ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಕರ್ಣಾಟಕ ಕಾವ್ಯಕಲಾನಿಧಿ .ಹಾಗಾದಲ್ಲಿ ಜಾಗ್ರತೆಯಿಂ ಪೋಗಿ ಅವಳ ಸಂತಾಪವಂ ಪರಿಹರಿಸುವುದು. ಮತ್ತಾಶಕುಂತಲೆಯು ಷಡ್ಗುಣೈಶ್ವರ್ಯಸಂಪನ್ನ ನಾದ ಕಣ್ವಮುನೀಶ್ವರನಿಗೆ ಪ್ರಾಣರೂಪಳಾಗಿರುವಳು. ನಾನು ಯಜ್ಞ ಸಂಬಂಧವಾದ ಮಂತ್ರ ಜಲವಂ ತಂದು ಆಶಕುಂತಲೆಗೆ ಪ್ರೋಕ್ಷಣೆಯಂ ಗೆಯ್ಯುವಂತೆ ಕಣ್ವಮುನೀಶ್ವರನ ತಂಗಿಯಾದ ಗೌತಮೀದೇವಿಯ ಹಸ್ತಕ್ಕೆ ಕೊಡುವೆನು” ಎಂದು ನುಡಿದು ಅವಳಂ ಕಳುಹಲು ; ದುಷ್ಯಂತರಾಯನು-ಶಕುಂತಲೆಯು ಸಂತಾಪಯುಕ್ತಳಾಗಿರುವಳೆಂದು ಪ್ರಿಯಂವದೆಯು ನುಡಿದ ವಾಕ್ಯವಂ ಕೇಳಿದಾಕ್ಷಣದಲ್ಲಿ ಕಾಮಬಾಣ ಪೀಡಿತನಾಗಿ, ನಿಟ್ಟುಸಿರುಗಳಂ ಬಿಡುತ, ವನದಲ್ಲಿ ಧ್ವನಿಗೆಯ್ಯುವ ಶುಕಪಿಕಂಗಳ ಶಬ್ದ ವಂ ಕರ್ಣನೂ ಲದಂತೆ ತಿಳಿಯುತ_“ ಆಶಕುಂತಲೆಯು ಕಣ್ಮಋಷಿಯ ಅಂಕೆಯಲ್ಲಿ ಸಿಕ್ಕಿರುವುದಂ ಬಲ್ಲೆನು, ಹಾಗಾದರೂ ಅವಳ ಸೌಂದರ್ಯದಲ್ಲಿ ತಗಲಿ ಕೊಂಡಿರುವ ಎನ್ನ ಮನವಂ ಹಿಂದಿರುಗಿಸುವುದಕ್ಕೆ ಸಮರ್ಥನಾಗಲಾಕಿತನು” ಎಂದು, ತನ್ನೊಳು ತಾನೇ ಆಲೋ ಚನೆಯಂಗೆಯ್ಯುತ, ಅಧಿಕ ವ್ಯಥೆಯಂ ಸಹಿಸಲಾರದೆ ರಾತ್ರಿಯಲ್ಲುಂಟಾದ ಚಂದ್ರ ಕಿರಣದ ಸಂತಾಪವಂ ಸ್ಮರಿಸಿಕೊಂಡು, ಮನ್ಮಥಚಂದ್ರರಂ ಕು' ತು,-ಎಳ್ಳೆ ಮನ್ಮಥಚಂದ್ರರುಗಳಿರಾ, ನೀವಿಬ್ಬರೂ ನನ್ನಿಂದ ವಿರಹಿಜನರುಗಳ ವಿಶ್ವಾಸಕ್ಕೆ ಯೋ ಗ್ಯರಂತೆ ನಟಿಸುತ್ತಿರುವಿರಿ: ಹೇಗೆಂದರೆ--ನೀನು ಪುಷ್ಪಬಾಣನೆಂಬುವುದೂ, ಆಚಂದ ನು ಶೀತಕಿರಣನೆಂಬುವುದೂ ನನ್ನಂಥ ವಿರಹಿಗಳಲ್ಲಿ ಅಪವಾಗಿ ತೋಯುವುದು. ಏಕೆಂ ದರೆ:-ಚಂದ್ರನು ರಾತ್ರಿಯಲ್ಲಿ ಹಿಮಮಯವಾದ ತನ್ನ ಕಿರಣಗಳಿಂದ ಅಗ್ನಿ ಯಂ ಸುರಿಸುತ್ತಿರುವನು. ನೀನು ಪುಷ್ಪಬಾಣಗಳಂ ವಜ್ರಾಯುಧದಂತೆ ತೀಕ್ಷ್ಯಂಗಳಂ ಮಾಡಿ ಎನ್ನ೦ ಬಾಧಿಸುತಿರುವೆ ” ಎಂದು ಹೇಳಿ, ಋಷಿಗಳು ಮಾಡಿದ ಯಜ್ಞಕಾರೈಂ ಗಳು ಪರಿಸಮಾಪ್ತವಾದಮೇಲೆ ಇವರಿಂದಪ್ಪಣೆಯಂ ಕೈಕೊಂಡು, ಮನ್ಮಥನಿಂ ತಪ್ತನಾಗಿರುವ ಎನ್ನ ಶರೀರದ ಬಳಲಿಕೆಯಂ ಯಾವ ಸ್ಥಳಕ್ಕೆ ಪೋಗಿ ಪರಿಹರಿಸಲೆಂದು ಅಡಿಗಡಿಗೆ ನಿಟ್ಟುಸಿರು ಬಿಡುತ, ಇನ್ನು ಮೇಲೆ ಎನ್ನ ಪ್ರಿಯಳಾದ ಶಕುಂತಲೆಯ ಸಂದರ್ಶನವೊಂದಲ್ಲದೆ ಇನ್ನೊ ಬ್ಬರೂ ಎನ್ನ ಶರೀರವಂ ರಕ್ಷಿಸಲಾಗಿರೆಂದು ಮನ ದಂದು, ಚಂಡಕಿರಣನಾಗಿ ಮಧ್ಯಾಹ್ನ ಕಾಲದಲ್ಲಿ ಪ್ರಜ್ವಲಿಸುತ್ತಿರುವ ಸೂರ್ಯನಂ ನೋಡಿ-ಈಸಮಯದಲ್ಲಿ ಶಕುಂತಲೆಯು ತನ್ನ ಸಖಿಯರಿಂದೊಡಗೂಡಿ ಮಾಲಿನಿ ಯೆಂಬ ನದೀತೀರದಲ್ಲಿರುವ ಲತಾಮಂಟಪದಲ್ಲಿ ಕೂರವಾದ ಬಿಸಲುಗಾಲವಂ ಕಳೆ ಯುತ್ತ ಇರುವಳಾದ್ದರಿ೦ ನಾನೂ ಆ ನದೀತೀರಕ್ಕೆ ಪೋಗಿ ಅವಳಂ ಕಂಡು ಎನ್ನ ಹೃದಯಸಂತಾಪವಂ ಪೋಗಲಾಡಿಸುವೆನೆಂದು ಮನದಲ್ಲಿ ನಿಶ್ಚಯವಂ ಗೆಯ್ತು, ಖುಷಿ