ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಕರ್ಣಾಟಕ ಕಾವ್ಯಕಲಾನಿಧಿ ಎಂದು ನುಡಿಯಲು; ಆ ರಾಯನು-ಎಲೈ ವಿದೂಷಕನೇ, ಈ ಭ್ರಮರವು ಎನ್ನಾ ಜೈಲಂ ಮೂಾವುದೋ? ಎಂದು ಭ್ರಮರವ ಕು ತು-ಎಲೈ ತುಂಬಿಯೇ, ಕೇಳು. ಕೋಗಿಲೆ ಗಿಣಿಗಳು ಮುಟ್ಟದೆ ಇರುವ ಸೊಸಿಮರದ ಚಿಗುರಿನಂತೆ ಅತಿಮ್ಮದು ವಾಗಿ, ಶೋಭಾಯಮಾನವಾಗಿ, ಬಿಂಬಫಲದಂತಿರುವ ಆ ಶಕುಂತಲೆಯ ಅಧರವಂ ಅಧಿಕ ಧೈರ್ಯದಿಂ ಯುಕ್ತನಾಗಿ ಪಾನಗೈದಿರುವೆನು. ನೀನು ತಾರತಮ್ಯ ಜ್ಞಾನ ವಿಲ್ಲದೆ ಆ ಶಕುಂತಲೆಯ ಅಧರಮಂ ಮುಟ್ಟಿದವನಾದರೆ, ನಿನ್ನ ಕಮಲಮಧ್ಯ ದಲ್ಲಿ ಬಂಧನಸ್ಥನನ್ನಾಗಿ ಮಾಡುವೆನು.” ಎಂದು ಹೇಳಲು; ವಿದೂಷಕನು ನಸುನಗುತ ಎಲೈ ರಾಯನೇ, ಈ ಪ್ರಕಾರವಾದ ತೀಕ್ಷ್ಮದಂಡನೆಗೆ ಯಾರು ತಾನೇ ಭಯಪಡುವುದಿಲ್ಲ” ಎಂದು, ತನ್ನ ಮನದಲ್ಲಿ * ನಿಶ್ಚಯವಾಗಿ ಈ ರಾಯನು ಆ ಶಕುಂತಲಾದೇವಿಯ ವಿಯೋಗದಿಂದ ಹುಚ್ಚ ನಂತ ಜ್ಞಾನಾಜ್ಞಾನದಿಂ ಯುಕ್ತನಾಗಿರುವನು. ಇವನ ಸಹವಾಸದಿಂದ ನಾನು ಈಪ್ರಕಾರವಾದ ಕಷ್ಟವಂ ಪೊಂದಬೇಕಾಗಿರುವುದು ಎಂದು ಆಲೋಚಿಸಿ, Cಎಲೈ ರಾಯನೇ, ಈ ಚಿತ್ರಪಟವಂ ನೋಡಿ ಭ್ರಾಂತಿಯಂ ಪೊಂದುತ್ತಿರುವೆ ಎನಲು; ಸಾನುಮತಿಯು ಈ ರಾಯನು ವ್ಯಥೆಯಂ ಪೊಂದುವುದು ನೋಡಿದರೆ ಯಥಾರ್ಥವಾಗಿ ಶಕುಂತಲೆಯಂ ನೋಡಿ ದುಃಖಪಾತ್ರನಾದಂತೆ ತೋತವನು? ಎಂದು ತಿಳಿಯುತ್ತಿರಲು; ರಾಯನು(ಎಲೈ ವಿದೂಷಕನೇ, ಆಲೋಚನೆಯಂ ಗೆಯ್ಯದೆ ಈಪ್ರಕಾ ರಕ್ಕೆ ನೀನು ನುಡಿಯಬಹುದೆ. ಹೇಗೆಂದರೆ:ಸ್ಥಾವರ ಜಂಗಮಾತ್ಮಕವಾದ ಸಮಸ್ತ ಪ್ರಪಂಚವು ಆ ಲೋಲಲೋಚನೆಯಾದ ಶಕುಂತಲೆಯ ಮಯವಾಗಿರು ವುದೆಂದು ತಿಳಿದು, ಎನ್ನ ಹೃದಯವು ಅವಳಲ್ಲಿಯೇ ಏಕಾಕಾರವಾಗಿ ವ್ಯಾಪಿಸಿ, ಅವಳ ದರ್ಶನ ಸೌಖ್ಯವನ್ನನುಭವಿಸುತಿರ್ದರೂ ಈಗ ಎನಗೆ ಇದು ಯಥಾರ್ಥ ವಾದ ಶಕುಂತಲೆಯಲ್ಲವೆಂದು ವಿಸ್ಕೃತಿಯುಂಟುಮಾಡಿದ ನಿನ್ನ ವಾಕ್ಯದಿಂದ ಚಿತ್ರ ವೆಂಬ ಜ್ಞಾನವು ಉಂಟಾದುದು!?” ಎಂದು ಕಣ್ಣೀರುಗಳಂ ಬಿಡುತ್ತಿರಲು; ಆ ವಾಕ್ಯಕ್ಕೆ ಸಾನುಮತಿಯು ರಾಯನ ಸಂವಿಧಾನ ಮಾರ್ಗವು ಪೂರ್ವಾಪರ ವಿರುದ್ಧ ಮುಳ್ಳುದಾಗಿ ಜ್ಞಾನಾಜ್ಞಾನದಿಂ ಯುಕ್ತವಾಗಿರುವುದು? ಎಂದು ನುಡಿದುಕೊಳ್ಳುತ್ತಿರಲು;