ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯ -ಶಾಕುಂತಲನಾಟಕ ನವೀನತೀಕೆಯಾದ ರಾಯನು ಯಾವಾಗ ಎನ್ನ ನೇತ್ರಮಾರ್ಗವಂ ಪೊಂದಿದನೋ ಅದು ಮೊದಲಾಗಿ ಅವನಲ್ಲಿ ಅಧಿಕವಾದ ಅಭಿಲಾಷೆಯುಳ್ಳವಳಾಗಿ ಈ ಅವಸ್ಥೆಗೆ ಗುಹ' ಯಾಗಿರುವೆನು ಎನಲು ; ಆ ದುಷ್ಯಂತರಾಯನಾಶಕುಂತಲೆಯ ವಾಕ್ಯವಂ ಕೇಳಿ, ಅತ್ಯಂತ ಸಂತೋಷ ಭರಿತನಾಗಿ,- CC ಈ ಶಕುಂತಲೆಗೆ ಎನ್ನಲ್ಲಿ ಅನುರಾಗವಿರುವುದಂ ಇವಳ ವಚನದಿಂ ಕೇಳತಕ್ಕುದಾಗಿರ್ದುದಂ ಕೇಳಿದೆನು. ಮನ್ಮಥನು ಎನಗೆ ಸಂತಾಪವಂ ಪ್ರಟ್ಟಿಸುವುದಕ್ಕೂ ಕಾರಣನಾಗಿ ಈಗ ಆ ಸಂತಾಪಪರಿಹಾರಕ್ಕೂ ಅವನೇ ಯೋಗ್ಯ ನಾದನು. ಹೇಗೆಂದರೆ:-ವರ್ಷನ್ಮುಖನಾದ ಮೇಘದಿಂ ಕಪ್ಪಾದ ಗ್ರೀಷ್ಮ ಕಾಲದ ಹಗಲು ಸಮಸ್ತ ಪ್ರಾಣಿಗಳಿಗೂ ಸಂತಾಸಕಾರಣವಾಗಿ, ಅಷ್ಟ ಅಲ್ಲೇ ಮಳೆಯುಂಟಾಗುವುದಿ೦ದಾತಾಪಪರಿಹಾರವಂ ಮಾನ್ಸಂತಾದುದು ” ಎಂದು ಸಂತುಷ್ಟನಾಗುತ್ತಿರಲು ; ಆ ಶಕುಂತಲೆಯು ಮರಳಿ ಆ ಸಖಿಯರಂ ಕು೫° ತುಪ್ರಾಣಪ್ರಿಯರು ಗಳಿರಾ, ರಾಜಶ್ರೇಷ್ಟನಾದ ಆ ದುಷ್ಯಂತರಾಯನ ದಯಕ್ಕೆ ನಾನು ಹೇಗೆ ಪಾತ್ರಳಾಗಬೇಕೋ ಆ ಪ್ರಕಾರಕ್ಕೆ ಯತ್ನವ ಮಾಡಬಹುದು. ಇದಮೇಲೆ ನಿಮ್ಮಭಿಮತವಿದ್ದಂತೆ ಕಾರ್ಯವಂ ನಡೆಸಬಹುದು. ನಾನು ಹೇಳಿದಂತೆ ಕಾರ್ಯವು ನಡೆಯದೆ ಇದ್ದಲ್ಲಿ ಈ ಮನ್ಮಥಬಾಧೆಯಂ ಸಹಿಸಲಾರೆನು, ಎನ್ನ ಹೃದಯದಲ್ಲಿ ಜಲಸೇಚನವಂ ಗೆಯ್ಯುವುದು ಎನಲು ; ಇತ್ತಲು ಆ ರಾಯನು ಶಕುಂತಲೆಯು ಪೇಳ ವಾಕ್ಯದಿಂ ಎನ್ನ ಸಂದೇ ಹವು ನಿರ್ಮಲವಾಗಿ ಪೋಗುತ್ತದೆ ” ಎಂದು ತಿಳಿಯುತ್ತಿರಲು ; - ಆ ಪ್ರಿಯಂವದೆಯು ಏಕಾಂತವಾಗಿ ಅನಸೂಯೆಯಂ ಕುಳಿತು- ಎಲೆ ಅನಸೂಯೆ, ಈ ಶಕುಂತಲೆಯು ಅತ್ಯಂತವಾದ ಮನ್ಮಥಬಾಧೆಯಿಂ ಯುಕ್ತಳಾಗಿ ಇರುವಳು. ಇನ್ನು ನಾವು ಕಾಲಹರಣವಂ ಗೆಯ್ಯಲು ಈ ಕ್ರೂರವಾದ ಸಂತಾ ಪವಂ ಸಹಿಸುವುದಕ್ಕೆ ಯೋಗ್ಯಳಾಗಲಾಳು, ಮತ್ತು ಯಾವ ದುಷ್ಯಂತರಾಯ) ನಲ್ಲಿ ಅನುರಾಗಯುಕ್ತಳಾಗಿರುವಳೋ ಆ ಮಹಾರಾಜನು ಪ್ರಸಿದ್ಧವಾದ ಪುರು ವಂಶಕ್ಕೆ ಅಲಂಕಾರರೂಪನಾಗಿ, ರೂಪಿನಲ್ಲಿ ಮನ್ಮಥನಿಗೆ ಮನ್ಮಥನಾಗಿರುವನಾದ್ದ ಅ೦, ಈ ಶಕುಂತಲೆಯು ಆ ರಾಯನಲ್ಲಿ ಅಭಿಲಾಷೆಯಂ ವಿರಚಿಸಿರುವುದು ಯುಕ್ತವಾಗಿರುವುದು ” ಎಂದು ನುಡಿಯಲಾ ಅನಸೂಯೆಯು ಶಕುಂತಲೆಯಂ ಕಿತು._ಎಲ್ ಶಕುಂತಲೆಯೇ, ಮಹಾರಾಜನಾದ ದುಷ್ಯಂತರಾಯನಲ್ಲಿ