ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1. VEN8n -ಶಾಕುಂತಲನಾಟಕ ನವೀನಟೀಕೆ-- ೧೨೧ ಸಾರಸಿಕೆಯೆಂಬ ಆ ಅಪ್ಪರಸ್ತ್ರೀಯು ಆಶ್ರಯವಿಲ್ಲದೆ ಇರುವ ಲತೆಯಂತೆ ಬಳುಕುತ ಬರುವ ಶಕುಂತಲೆಯಂ ಕಂಡು, ಅವಳ ವಾಕ್ಯವೆಲ್ಲವಂ ಕಿವಿಗೊಟ್ಟು ಆಂತರಿಕ್ಷದಲ್ಲಿ ನಿಂತು ಕೇಳಿ, “ಇವಳೇ ಶಕುಂತಲೆಯು, ನನ್ನ ಸ್ನೇಹಿತಳಾದ ಮೇನ ಕೆಯು ಸೂಚಿಸಿದಂತೆ ರಾಯನು ಇವಳಿಗೆ ಮೋಸವಂ ಗೆಯ್ದ೦ತ ಇವಳ ವಾಕ್ಯ ದಿಂದ ತೋರುತ್ತಿರುವುದು. ಇವಳು ದುಃಖವಂ ಪೊಂದುವುದು ನೋಡಿದರೆ ಎನಗೆ ಮಹತ್ತಾದ ಸಂತಾಪವುಂಟಾಗುವುದು. ಇನ್ನು ಮೇಲೆ ಇವಳಂ ಮೇನಕೆಯ ಸವಿಾಪಕ್ಕೆ ಕರೆದುಕೊಂಡು ಪೋಗುವೆನು ” ಎಂದು ತನ್ನ ಮನದಲ್ಲಿ ನಿಶ್ಚಯವಂ ಗೆಮ್ಮು, ಜೀವರತ್ನ೦ಗಳ ಸಾಲುಗಳಿಂದ ಮನೋಹರವಾಗಿ ಸೂರತೇಜಸ್ಸಂ ನಿರಾಕರಿಸುವ ವಿಮಾನವನ್ನಾ ಶಕುಂತಲೆಯು ಬರುವ ಭೂಮಿಗಿಳು ಹಲು; ಆಗ ಪುರೋಹಿತ ಮೊದಲಾದ ಪುರಜನರುಗಳೆಲ್ಲಾ ಆ ವಿಮಾನದ ಕಾಂತಿಯಂ ಕಂಡು, ಅದ್ಭುತವಾದ ಈ ಕಾಂತಿಯು ಏನಿರುವುದೆಂದು ರೆಗಳೂ ಮುಚ್ಚದೆ ನೋಡುತ್ತಿರಲು; ಆಕ್ಷಣದಲ್ಲಿ ಸಾರಸಿಕೆಯು ಪೋಗುತ್ತಿರುವ ಶಕುಂತಲೆಯಂ ತನ್ನ ಕರಗ ಳಿಂದ ಎತ್ತಿ ವಿಮಾನದಲ್ಲಿ ಕುಳ್ಳಿರಿಸಿಕೊಂಡು, ಗಗನಮಾರ್ಗವಂ ಕು+ತು ಪೋಗಲು; ದುಷ್ಯಂತರಾಯನ ಪುರೋಹಿತನು ಶಕುಂತಲೆಯಂ ತೆಗೆದುಕೊಂಡು ಪೋ ದುದನ್ನು ಕ೦ಡು ಅತ್ಯಾಶ್ಚರ್ಯಯುಕ್ತ ನಾಗಿ-ಈ ಸಂಗತಿಯಂ ರಾಯಂಗೆ ವಿಜ್ಞಾಪನೆಯಂ ಗೆಯ್ಯುವೆನೆಂದು ಹಿಂದಿರುಗಿ ಬರುತ್ತಿರಲು ; ಅಷ್ಟ ಲ್ಲೇ ರಾಯನು ಶಕುಂತಲೆಯು ಅಂತರಿಕ್ಷಕ್ಕೆ ಸಾರಸಿಕೆಯು ತೆಗೆದು ಕೊಂಡು ಪೋಗುವಾಗ್ಗೆ ಸಮಸ್ತ ಜನರು ಕಂಡು ಹಾಹಾಕಾರವಂ ಗೆಯ ಲು, ಆ ಕಲಕಲವಂ ಕೇಳಿ-ಈ ಕಲಕಲಧ್ವನಿಯು ವುಟ್ಟು ಇದಕ್ಕೆ ಕಾರಣವೇನೆಂದು ಯೋಚಿಸುತ್ತಿರಲು ; ಅಷ್ಟ ಅಲ್ಲೇ ಪುರೋಹಿತನು ಅತ್ಯಂತ ತೆರೆಯಿಂದ ಓಡಿಬಂದು ರಾಯನ ಮುಂಗೆ ನಿಲ್ಲಲು ; ರಾಯನು - ಅಯ್ಯಾ ಪುರೋಹಿತರೇ, ಏನು ಕಾರೈಕ್ರೋಸುಗ ಬಂದಿರಿ? ?" ಎಂದು ಕೇಳಲಾ ಪುರೋಹಿತನು" ಆಯ್ತಾ ಮಹಾರಾಯನೇ, ಅತ್ಯಾಶ್ಚರ್ಯ ಮಾದ ವಾಕ್ಯವಂ ಬಸುವೆನು ಕೇಳು. ಶಕುಂತಲೆಯು ಎನ್ನ ಸಂಗಡ ಬರುತ ತಾನು ಹುಟ್ಟಿದ್ದು ಮೊದಲಾಗಿ ಇದುವರೆಗೂ ತನ್ನ ವೃತ್ತಾಂತಗಳಂ ಪೇಳಿ ಕೊಂಡು ತನ್ನ ತೋಳುಗಳನ್ನೆತ್ತಿ ರೋದನವಂ ಗೆಯ್ಯುತ್ತಿರಲು, ಅಷ್ಟ ಅಲ್ಲೇ 16