷ್ಟ ಅಲ್ಲೇ ಸ್ವರ್ಗದಲ್ಲಿರ್ದ ಮೇನಕೆಯು ತನಗೆ ಮಿತ್ರರಾದ ಸಾನುಮತಿ ಸಾರಸಿಕೆಯರೆಂಬ ಸಖಿಯರಂ ಕುಹತು- ಎಲ್‌ ಸಖಿಯರುಗಳಿರಾ, ಎನ್ನ ಮಗ ೪ಾದ ಶಕುಂತಲೆಯಂ ಕಣ್ಯ ಮುನೀಶ್ವರನು ಹಿಮತ್ರರ್ವತದ ತಪ್ಪಲಿಂ ತೆಗೆದು ಕೊಂಡುವೋಗಿ ತನ್ನಾಶ್ರಮದಲ್ಲಿ ಪ್ರೇಮದಿ ತನ್ನ ಪುತ್ರಿಗಿಂತಲೂ ಅತಿಶಯವಾಗಿ ಸಲಹುತ್ತಿರುವನೆಂತಲೂ, ಚಂದ್ರವಂಶೋತ್ಪನ್ನನಾದ ದುಷ್ಯಂತರಾಯನು ಆ ಕಣ್ವಮುನಿಯ ತಪೋವನದಲ್ಲಿರ್ದ ಎನ್ನ ಮಗಳಾದ ಶಕುಂತಲೆಯಂ ಗಾಂಧರ್ವ ವಿವಾಹದಿಂ ವಿವಾಹಿತಳಂ ಮಾಡಿಕೊಂಡು ಪೋದನೆಂತಲೂ, ಶಕ್ರಾವತಾರ ತೀರ್ಥ ಸಂರಕ್ಷಣೆಗೋಸುಗ ಫೋಗಿರ್ದ ಕಾಂತಿಮತಿಯ ಮುಖವಚನದಿಂದ ತಿಳಿದಿರುವೆನು. ಆದ್ದರಿಂನೀವಿಬ್ಬರೂ ಶಕ್ರತೀರ್ಥಸಂರಕ್ಷಣೆಯಂ ಗೆಯ್ಯುವುದಕ್ಕೆ ಪೋಗುತ್ತಿರುವಿ ರಷ್ಟೆ. ಅಲ್ಲಿ ಎನ್ನ ಪುತ್ರಿಯ ಯೋಗಕ್ಷೇಮ ವಂ ತಿಳಿದುಬರುವುದು. ಮತ್ತು ಆ ಶಕು ತಲೆಯು ಆ ಕಣ್ವಮುನಿಯ ತಪೋವನದಲ್ಲಾಗಲಿ ಅವಳ ಪತಿಯಾದ ದುಷ್ಯಂತರಾ ಯನ ಅಂತಃಪುರದಲ್ಲಿಯಾಗಲಿ ಸಂತೋಷದಲಿರ್ದರಂತು ನಮಗೆಲ್ಲರಿಗೂ ಸಮ್ಮ ತವೇ ಸರಿ. ಅದಲ್ಲದೆ ಆ ದುಷ್ಯಂತರಾಯನು ಬಹು ಜನಸ್ತ್ರೀಯರಲ್ಲಿ ಆಸಕ್ತನಾಗಿ ಇವಳಂ ಮರೆತು ದುಃಖಕ್ಕೆ ಪಾತ್ರಳನ್ನಾಗಿ ಮಾಡಿರ್ದರೂ, ಕಣ್ವಮುನಿಯು ದಯದಿಂದ ಸಲಹದೆ ಇರ್ದನಾದರೂ ನಿಮ್ಮ ವಿಮಾನದಲ್ಲಿ ಕುಳ್ಳಿರಿಸಿಕೊಂಡು ನಾನಿರುವ ಬಳಿ ಬರುವುದು ?” ಎಂದು ಹೇಳಲು; ಆ ಸಾನುಮತಿಸಾರಸಿಕೆಯರೆಂಬ ಸ್ತ್ರೀಯರು ಅವಳ ವಾಕ್ಯವಂ ಅಂಗೀ ಕರಿಸಿ ವಿಮಾನಾರೂಢರಾಗಿ ಭೂಲೋಕವಂ ಕು ತು ಬರುತ್ತಾ, ಸಾರಸಿಕೆಯು ಸಾನುಮತಿಯಂ ಕುಯ ತು- ಎಲೆ ಸಾನುಮತಿಯೇ, ನೀನು ಶಾವತಾರ ತೀರ್ಥ ವಂ ಸಂರಕ್ಷಿಸುವುದಕ್ಕೆ ಪೋಗು, ನಾನು ಕಣ್ವಮುನೀಶ್ವನ ಆಶ್ರಮಕ್ಕೆ ಪೋಗಿ ಶಕುಂ ತಲೆಯಂ ಕಂಡು ಕುಶಲಪ್ರಶ್ನೆಯಂ ಗೆಯ್ಯುವೆನು. ಅವಳು ಆ ತಪೋವನದಲಿಲ್ಲದಿ ರ್ದರೆ ದುಷ್ಯಂತರಾಯನ ಪುರಪ್ರವೇಶವಂ ಗೆದ್ದು ಬರುವೆನು” ಎಂದು ನುಡಿದು ಆಸಾನುಮತಿಯಂ ಬಿಟ್ಟು ಬರುತ್ತಾ,ಅಲ್ಲಲ್ಲಿರುವ ತಪೋವನಎಂ ನೋಡುತ್ತಾ ಬರಲು; ಮುಂಭಾಗದಲ್ಲಿ ತಮ್ಮ ಸ್ವಜಾತಿಸಿದ್ದ ಮಾದ ವೈರಮಂ ಬಿಟ್ಟು ಮಿತ್ರತ್ವದಿಂ ಕ್ರೀಡಿ ಸುತ್ತಿರುವ ಸಿಂಹಶಾರ್ದೂಲಮದಗಜಹರಿಣ ಮೊದಲಾದ ಮೃಗಂಗಳಿಂ ಪರಿವೃತ ಮಾಗಿ, ಶಾಂತಿರಸಕ್ಕೆ ತವರ್ಮನೆಯಾಗಿ, ಮೋಕ್ಷಲಕ್ಷ್ಮಿಯ ಪಾಣಿಗ್ರಹಣಸ್ಟಾ ನವೆನಿಸಿ ಕುಜನಾಶ್ರಯವಾದರೂ ಸದ್ವಂಶಶಾಲಿಯಾಗಿ ವಿರಾಜಿಸುವ ಕಾಶ ಮವಂ ಕಂಡು, ಅಲ್ಲಿರುವ ನದಿ ನದ ತಟಾಕ ಪರ್ಣಶಾಲೆ ಮೊದಲಾದ ಸ್ಥಾನಂಗಳಂ