ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಕುಂತಲರ್ನಾಟಕ ನವೀನಟೀಕೆ ೧೭೫ ಸಮಾಜವಂ ಸೇರಿ, “ ತಾಯೆ ಇವನಾರೋ ಪರಕೀಯ್ಯನು ಎನ್ನ ನ್ನು ಪುತ್ರನಂ ದಾಳಿಂಗಿಸುತ್ತಿರುವನು ”” ಎಂದು ನುಡಿಯಲು; ಬಾಲಕನ ಆ ಮುದ್ದು ಮಾತಂ ಕೇಳಿ ಸಂತುಷ್ಟ ಹೃದಯನಾದ ದುಷ್ಯಂತರ ಯನು ಶಕುಂತಳೆಯಂ ಕು೫' ತು_* ಎಲೌ ಪ್ರಾಣಪ್ರಿಯಳೇ, ಮೊದಲು ನಿನ್ನಲ್ಲಿ ಅಜ್ಞಾನದಿಂ ಪ್ರಯೋಗಿಸಿದ ಕ್ರೂರತ್ವವು ಈಗ ಅನುಕೂಲ ಪರಿಣಾಮವುಳ್ಳದ್ದಾ ದುದು. ನಿನ್ನ ಸಂದರ್ಶನದಿಂದೆನ್ನ ಶರೀರವು ಜ್ಞಾನಯುಕ್ತವಾದುದು ಎನಲು; ಆ ಶಕುಂತಳೆಯು ತನ್ನ ಮನವ ಕುಲ ತು_ಹೃದಯವೆ, ಯಾವ ಪುರು ಷನು ಯಾವನೋ ಎಂಬ ಸಂದೇಹವಂ ಬಿಡು. ದೈವವು ಮಾತ್ಸರ್ಯವಂ ಬಿಟ್ಟು ಎನ್ನ ವಿಷಯದಲ್ಲಿ ದಯಾಶಾಲಿಯಾದುದು. ಇವನೇ ಪ್ರಾಣಧಾರಕನಾದ ದುಷ್ಯಂತರಾಯನು ” ಎಂದು ಹೇಳುತ್ತಿರಲು; ರಾಯನುಎಲೆ ಕೋಮಲಾಂಗಿಯಾದ ಶಕುಂತಳೆಯ, ಗ್ರಹಣವಾದ ಮೇಲೆ ಚಂದ್ರನಂ ಸೇರುವ ರೋಹಿಣೀದೇವಿಯಂತೆ ಅಜ್ಞಾನವೆಂಬ ಅಂಧಕಾರದಿಂ ಮುಕ್ತನಾದ ಎನ್ನ ಮುಂಭಾಗದಲ್ಲಿ ಬಂದು ನಿಂತಿರುವೆ ಎಂದು ನುಡಿಯಲು; ಶಕುಂತಳೆಯು ಪೂರ್ವದಲ್ಲಿರ್ದ ಅನುರಾಗವಂ ಮಧ್ಯದಲ್ಲಿ ಬಂದ ವಿಪತ್ತಂ ಈಗ ಉಂಟಾದ ಸಂಬಂಧವಂ ಸಹ ಸ್ಮರಿಸಿ, ಅತಿ ವ್ಯಸನಾತುರಳಾಗಿ, ರಾಯನಂ ಕು' ತು- ಎಲೈ ಆರ್ಯಪುತ್ರನೆ, ಜಯಶೀಲನಾಗು ಎಂದು ನುಡಿಯುವ ಷ್ಟ ಅಲ್ಲೇ ಹೇರಳ ದುಃಖದಿಂದ ಗದ್ದಗೂಡಿದ ಧ್ವನಿಯಿಂದ ಶಂಖದಂತಿರುವ ಕತ್ತಿನಲ್ಲಿ ಒತ್ತಿ ಬಂದ ಅತ್ಯಂತದುಃಖದಿಂ ಮುತ್ತಿನಂತೆ ಮುದ್ದಾಗಿ ಬೀಳುವ ಕಂಬ ನಿಗಳುಳ್ಳವಳಾಗಿ, ಲಜ್ಜೆಯಿಂ ಶಿರವಂ ಬಾಗಿ ನಿಂತಿರಲು; ಆ ರಾಯನು__* ಎಲ್ ಪ್ರಾಣಾಧಾರಳೆ, ಕೇಳು. ಜಯ ಆರ್ಯಪುತ್ರ” ಎಂದು ಹೇಳುವ ವಾಕ್ಯವು ಕಣ್ಣೀರುಗಳಿಂದ ತಡೆಯಲ್ಪಟ್ಟು ದಾದಾಗ ಜಯ ವೆಂದು ಪೇಳ ಎರಡು ವರ್ಣಂಗಳೇ ಎನ್ನ ಜಯಿಸಿದುವು, ಮತ್ತು ತಾಂಬೂಲಲಾ ಕ್ಷಾರಸಾದಿಸಂಸ್ಕಾರವಿಲ್ಲದೆ ಇದ್ದರೂ ಜಪಾಪುಷ್ಪದಂತೆ ರಮೆಯಂ ಪಡೆದಿ ರುವ ನಿನ್ನ ಅಧರವು ಎನ್ನ ಮನವ ಕರಗಿಸುತ್ತಿರುವುದು ” ಎಂದು ನುಡಿಯಲು; ಬಾಲಕನು ಶಕುಂತಿಳೆಯ ರಾಯನೂ ಸಲ್ಲಾಪವಂ ಗೆಯ್ಯವುದಂ ಕೇಳಿ, * ಎಲೆ ತಾಯೇ, ನಿನ್ನೊಡನೆ ಈ ಪ್ರಕಾರಕ್ಕೆ ಸಲ್ಲಾಪವಂ ಗೆಯ್ಯುವುದಕ್ಕೆ ಇವ ನಾರು? ” ಎಂದು ಬೆಸಗೊಳ್ಳಲು; ತಕುಂತಳೆಯುವತೃನೆ, ಇವನು ಸಮಸ್ತ ಸೌಭಾಗ್ಯಸ್ವರೂಪನಾದ ನಿನ್ನ