ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hಳ ಕರ್ಣಾಟಕ ಕಾವ್ಯಕಲಾನಿಧಿ ಆ ಗ್ರಾಮಪಾಲಕನು ಅತಿ ಜಾಗ್ರತೆಯಿಂದೆದ್ದು ಜಾನುಕ, ಸೂಚಕರೆಂಬ ಇಬ್ಬರು ಭಟರುಗಳಂ ಕರೆದುಕೊಂಡು ಹೋಗಿ, ಆಬೆಸ್ತರವನಂ ಉಂಗುರಸಹಿತವಾಗಿ ಪಿಡಿದು, ಅವನ ಬಾಹುಗಳಂ ಹಗ್ಗಗಳಿ೦ ಬಲವಾಗಿ ಬಂಧಿಸಿ, ಉಂಗುರವಂ ತನ್ನ ಹಸ್ತದಲ್ಲಿ ಹಿಡಿದು, ಅವನ: ಹಿಂಗಟ್ಟು ಕಟ್ಟಿಕೊಂಡು ಬರುತ, ಅವನಂ ಕುತು, 1 ಎಕಾ ಚೋರನೇ, ದಿವ್ಯರತ್ನ ಖಚಿತವಾಗಿ ರಾಜಯೋಗ್ಯವಾದ ಈ ಮುದ್ರಿ ಕಯಂ ಹೇಗೆ ಸಂಪಾದನೆಯಂ ಗೆಯ್ದಿರುವೆ ? ಇದಕ್ಕೆ ಸಂಗತಿಯಂ ಚೆನ್ನಾಗಿ ಪೇಳುವುದು?' ಎಂದು ಪ್ರಹಾರವಂಗೆಯ್ಯಲು; ಆ ಬೆಸ್ತರವನು ಭಯದಿಂ ನಡುಗುತ್ತ, ಗ್ರಾಮಪಾಲಕನಂ ಕುಳತು«ಎಲೈ ಸ್ವಾಮಿಯೇ, ನಾನು ಕಳ್ಳತನವಂ ಮಾಡಿದವನಲ್ಲ. ಎನ್ನ೦ ವ್ಯರ್ಥ ವಾಗಿ ಬಾಧೆಯಂ ಪಡಿಸಲಾಗದು ಎಂದು ನುಡಿಯಲು ಆವಾಕ್ಯಕ್ಕೆ ಜಾನುಕ ನೆಂಬ ಭಟನು. ಎಲೋ ಕಳ್ಳ, ಕೇಳು. ನೀನು ಕಳ್ಳತನವಂ ಮಾಡದೆ ಈ ಉಂಗು ರವಂ ಸತ್ಪಾತ್ರನಾದ ಬ್ರಾಹ್ಮಣನೆಂದು ದೊರೆಯಾದ ದುಷ್ಯಂತರಾಯನು ನಿನಗೆ ದಾನವಂ ಕೊಟ್ಟಿರುವನೇ ಹೇಳು' ಎಂದು ಗದ್ದರಿಸಲು; ಆಬೆಸ್ತನು ಎಲೈ ಭಟನೇ, ಕೇಳು. ನಾನು ಶಾವತಾರತೀರ್ಥವಾಸಿ ಯಾದ ಬೆಸ್ತರಜಾತಿಯವನು ” ಎಂದು ನುಡಿಯಲು ಆ ವಾಕ್ಯಕ್ಕೆ ಜಾನುಕನು,.-“ನೀನು ಯಾವ ಜಾತಿಯವನು, ಎಂದು ನಿನ್ನ ಜಾತಿಯ೦ ನಾನು ಕೇಳಲಿಲ್ಲ. ಸತ್ಯವಾಗಿ ಈ ಉಂಗುರವಂ ಎಲ್ಲಿಂದ ತೆಗೆ ದುಕೊಂಡು ಬಂದಿರುವೆ ? ಯಥಾರ್ಥವಾಗಿ ಹೇಳು ' ಎಂದು ನುಡಿಯಲು ; ಗ್ರಾಮಪಾಲಕನು ಭಟರುಗಳಂ ಕುತು- ಎಲೆ ಭಟರುಗಳಿರಾ ! ಚೋರನಂ ನಿರ್ಬಂಧವಂ ಮಾಡದಿರಿ; ಈ ಉಂಗುರದ ಸಂಗತಿಯಂ ಚೆನ್ನಾಗಿ ವಿಸ್ತಾ ರವಾಗಿ ಹೇಳುವನು ” ಎನಲು ; - ಆ ವಾಕ್ಯಕ್ಕೆ ಅವರೀಲ್ವರು ಸುಮ್ಮನಾಗಲು ; ಆ ಬೆಸ್ತರವನು ಆ ಗಾಮಪಾಲಕನಂ ಕುಚಿತು. ಎಲೈ ಸ್ವಾಮಿಯೇ, ನಾನು ಒಲೆ, ಗಾಣ ಮೊದಲಾದ ಸಾಧನಗಳಿಂದ ಮತ್ತ್ವಗಳಂ ಪಿಡಿದು, ಅವುಗಳಂ ಕ್ರಯವಂ ಗೆಯ್ತು ಪತ್ನಿ ಪುತ್ರರುಗಳ ಸಲಹುತ್ತಿರುವೆನು” ಎಂದು ನುಡಿಯಲು; ಆ ವಾಕ್ಯಕ್ಕೆ ಗ್ರಾಮಪಾಲಕನು ನಸುನಕ್ಕು, ಎಲಾ ಬೆಸ್ತರವನೇ, ಪ್ರಾಣಿ ಗಳ ಹಿಂಸೆಯಂ ಗೆಯ್ಯುವ ನಿನ್ನ ಜೀವವು ಮಹಾಪರಿಶುದ್ಧವಾದುದು! ' ಎನಲು; ಬೆಸ್ತರವನು-ಎಲೈ ಸ್ವಾಮಿಯೇ, ಪ್ರಾಣಿಹಿಂಸೆಯಂ ಮಾಡುವುದು ಯುಕ್ತ