ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ୦୫୮ ಶಚೀಪತಿಯು ತನ್ನ ಸಮಸ್ತವಾದ ದೇವಸೇನೆಯಂ ಜತೆಗೊಳಿಸುವಂತೆ ಅಜ್ಞೆ ಯನ್ನಿತ್ತು, ಎಲೈ ರಾಯನೇ, ಈ ದೇವಸೇನೆಯಿಂದೊಡಗೂಡಿ, ಆ ದುಷ್ಟ ರಾದ ರಾಕ್ಷಸಸರಹವಂ ನಿರ್ಮಲವಂ ಗೆಯ್ಯುವುದು ” ಎಂದು ತನ್ನ ರಥವ ನ್ನಿತ್ತು ಕಳುಹಲು; ರಾಯನು ಸಮಸ್ತ ದೇವಸೇನಾ ಪರಿವೃತನಾಗಿ ರಥದೊಳು ಕುಳಿತು, ಯುದ್ಧ ಭೂಮಿಗೆ ಹೋಗಿ, ತನ್ನ ಚಂಡಮಾದ ಕೋದಂಡದಿಂ ವಿಮುಕ್ತ೦ಗಳಾದ ಬಾಣಪರಂಪರೆಗಳಿಂ ದುರ್ಜಯರಾದ ಕಾಲನೇಮಿಪುತ್ರರುಗಳ ಪ್ರಾಣಂಗಳ ಕಾಲ ನಿಗೆ ಕೈಗಾಣಿಕೆಗಳಂ ಮಾಡಿ, ಸ್ವರ್ಗವಾಸಿಗಳಿಗೆ ನಿರ್ಭಯವನ್ನು ಂಟುಮಾಡಿ, ಸಮ ಸ್ತ ದೇವರಾಕ್ಷಸರುಗಳಿಗೆ ವಿಸ್ಮಯವಂ ಪುಟ್ಟಿಸಿ, ಮರಳಿ ಸುಧರೆಯೆಂಬ ಸಭೆಯಂ ಕುಳಿತು ಬರಲು, ದೇವರಾಜನು ದುಷ್ಯಂತರಾಜನು ಮಾಡಿದ ಪರಾಕ್ರಮಕ್ಕೆ ಆಶ್ಚರ್ಯವಂ ಪೊಂದಿ, ಭೂಲೋಕದುರ್ಲಭವಾದ ವಸ್ತುವಿನಿಂದ ರಾಯನಂ ಸಂತುಷ್ಟನನ್ನಾಗಿ ಮಾಡಿ, ಕೆಲವುದಿವಸ ಆ ಸ್ವರ್ಗದಲ್ಲೇ ಇಟ್ಟು ಕೊಂಡಿರ್ದು, ಒಂದುದಿವಸ ಭೂಲೋ ಕಪ್ರಜಾಸಂರಕ್ಷಣೆಯಂ ಗೆಯ್ಯದೆ ಇಲ್ಲೇ ಈ ರಾಯನು ಇದ್ದನಾದರೆ ಧರ್ಮಕಾ ರ್ಯಕ್ಕೆ ಹಾನಿಬರುವುದು ' ಎಂದು ಯೋಚಿಸಿ, ಮಾತಲಿಯಂ ಕರೆದು, ಆತನಿಗೆ ಈ ದುಷ್ಯಂತಮಹಾರಾಯನಂ ಯಥಾಪ್ರಕಾರವಾಗಿ ಪ್ರತಿಷ್ಠಾನಪುರಕ್ಕೆ ರಥದಿಂ ಕರೆದುಕೊಂಡು ಪೋಗುವಂತೆ ಅಪ್ಪಣೆಯನ್ನಿತ್ತು, ಆ ರಾಯಂಗೆ ಮಂದಾರ ಮಾಲೆ ಮೊದಲಾದ ವಸ್ತುವನ್ನಿತ್ತು ಸತ್ಕರಿಸಿ, ಬೃಹಸ್ಪತಿ ಮೊದಲಾದ ದೇವತೆ ಗಳೊಡಗೊಂಡು ಕೆಲವು ದೂರ ಬಂದು ಕಳುಹಿಸಿಕೊಡಲು; ರಾಯನು ಅತ್ಯಂತಸಂತೋಷಭರಿತಾ೦ತರ೦ಗನಾಗಿ ಇಂದ್ರರಥಾರೋಹಣ ವಂ ಗೆಯು ಭೂಲೋಕಾಭಿಮುಖನಾಗಿ ಬರುತ್ತಿರಲು; ಇತ್ತಲು ಸಾರಸಿಕೆಯು ಮರೀಚಿ ಋಷಿಯ ಆಶ್ರಮದಲ್ಲಿರುವ ಮೇನಕೆಯ ಸವಿಾಪಕ್ಕೆ ಆ ಶಕುಂತಲೆಯಂ ಕರೆದು ಕೊಂಡು ಬಂದು ಅಲ್ಲಿ ನಡೆದ ವೃತ್ತಾಂ ತವಂ ಪೇಳಲು; ಆ ಮೇನಕೆಯು ಆ ವಾರ್ತೆಲ್ಲ ವಂ ಕೇಳಿ ಪೂರ್ಣ ಗರ್ಭಿಣಿಯಾ ಗಿರುವ ತನ್ನ ಮಗಳಂ ಕಂಡು ಪರಮಾನಂದಭರಿತಳಾಗಿ, ಕೆಲವು ದಿವಸದ ಮೇಲೆ ಚಕ್ರವರ್ತಿಲಕ್ಷಣಲಕ್ಷಿತನಾಗಿ ಶಕುಂತಲಾ ಗರ್ಭದಲ್ಲಿ ಒಬ್ಬ ಪುತ್ರನು ಹುಟ್ಟಲು, ಆತನಂ ಸಲಹುತ, ಆತನ ಬಾಲಲೀಲೆಯಿಂ ಸಂತುಷ ಳಾಗುತ್ತಿರಲು;