ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲ ನಾಟಕ ನವೀನಟೀಕೆಅಧಿಕಾಶ್ಚರಯುಕ್ತಳಾಗಿ ಎಲೆ ಸಖಿಯೇ, ಆ ಅಶರೀರವಾಕ್ಯವು ಏನೆಂ ದಾಡಿದುದು? ಅದಂ ಜಾಗ್ರತೆಯಾಗಿ ಹೇಳು ಎಂದು ನುಡಿಯಲು; ಪ್ರಿಯಂವದೆಯು ಎಲೆ ಸಖಿಯೇ, ಅದು ವೃತ್ತಾಂತವಂ ಪೇಳುವೆನು, ಕೇಳು ಆ ಕಣ್ವ ಋಷಿಯಂ ಕುಹ' ತು- ಬ್ರಹ್ಮವಿದ್ಯಾಪಾರಗನಾದ ಕಣ್ವಮುನಿಯೇ? ಹೇಗೆ ಬನ್ನಿ ಯವೃಕ್ಷವು ಗರ್ಭದಲ್ಲಿ ಅಗ್ನಿಯಂ ಧರಿಸಿಕೊಂಡಿರುವುದೋ, ಅದಂತೆ ನಿನ್ನ ಮಗಳಾದ ಶಕುಂತಲೆಯು ಭೂಮಿಯ ಐಶ್ವಠ್ಯಕ್ರೋಸುಗ ದುಷ್ಯಂತರಾಯನಿಂ ದಿರಿಸಲ್ಪಟ್ಟ ವೀರವಂ ಧರಿಸಿರುವಳು. ಇದಂ ತಿಳಿ' ಎಂದು ನುಡಿದ ಅಶರೀರವಾಕ್ಯ ನನ್ನಾ ಋಷಿಯು ಕೇಳಿ--- ಎನ್ನ ಪುತ್ರಿಯ ಗರ್ಭದಲ್ಲಿ ಸಮಸ್ತ ಭೂಮಿಗೂ ದೊರೆ ಯಾಗುವ ಮಹಾಪುರುಷನು ಸುಟ್ಟುವನೆಂತಲೂ ಇವಳಿಗೆ ಮಹಾರಾಜನಾದ ದುಷ್ಯಂತರಾಯನು ಪತಿಯಾದನೆಂತಲೂ ತಿಳಿದು ಸಂತೋಷಭರಿತನಾದನು ಎಂದು ನುಡಿಯಲು; ಅನಸೂಯೆಯು ಅಧಿಕಹರ್ಷಾನ್ವಿತಳಾಗಿ ಆ ಪ್ರಿಯಂವದೆಯನು ಲಿಂಗಿಸಿ, ನಮಗೆ ಬಹಳ ಸಂತೋಷವುಂಟಾದುದು. ಆದರೂ ನಮ್ಮ ಶಕುಂತಲೆಯು ಈಗಲೇ ಪ್ರತಿವಾನನಗರಕ್ಕೆ ಕರೆದುಕೊಂಡು ಹೋಗುವರಾದರೆ ನಾವೀರ್ವರು ಪೋಗಿ ಅವ ಳಿಗೆ ಮಾಡತಕ್ಕ ಉಪಚಾರವಂ ಮಾಡಿ, ದೀನಳಾದ ಅವಳಿಗೆ ಸಂತೋಷವಂ ಪ್ರಟ್ಟಿಸಿ, ನಮ್ಮ ಅಭಿಲಾಷೆಗೆ ಯೋಗ್ಯವಾದ ಸಂತೋಷವನ್ನನುಭವಿಸುವುದಕ್ಕೆ ಅವಳ ಸಮಾಪನಂ ಕುರಿತು ಪೋಗಬೇಕು. ಮತ್ತು ಆ ಶಕುಂತಲೆಯ ಅಲಂಕಾ ರನಿಮಿತ್ತವಾಗಿ ಕೇಸರ ಪುಷ್ಪಮಾಲೆಯಂ ಕಟ್ಟಿ ಸೀಮಾವಿನ ಮರದ ಕೊನೆಯ ಲ್ಲಿರುವ ತೆಂಗಿನ ಗ ಯ ಹುನ ಕುಕ್ಕೆಯಲ್ಲಿರಿಸಿರುವೆನು. ಆ ಮಾಲೆಯು ಕಾಲ ವಿಳಂಬಮಾದಲ್ಲಿ ಕಂಡಿಪೋಗುವುದು. ನೀನು ಅದಂ ಜಾಗ್ರತೆಯಾಗಿ ಶಕುಂತಲೆಯ ಹಸ್ತಕ್ಕೆ ತಂದು ಕೊಡು. ನಾನು ಅವಳ ಅಲಂಕಾರಕ್ಕೋಸುಗ ಗೋರೋಜನವಂ, ತೀರ್ಥಮೃತ್ತಿಕೆಯಂ ನವೀನದೂರ್ವಾದಳ ಮೊದಲಾದ ಮಂಗಳಕರವಾದ ಅಲಂ ಕಾರಸಾಮಗ್ರಿಯಂ ತೆಗೆದುಕೊಂಡು ಬರುವೆನು” ಎನ್ನಲು; ಆ ವಾಕ್ಯಕ್ಕೆ ಜಾಗ್ರ ತೆಯಿಂ ಪೋಗೆಂದವಳಂ ಕಳುಹಿಸಿದ ಪ್ರಿಯಂವದೆಯು ಕೇಸರಮಾಲಿಕಾಪೂರ್ಣ ಮಾದ ಕುಕ್ಕೆಯಂ ತೆಗೆದುಕೊಂಡು ಬರಲು; ಅಷ್ಟ ಅಲ್ಲಿ ಕಣ್ವಮುನಿಯು ಗೌತಮಿಯಂ ಕುರಿತು- ಎಲೆ ತಂಗಿ ಯಾದ ಗೌತಮಿಯೇ, ನೀನು ಶಾರ್ಜ್ರವಮಿತ್ರನೆಂಬ ಶಿಷ್ಯನಂ ಶಕುಂತಳೆಯೊಡನೆ ಪೋಗುವಂತೆ ನೇಮಕಮಾಡು ” ಎಂದು ಆಜ್ಞೆಯನ್ನೀಯಲು;