ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೭೧ ಗೆದ್ದು, ನಿಯಮವತರಾಗಿ ಕಂದಮೂಲಫಲಾದಿಗಳಂ ಭಕ್ತಿಸು, ವೃಕ್ಷಮ ಲಂಗಳೇ ಮನೆಯುಳ್ಳವರಾಗಿ ಇರುವರು. ಆದ್ದ' ೦ದ ಈ ವನದಲ್ಲಿ ವಾಸವಂ ಗೆ ನಮ್ಮ ವಂಶಸ್ಥನಾದ ಯಾವ ಪುರುಷಸಿಂದ ಯಾವ ಸ್ತ್ರೀಯಲ್ಲಿ ಈ ಪುತ್ರನು ಪುಟ್ಟಿರಬಹುದು?” ಎಂದು ನುಡಿಯಲು; ಆ ಸ್ತ್ರೀಯ-ಅಯ್ಯಾ ಪೂಜ್ಯನೇ, ಕೇಳು. ಈ ಬಾಲಕನ ತಾಯಿಯು ಅಪ್ಪರಯಿಂದ ಪಟ್ಟಿ ದೇವತೆಗಳಿಗೆ ತಂದೆಯಾದ ಕಶ್ಯಪಬ್ರಹ್ಮನ ಈ ಆಶ್ರಮದಲ್ಲಿ ಈ ಪುತ್ರನಂ ಪೆತ್ತಳು ಎನ್ನಲು ; ರಾಯನು- ಈ ಬಾಲಕನ ತಾಯಿಯು ಅಪ್ಪರಸ್ತ್ರೀಯ ಉದರದಲ್ಲಿ ಪುಟ್ಟಿದವಳೆಂದು ಖುಷಿಯ ಪೇಳುವ ವಾಕ್ಯವು ಎನಗೆ ಮರಳಿ ಆಶೆಯನ್ನು ಟುಮಾಡುತ್ತಿರುವುದು ಎಂದು ತನ್ನ ಹೃದಯದಲ್ಲಿ ಯೋಚಿಸಿ – ಎಲ್ ಸ್ತ್ರೀಯೆ, ಈ ಪುತ್ರನಂ ಪೆತ್ತವಳು ಯಾವ ಹೆಸರುಳ್ಳ ದೊರೆಯ ಪತ್ನಿ ಯು ? ” ಎಂದು ಕೇಳಲು; ಆ ಸ್ತ್ರೀಯು ಎಲೈ ಪೂಜ್ಯನೇ, ಧರ್ಮಪತ್ನಿ ಯ ಪರಿತ್ಯಾಗವಂ ಗೆಯ್ಲಿ ರುವ ದುಷ್ಟನಾದ ಆ ರಾಯನ ನಾಮೋಚ್ಛಾರಣೆಯಂ ಗೆಯ್ಯಲಾಯನು ” ಎನ್ನಲು ; ಆ ವಾಕ್ಯವಂ ಕೇಳಿ, ರಾಯನು - ಈ ಸ್ತ್ರೀಯು ಪೇಳುವ ವಾಕ್ಯವು ಎನ್ನ ಕಥೆಯನ್ನೇ ಅನುಸರಿಸುತ್ತಿರುವುದು. ಆದರೂ ಈ ಬಾಲಕನ ಹೆತ್ತವಳ ನಾಮ ಧೇಯವಂ ವಿಚಾರಿಸುವೆನು ” ಎಂದು ಮನದಲ್ಲಿ ಯೋಚಿಸಿ, ಅಷ್ಟಲ್ಲೇ ಪರ ಸ್ತ್ರೀಯ ಹೆಸರು ಕೇಳುವುದು ನ್ಯಾಯವಲ್ಲವೆಂದು ತಿಳಿಯುತ್ತಿರುವನಿತಳು ಸುವ್ರತೆಯೆಂಬ ಋಷಿಯು ಮೃಣ್ಮಯವಾದ ಮಯರವಂ ತೆಗೆದು ಕೊಂಡು ಆಬಾಲಕನ ಸಮೀಪಕ್ಕೆ ಬಂದು ಆ ನವಿಲನ್ನಾ ಕುಮಾರನಿಗೆ ತೋಸಿ, ಈ ಪಕ್ಷಿಯ ಲಾವಣ್ಯವಂ ನೋಡು ಎಂದು ಹೇಳುವಲ್ಲಿ, « ಶಕುಂತಲಾವಣ್ಯ? ಪಶ್ಯ ” ಎಂದು ನುಡಿಯಲು; ಆ ವಾಕ್ಯದಿಂದಾಬಾಲಕನಿಗೆ ಶಕುಂತದ ಲಾವ ಇವಂ ನೋಡೆಂದು ನುಡಿದಳೆಂಬ ಜ್ಞಾನವುಂಟಾಗದೆ, ಶಕುಂತಳೆಯ ಲಾವಣ್ಯವಂ ನೋಡೆಂದು ನುಡಿದಂತೆ ಬೋಧೆಯುಂಟಾಗಲಾಗಿ, ಆ ಬಾಲಕನು ಚೆನ್ನಾಗಿ ಎಡ ಬಲವಂ ನೋಡಿ, “ ಎನ್ನ ತಾಯಿ ಎಲ್ಲಿ ? ಎಂದು ನುಡಿಯಲಾ ಋಷಿಪತ್ನಿ ಯರೀ ಊರು ನಗುತ, ಜನನಿಯಲ್ಲಿ ಅಧಿಕಾಭಿಲಾಷೆಯುಳ್ಳ ಈ ಬಾಲಕನು ನಾಮಸಾ ಮ್ಯದಿ೦ ವಂಚಿತನಾದನು ” ಎಂದು ನುಡಿದು, “ಎಲೈ ಬಾಲಕನೇ, ಈ ಮೃಣ್ಮಯ