ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಕರ್ಣಾಟಕ ಕಾವ್ಯಕಲಾನಿಧಿ - ರಾಯನು,-II ಅತಿಕೋಪಯುಕ್ತಳಾದ ವಸುಮತೀದೇವಿಯು ಇಲ್ಲಿಗೆ ಬಂದು ಶಕುಂತಲೆಯ ಭಾವಚಿತ್ರವಂ ನೋಡಿದಲ್ಲಿ ಮಹತ್ತಾದ ಪ್ರಮಾದವುಂಟಾಗು ವುದಾದ್ದ೦ದ ಈ ಭಾವಚಿತ್ರಪಟವಂ ತೆಗೆದುಕೊಂಡು ಎಲ್ಲಾದರೂ ಕಾಣದ ಸ್ಥಳದಲ್ಲಿ ಸಂರಕ್ಷಿಸು ” ಎಂದು ಚತುರಿಕೆಗೆ ಅಪ್ಪಣೆಯನ್ನೀಯಲು ; ವಿದೂಷಕನು ಆ ಚಿತ್ರಪಟವಂ ತೆಗೆದುಕೊಂಡು, ಎಲೈ ಸ್ವಾಮಿಯೇ, ಈ ಚಿತ್ರಪಟವನ್ನು ನಾನು ಕಾಣದಂತೆ ಸಲಹುವೆನು. ನಾನು ಈ ಪಟವಂ ಕೊಂ ಡುಪೋದ ವಾರ್ತೆಯಂ ವಸುಮತೀದೇವಿಯು ತಿಳಿದಲ್ಲಿ ಎನ್ನ೦ ಸಲಹುವರಾರು? ಪೇಳು. ಆದರೂ ಮೇಘಪ್ರತಿಜೃಂದವೆಂಬ ಉಪ್ಪರಿಗೆಯಲ್ಲಿ ಈ ಪಟಸಹಿತನಾಗಿರು ವೆನು. ಸ್ವಾಮಿಯವರು ಅಂತಃಪುರದ ಕಲಹವಿಲ್ಲದೆ ಸ್ವಸ್ಥ ಚಿತ್ತರಾಗಿರ್ದಲ್ಲಿ ಎನ್ನ ಕರೆಯಿಸಬೇಕು ಎಂದು ನುಡಿದು, ಶೀಘ್ರಗಮನದಿಂ ಪೋಗಲು ; ಸಾನುಮತಿಯು, ಈ ರಾಯನು ಅನ್ಯಸ್ತ್ರೀಯರಲ್ಲಿ ಆಸಕ್ತಚಿತ್ತನಾ ದಾಗ ಜೇಷ್ಠ ಎಂಬ ಗೌರವವನ್ನಿರಿಸಿರುವನು. ಆದ್ದ°೦ ಸ್ಥಿರಮಿತ್ರತ್ವ ವುಳ್ಳವನು” ಎಂದು ನುಡಿಯುತ್ತಿರಲು; ಆಷ್ಟಲ್ಲೇ ಮುಂತ್ರಿಯ ಸಮೀಪಕ್ಕೆ ಪೋಗಿ ಇರ್ದ ದ್ವಾರಪಾಲಕಿಯ' ಒಂದು ಪತ್ರಿಕೆಯಂ ತೆಗೆದುಕೊಂಡು, ರಾಯನ ಸಮಾಸಕ್ಕೆ ಬಂದು, ಜಯಶೀಲ ನಾಗೆಂದು ನುಡಿದು, ನಮಸ್ಕಾರವಂ ಗೆಯ್ಯಲು, ಆ ರಾಯನು ಆ ಸ್ತ್ರೀಯಂ ಕುಳತು-'ಎಲೈ ದ್ವಾರಪಾಲಕಿಯೇ, ನೀನು ಮಾರ್ಗದಲ್ಲಿ ವಸುಮತೀದೇವಿಯಂ ಕಂಡೆಯಾ?” ಎಂದು ಕೇಳಲು ; ಸ್ತ್ರೀಯು ಎಲೈ ಸ್ವಾಮಿಯೇ, ಆ ದೇವಿಯರು ಈ ಪ್ರಮದವ ನಕ್ಕೆ ಬರುತಿರ್ದು ನಾನು ಈ ಪತ್ರಿಕೆಯಂ ತೆಗೆದುಕೊಂಡು ಬರುವುದು ಕಂಡು ಏನೋ ರಾಜಕಾರ್ಯವಿರುವುದೆಂದು ಹಿಂದಿರುಗಿ ಪೋದರು.” ಎಂದು ಬಿನ್ನಿಸಲು, ಆ ರಾಯನು ಅತಿ ಸಂತೋಷಯುಕ್ತನಾಗಿ... ಎನ್ನ ರಾಣಿಯಾದ ವಸುಮ ತಿಯು ಸಕಲಕಾರ್ಯಗಳ ಸ್ಕೂಲಸೂಕ್ಷ್ಮವಂ ಬಲ್ಲವಳಾದ್ದರಿ೦ದೆನ್ನ ಕಾರ್ಯವಿ ರೋಧವಂ ಗೆಯ್ಯಲಾಟಳು.' ಎಂದು ಹೇಳುತ್ತಿರಲು; ಆ ದ್ವಾರಪಾಲಕಿಯು-1 ಎಲೈಸ್ವಾಮಿಯೇ, ಮಂತ್ರಿ ಶ್ರೇಷ್ಠನಾದ ಆರ್ಯ ಪಿಶುನನು ಸ್ವಾಮಿಯವರಿಗೆ ವಿಜ್ಞಾಪನೆಯಂ ಗೆಯ್ಯುವಂತೆ ಹೇಳಿರುವುದೇನಂದರೆ:- ರಾಜಕಾರ್ಯಂಗಳು ಅಗಣಿತಂಗಳಾಗಿ ಇರ್ದರೂ ಇದೊಂದು ಕಾರ್ಯವು ಒಲವು ರವಾಗಿರುವುದು. ಆದರೆ ಈ ಪತ್ರಿಕೆಯಲ್ಲಿ ಬರೆದಿರುವೆನು. ಸ್ವಾಮಿಯವರು ಸಾವ