ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೪೧ “ಎಲೈ ಸ್ವಾಮಿಯೇ, ನೀನು ಸರ್ವೋತ್ಕೃಷ್ಟನಾಗು; ನಿನ್ನಾಜ್ಞೆಯಿಂ ನಾನೀಯರ ಇವಂ ದುಷ್ಟ ಮೃಗರಹಿತವನ್ನಾಗಿ ಮಾಡಿರುವೆನು; ಸ್ವಾಮಿಯವರು ಏನು ಕಾರಣ ದಿಂದಿಲ್ಲಿಯೇ ಇರುವಿರಿ? ” ಎಂದು ನುಡಿಯಲಾ ರಾಯನು- ಬೇಟೆಯಾಡುವುದಂ ದೂಷಣೆಯಂ ಗೆಯ್ಯುತ್ತಿರುವ ಮಾಂಡವ್ಯನಾಮಕನಾದ ಈ ವಿದೂಷಕನಿಂ ಎನ್ನ ಮನೋರಥವೆಲ್ಲಾ ಭಗ್ನವಾಗಿ ಪೋದುದು” ಎಂದು ನುಡಿಯಲಾ ಸೇನಾಪತಿಯು ಪ್ರತ್ಯೇಕವಾಗಿ ವಿದೂಷಕನಂ ಕರೆದು-ಅಯ್ಯಾ ಮಿತ್ರನಾದ ಮಾಂಡವ್ಯನೆ, ನಾನು ರಾಯನ ಚಿತ್ತವೃತ್ತಿಯನ್ನನುಸರಿಸುವುದಕ್ಕೋಸುಗ ಕೆಲವು ವಚನವಂ ಪೇಳು ವೆನು; ನೀನು ಸ್ಥಿರಹೃದಯನಾಗಿ ಮನೋವಿಕಾರವಂ ಪೊಂದಬೇಡ' ಎಂದು ಏಕಾಂ ತವಾಗಿ ನುಡಿದು, ರಾಯನ ಸಮುಖಕ್ಕೆ ಬಂದು- ಎಲೈ ಸ್ವಾಮಿಯೇ, ಈಮರ್ಖ ನಾದ ವಿದೂಷಕನು ಬೇಟೆಯಾಡುವುದು ಯುಕ್ತವಲ್ಲ ವೆಂದು ಬಾಯಿಗೆ ಬಂದಂತೆ ದುಷ್ಟ ವಾಕ್ಯವಂ ಪೇಳುತ್ತಿರಲಿ; ಈ ಮೃಗಯಾವ್ಯಾಪಾರವು ಅತ್ಯುತ್ತಮವಾದದ್ದು ಎಂಬುವುದಕ್ಕೆ ಸ್ವಾಮಿಯವರೇ ನಿದರ್ಶನವಾಗಿರುವಿರಿ: ಅದು ಹೇಗೆಂದರೆ:-ಬೇಟೆ ಯಾಡುವುದwಂದ ಉದರ ಪ್ರದೇಶದಲ್ಲಿರುವ ಮೇದಸ್ಸೆಂಬ ಧಾತುವಿನ ನಾಶದಿಂ ದೇಹವು ಕೃಶವಾಗಿ ಅಶ್ವಾರೋಹಣ ಮೊದಲಾದ ಕಾರ್ಯವಂ ಗೆಯ್ಯುವುದಕ್ಕೆ ಯೋಗ್ಯವಾಗುವುದು; ಮತ್ತು ಮೃಗಂಗಳು ಭಯದಿಂದಲೂ ಕ್ರೋಧದಿಂದಲೂ ಮಾಡತಕ್ಕ ಮನೋವಿಕಾರಗಳು ತಿಳಿಯುವುವು; ಬಾಣಂಗಳು ಚಲಿಸುತ್ತಿರುವ ಗು” ಗೆ ತಗಲಿದುವಾದರೆ ಧನುರ್ಧಾರಿಗಳಾದ ಶೂರರ ಮಧ್ಯದಲ್ಲಿ ಬಹುಮಾನವುಂ ಟಾಗುವುದು: ಇಂತಿರುವಲ್ಲಿ ತಿಳಿಯದ ಜನರುಗಳು ಮೃಗಯಾವಿಹಾರವಂ ಸಪ್ತವ್ಯ ಸನದಲ್ಲಿ ಒಂದು ವ್ಯಸನವೆಂತಲೂ, ಅನೇಕ ವಿಪತ್ತಿಗೆ ಕಾರಣವೆಂತಲೂ, ಹೇಳುತಿರು ವರು. ಇಂಥ ವಿನೋದವು ಇನ್ನಾವ ವಸ್ತುಗಳಿಂದಲೂ ಆಗಲಾದು” ಎಂದು ನುಡಿ ಯಲಾವಿದೂಷಕನು- ಎಲೈ ಸೇನಾಪತಿಯೆ, ಕೇಳು. ಈಗ ನೀನು ರಾಯನ ಚಿತ್ತವ ತ್ರಿಯನ್ನನುಸರಿಸುವುದಕ್ಕೋಸುಗ ಅರಣ್ಯವೆಲ್ಲವಂ ಸುತ್ತುತ್ತಲಿರುವೆ ಎಲ್ಲಾದರೂ ಮಾಂಸಾ ಪೇಕ್ಷಿಯಾದ ಮುದುಗರಡಿಯ ಬಾಯೊಳು ಬಿದ್ದು ಸಾಯುವುದಕ್ಕಲ್ಲಿ ಸಂದೇಹವೇ ಇಲ್ಲ ” ಎಂದು ನುಡಿಯಲಾ ರಾಯನು. ( ಎಲೈ ಸೇನಾಪತಿಯೇ, ಈ ವಿದೂಷಕನೊಡನೆ ಬಹಳ ಮಾತುಗಳಾಡಿದ್ದ೦ ಪ್ರಯೋಜನವಿಲ್ಲ; ಮಧ್ಯಾ ಹೈ ಕಾಲವಾದ್ದಿ೦ದ ನೀನು ಸೇನೆಯಂ ತಿರುಗಿಸು; ಈ ಆಶ್ರಮಸಮೀಪದಲ್ಲಿರುವ ಅರಣ್ಯದಲ್ಲಿ ಕಾಡೋಣಗಳು ಕಟ್ಟೆಗಳ ತೀರವಂ ತಮ್ಮ ಕೊಂಬುಗಳಿಂದಗೆದು ಸ್ನೇ ಜೈಯಿಂ ಜಲಪ್ರವೇಶವಂ ಗೆಯ್ಯಲಿ; ಹರಿಣ ಸಮೂಹಂಗಳು ವೃಕ್ಷಂಗಳ ನೆರಳುಗಳ