ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ --ಕರ್ಣಾಟಕ ಕಾವ್ಯಕಲಾನಿಧಿ ಗಳನ್ನು ತನ್ನ ಮೇಲೆ ಬೀಳದಂತೆ ಬಟ್ಟೆಯ ಕೆಯ್ಯಂ ಮಜರೆಗೆಯ್ಯುವನೇ ಹೇಳು. ಸುಂದರಾಕಾರಳಾದ ನೀನು ಪುರುಷನನ್ನ ವೀಕ್ಷಿಸಿ ಪೋದೆಯಾದರೆ ಯಾವವನು ತಾ ನೇ ಒಲ್ಲೆನೆಂದು ನುಡಿಯುವನು ಪೇಳು ಎಂದು ನುಡಿಯಲಾ ಶಕುಂತಳೆಯು ಮುಗು ಇಗೆಯುಳ್ಳವಳಾಗಿ,-“ಹಾಗಾದರೆ ಶ್ಲೋಕವಂ ಕೂಡಿಸುವೆನು' ಎಂದು ಪ್ರಶ್ನೆ ಶಯ್ಕೆಯಲ್ಲಿ ಚೆನ್ನಾಗಿ ಕುಳಿತು, ಶ್ಲೋಕವಂ ವಿರಚಿಸುವುದಕ್ಕೆ ಯೋಜನೆಯಂ ಗೆಯುತಿರ್ದಳು. ಎಂಬಲ್ಲಿಗೆ ಕೃಷ್ಣರಾಜವಾಣೀವಿಲಾಸ ರತ್ನಾಕರವೆಂಬ ಶಾಕುಂತಲನಾಟಕ ನವೀನಟೀಕಿನಲ್ಲಿ ಶಕುಂತಲೆಯು ವಿರಹಾತುರಳಾಗಿ ದುಷ್ಯಂತರಾಯಂಗೆ ಕಳುಹಿಸಲೋಸುಗ ಶ್ಲೋಕ ರಚನೆಯ ಗೆಯುತಿರ್ದಳೆಂಬ ದ್ವಿತೀಯ ಕಲ್ಲೋಲದಲ್ಲಿ ತೃತೀಯ ತರಂಗಂ ಸಂರ್ಪೂಣಂ. ೨೦, ++ REG!' -RAR <rave<- GSMANIA GeniVER8 ದ್ವಿತೀಯಕಲ್ಲೋಲದ ಚತುರ್ಥ ತರಂಗಂ ಅನಂತರದಲ್ಟಾ ಶಕುಂತಲೆಯು ರೆಪ್ಪೆಯನ್ನಿ ಕೈದೆ, ರಾಯನ ಬಳಿಗೆ ಶ್ಲೋಕವಂ ಬರೆದು ಕಳುಹಿಸುವೆನೆಂಬ ಕುತೂಹಲದಿಂ, ಪದಾನ್ವೇಷಣೆಯಂ ಗೆಯ್ಯುತ್ತಿರಲು, ರಾಯನು ಆ ಶಕುಂತಲೆಯ ಮುಖವು ಚೆನ್ನಾಗಿ ನೋಡಿ, ಪದರಚನೆ ಯಂ ಗೆಯ್ಯುತ್ತಿರುವ ಈ ಶಕುಂತಲೆಯ ಮುಖವು ಎತ್ತಿರುವುದೊಂದು ಹುಬ್ಬಿನಿಂ ಯುಕ್ತವಾಗಿ ರೋಮಾಂಚದಿಂ ಯುಕ್ತವಾದ ಒಂದು ಕಪೋಲಮುಳ್ಳ ಬ್ಲಾಗಿ ಇರುವುದಿ೦ದ, ಎನ್ನಲ್ಲಿ ಇವಳಿಗೆ ಸಂಪೂರ್ಣಾನುರಾಗವಿರುವುದು ವ್ಯಕ್ತ ವಾಗುತ್ತಿರುವುದು' ಎಂದು ಯೋಚಿಸುತ್ತಿರಲು; ಆ ಶಕುಂತಲೆಯು,.-“ಎಲೌಸಖಿಯರುಗಳಿರಾ, ನಾನು ಶ್ಲೋಕವಂ ಯೋ ಜಿಸಿರುವೆನು; ಆ ಕವಂ ಬರೆಯುವುದಕ್ಕೆ ಕಾಗದ ಕಡ್ಡಿ ಮೊದಲಾದ ಸಾಧನಂ ಗಳು ಎನ್ನ ಸಮೀಪದಲ್ಲಿಲ್ಲ ಎಂದು ನುಡಿಯಲಾಪ್ರಿಯಂವದೆಯು, “ ಗಿಣಿಯ ಹೊಟ್ಟಿಯಂತೆ ಮೃದುವಾದ ಈ ತಾವರೆಯ ಹೂವಿನ ದಳದಲ್ಲಿ ನಿನ್ನ ಉಗುರು ಗೊನೆಯಿಂದಾಶ್ಲೋಕವಂ ಬರೆ' ಯೆಂದು ನುಡಿಯಲಾ ಶಕುಂತಲೆಯು ಅದೇ ರೀತಿ ಯಿಂದಾತಾವರೆಯ ದಳದಲ್ಲಿ ಶ್ಲೋಕವಂ ಬರೆದು,-“ಎಲ್‌ ಸಖಿಯರುಗಳಿರಾ,