ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಕರ್ಣಾಟಕ ಕಾವ್ಯಕಲಾನಿಧಿ ಎಷ್ಟು ಕಳೆದ) ಪ್ರಾತಃಕಾಲಕ್ಕೆ ಇನ್ನೆಷ್ಟು ಪೊತ್ತಿರುವುದು ನೋಡೆಂದು ಆಜ್ಞಾಪಿ ಸಲ್ಪಟ್ಟು ಬಂದೆನು” ಎಂದು ದಿಕ್ಕು ಎರಡಂ ನೋಡಿ, ಅರುಣೋದಯವಂ ಅಸ್ತಂಗ ತನಾಗುವ ಚಂದ್ರನಂ ಕಂಡು ದಿಗಿಲಿನಿಂದೊಡಗೂಡಿ, ೧೦ ಅಯ್ಯೋ! ಆಗಲೇ ಬೆಳಗಾಗಿ ಮಹಾ ಕಷ್ಟ ಬಂದುದು! ಒಂದು ಕಡೆಯಲ್ಲಿ ಸಮಸ್ತ ಗಿಡ ಬಳ್ಳಿ ಮೊದಲಾದ ಔಷ ಧಗಳಿಗೆ ಪತಿಯಾದ ಚಂದ್ರನು ಅಸ್ತಗಿರಿಯ ಶಿಖರವಂ ಕುತು ಪೋಗುತ್ತಿರು ವನು. ಒಂದು ಕಡೆಯಲ್ಲಿ ಸೂರೆನು ಅರುಣನೆಂಬ ಸಾರಥಿಯಂ ಮುಂದಿಟ್ಟು ಕೊಂಡು ಪ್ರಕಾಶಮಾನನಾಗುತ್ತಿರುವನು, ಮತ್ತು ಉದಯಾಸ್ತವಂ ಪೊಂದು ರುವ ಈ ಸೂರಚಂದ್ರರುಗಳ ವೃದ್ಧಿ ಕ್ಷಯಾ ತಮಾದ ಕಾಂತಿಗಳಂ ನೋಡಲು ಸಮಸ್ತ ಜನಗಳು ತಮ್ಮತಮ್ಮ ಸುಖದುಃಖಗಳಿಂದಿಗೇ ರೀತಿಯಿಂ ಕಟ್ಟು ಬೀಳುವ ರೆಂಬದಾಗಿ ತೋಚುವುದು. ಅಲ್ಲದೆ ಚಂದ್ರನು ಪ್ರಕಾಶಮಾನನಾಗಿರುವಾಗ್ಗೆ ಯಾವ ಕನ್ನೆ ದಿಲೆಯ ಲತೆಯು ಅರಳಿದ ಪುಷ್ಪಗಳಿ೦ ಮನೋಹರವಾಗಿ ನೇತ್ರಾ ನಂದವನ್ನುಂಟುಮಾಡುತಿರ್ದುದೋ, ಅದೇ ಕಲೆಯ ಬಳ್ಳಿಯು ಪ್ರಿಯಕರ ನಾದ ಚಂದ್ರನು ಮರೆಯಾಗಲು ಈಗ ನೆನಪಿಗೆ ಯೋಗ್ಯವಾದ ಕಾಂತಿಯನ್ನು ದಾಗಿ ಮೊದಲಿನಂತೆ ಎನ್ನ ನೇತ್ರಗಳಂ ಸಂತೋಷಗೊಳಿಸಲಾಗಿದೆ, ಹಾಗೆ ಲೋಕದಲ್ಲಿ ಮನಸ್ಸಿಗೆ ಆನಂದವನ್ನುಂಟುಮಾಡುತಿರ್ದ ಪುರುಷನು ಅಗಲಿ ಪೋದು ದಹಿಂದುಂಟಾದ ಸ್ತ್ರೀಯರುಗಳ ದುಃಖಗಳು ಸಹಿಸುವುದಕ್ಕಾಗದೆ ಇರುವುವು ? ಎಂದು ನುಡಿಯಲು; - ಆ ವಾಕ್ಯವಂ ಕೇಳಿದ ಅನಸೂಯೆಯು ಭಿನ್ನ ಹೃದಯಳಾಗಿ, ಗಂಧ ತಾಂಬೂಲ ಪುಷ್ಪ ಮೊದಲಾದ ವಿಷಯಗಳಲ್ಲಿ ಪರಾಜು ಖಳಾದ ಶಕುಂತಲೆಯು ಪ್ರಿಯನ ಅಗಲಿಕೆಯಿಂದುಂಟಾದ ದುಃಖವನ್ನು ಒಂದು ಬಾರಿಯಾದರೂ ತಿಳಿದವ ಇಲ್ಲಾ ! ಈ ಪ್ರಕಾರಳಾದ ಶಕುಂತಲೆಯಲ್ಲಿ ಆ ದುಷ್ಯಂತರಾಯನು ನಾನಾ ಪ್ರಕಾ ರಮಾದ ಚಮತ್ಕಾರ ವಾಕ್ಯಂಗಳಂ ನುಡಿದು, ಅನ್ಯಾಯವಾದ ಕಾವ್ಯಗಳಂ ವಿರ ಚಿಸಿ ವೋಗಿರುವನು. ಹಾಗಾದರೂ ಎಲ್ಲಾ ವೃತ್ತಾಂತವಂ ತಿಳಿದ ನಾನು ಈಗ ಮಾಡತಕ್ಕುದೇನು!” ಎಂದು ಬಹಳಮಾದ ಆಯಾಸಮಂ ಪೊಂದುತ್ತಿರಲು; ಆ ಕಣ್ವ ಋಷಿಯ ಶಿಷ್ಯನು- ಮಕಾಲಪ್ರಾಪ್ತವಾಗಿರುವುದು ಗುರು ವಾದ ಕಣ್ವಮುನಿಗೆ ವಿಜ್ಞಾಪನೆಯಂ ಗೆಯ್ಯುವೆ'ನೆಂದು ಪೋಗಲು; - ಆ ಅನಸೂಯೆಯು ಚಿಂತಾಕ್ರಾಂತಳಾಗಿ,-“ ಉಚಿತವಾಗಿ ಮಾಡತಕ್ಕಂಥ ಇರ್ಯಗಳು ಮಾಡುವೆನೆಂದರೆ ಅದಕ್ಕೆ ಸಾಧನಗಳಿಲ್ಲದೆ ಇರುವುದಿ೦ದ ಎನ್ನ