ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ - ಕರ್ಣಾಟಕ ಕಾವ್ಯಕಲಾನಿಧಿ ಈ ಮಧ್ಯೆ ಒಬ್ಬಾನೊಬ್ಬ ಋಷಿಶಿಷ್ಯನು ಸಂಗಡ ಬರುವ ವೃದ್ದ ಶಾಕಲ್ಯ ನೆಂಬವನಂ ಕುರಿತು, “ಎಲೈ ವೃದ್ದ ಶಾಕಲ್ಯನೇ, ಷಡ್ಡು ಜೈಶ್ವರಸಂಪನ್ನನಾದ ಕಶ್ಯಪಗ ಪಿಯು ಏನು ಕಾರವಂ ಗೆಯ್ಯುತ್ತಿರುವನು ? ಎಂದು ಪ್ರಶ್ನೆಯಂ ಗೆಯ್ಯಲಾವೃದ್ಧ ಶಾಕಲ್ಯನು- “ ಋಷಿಪತ್ನಿಯರಿಂ ಸೇವಿತಳಾದ ದಕ್ಷ ಪುತ್ರಿಯಾದ ಅದಿತಿದೇವಿಯರಿಗೆ ಪತಿವ್ರತಾಮಹಾಯಿಂ ಕೂಡಿದ ಪುಣ್ಯಕರವಾದ ಪುರಾಣ ವಂ ಪೇಳುತ್ತಿರುವನು ” ಎಂದು ನುಡಿಯಲು ; ಆ ವಾಕ್ಯವಂ ಕೇಳಿದ ರಾಯನು__“ಎಲೈ ಮಾತಲಿಯೇ, ಮಹಾಮಹಿಮ ನಾದ ಕಶ್ಯಪಖುಷಿಯ ಸಂದರ್ಶನಕ್ಕೆ ಪೋಗಬೇಕಾದಲ್ಲಿ ಸಮಯ ನಿರೀಕ್ಷಣೆಯಂ ಗೆಯ್ಯಬೇಕಾಗಿರುವುದು ಎಂದು ನುಡಿಯಲು ; ಮಾತಲಿಯು ರಾಯನಂ ನೋಡಿ, “ ಎಲೈ ಸ್ವಾಮಿಯೇ, ನಾನು ಎಷ್ಟು ಹೊತ್ತಿನೊಳಗಾಗಿ ಗುರುವಾದ ಮಾರೀಚ ಋಷಿಯ ಸಮಯವಂ ತಿಳಿದು ನೀನು ಬಂದಿರುವ ಸಂಗತಿಯಂ ಅ' ಕೆಗೆಯ್ಯುವೆನೋ ಅದುವರೆಗೂ ನೀನು ಈ ಮನೋ ಹರವಾದ ಅಶೋಕವೃಕ್ಷದ ಛಾಯೆಯನ್ನಾಶ್ರಯಿಸಿ ಇರುವುದು ' ಎಂದು ನುಡಿಯಲು : ರಾಯನು ನಿನ್ನ ಮನಕ್ಕೆ ಯಾವುದು ಯುಕ್ತವಾಗಿ ತೋಜುವುದೋ ಅದೇ ರೀತಿಯಿಂ ಮಾಡತಕ್ಕುದು. ನಾನೀಯ ಶೋಕವೃಕ್ಷದ ಸಮೀಪದಲ್ಲಿ ಇರು ವೆನು ಎನಲು : ಮಾತಲಿಯು ರಾಯನಂ ಬಿಟ್ಟು ಆ ಕಶ್ಯಪಬ್ರಹ್ಮನಿರುವ ಆಶ್ರಮವಂ ಕು' ತು ಪೋಗಲು ; ಇತ್ತಲಾ ರಾಯನು ಶುಭಸೂಚನೆಗಳಾಗುವುದು ತನ್ನ ಬಲದ ಭುಜವು ಹಾಕುವುದಂ ಪರಿಭಾವಿಸಿ ತನ್ನ ಭುಜವಂ ಕುಲತು, “ ಎಲೈ ಭುಜವೇ, ಎನ್ನ ಮನೋರಥವು ಪೂರ್ಣವಾಗಬೇಕೆಂದು ಅಪೇಕ್ಷಿಸದೆ ಇರುವೆನು, ವ್ಯರ್ಥವಾಗಿ ಕಂಪ ನವಂ ಪೊಂದುತ್ತಿರುವೆ. ಮತ್ತು ಪೂರ್ವ ದೊರಕಿರ್ದ ಶ್ರೇಯೋರೂಪಳಾದ ಶಕುಂ ತಳೆಯು ತಿರಸ್ಕೃತಳಾಗಿ ದುಃಖಭಾಜನಳಾಗಿರುವಳು ” ಎಂದು ನುಡಿಯುತ್ತ, ಆ ತಪೋವನದ ಸಂದರ್ಶನದಿಂ ಮೊದಲು ಶಕುಂತಲೆಯೊಡನೆ ಕಣ್ಯಾಶ್ರಮದಲ್ಲಿ ಮಾಡಿದ ವಿಹಾರ ಮೊದಲಾದ ಚರಂಗಳಂ ಸ್ಮರಿಸಿಕೊಂಡು ಮಹಾ ದುಃಖಾತುಕ ನಾಗಿ ಕಂಬನಿಗಳಂ ಬಿಡುತ್ತಾ ಕುಳಿತಿರಲು ; ಅನಿತಳು ಒಬ್ಬ ಋಷಿಪತ್ನಿ ಯು- ಎಲೈ ಬಾಲಕನೇ, ಚಾಪಲ್ಯವಂ