ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೨೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ. ១៦ ಹಾದಿಯಮೇಲೆ ಬಿದ್ದಿ ರುವದಿಲ್ಲ. ನಮಗೆ ಬಲವಿಲ್ಲದ ಈಗಿನಕಾಲದಲ್ಲಿ ಸ್ವಜನ ದ್ರೋಹಿಗಳೂ, ಸ್ವದೇಶದ್ರೋಹಿಗಳೂ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಲಿದ್ದಾರೆ. ಈಗ ಎಲ್ಲವೂ ನಿನ್ನನ್ನು ಅವಲಂಬಿಸಿರುತ್ತದೆ. ದುರ್ಗದೊಳಗಿನ ನಮ್ಮೆಲ್ಲರನ್ನು ನೀನು ಆಶೀರ್ವದಿಶಿ ಪ್ರೋತ್ಸಾಹಿಸು- ಎಲ್ಲಕಡೆಗೂ ಜಾಗರೂಕರಾಗಿರುವಂತೆ ಅವರವರಿ ಗೆ ಸೂಚಿಸಿರಿ. ಈಪ್ರಸಂಗದಲ್ಲಿ ನಮ್ಮ ಪರಾಕ್ರಮವನ್ನು ನೋಡಿ ಸ್ವರ್ಗದಲ್ಲಿರು ವ ಅಬಾಸಾಹೇಬರು ಕೌತುಕಪಡಲಿ! ಏಸೂಬಾಯಿ-ಶಾಬಾಸ, ರಾಜಕುವರ! ನೀನು ವೀರಪುತ್ರಿಯ-ವೀರಪತ್ನಿ ಹೂ ಅನಿಸಿಕೊಳ್ಳುವದರ ಸಾರ್ಥಕವಾಯಿತು! ಶಿವಪ್ರಭುವಿನ ಮಗಳಿಗೆ ಒಪ್ಪು ವಂತೆ ನೀನು ಮಾತಾಡಿದೆ! ಆದರೆ, ತಂಗೀ, ಈಗ ಅಕಾಲದಲ್ಲಿ ಈ ಇಂದ್ರಧನುಷ್ಯವು ಮೂಡಿರುವದು ಅಪಶಕುನವಲ್ಲವೇ? ಏನೇ ಇರಲಿ, ಈಗ ಅದರ ವಿಚಾರವೇತಕ್ಕೆ? ನೀನು ಆ ಶಿಖರದಮೇಲೆ ಹೋಗಿ ಮಕರಾಕತಿಯಾಗಿ ಸೈನ್ಯದ ವ್ಯೂಹವನ್ನು ರಚಿಸಿ ಕೊಂಡು ಇರುಹೋಗು, ನಾಲೂ ಕಡೆಗೆ ಸ್ವತಃ ತಿರುಗಾಡಿ ಎಲ್ಲ ವ್ಯಸ್ಥೆಯನ್ನು ನೋಡುತ್ತಿರು. ಸುರತದಕಡೆಯಿಂದ, ಹಾಗು ಮಹಾಡದಕಡೆಯಿಂದ, ಅದರಂತೆ ಜಂಜೀರೆಯಕಡೆಯಿಂದ ಹೀಗೆ ಅನೇಕಕಡೆಯಿಂದ ಶತ್ರುಗಳು ನಮ್ಮ ಮೇಲೆ ಏರಿಬ ರಬಹುದಾಗಿದೆ. ಪ್ರಸಂಗವು ಕಠಿಣವಿರುವದು. ಇನ್ನು ಎಲ್ಲಭಾರವನ್ನು ಅಂಬಾ ಭವಾನಿಯ ಮೇಲೆ ಹಾಕಿ ನಾವು ಪರಮ ಸಾಹಸಮಾಡೋಣ! ಯಶಸ್ಸು ಅವರು ಶಸ್ಸು ಈಶ್ವರಾಧೀನವು. ಆಗಲಿ, ರಾಜಕುವರ, ಹೋಗು, ಯಶಸ್ವಿಯಾಗುಹೋಗು . ಈ ಮೇರಗೆ ನುಡಿಯಲು, ರಾಜಕುವರಳು. ತನ್ನ ಸ್ಥಳಕ್ಕೆ ಸೈನ್ಯದೊಡನೆ ಹೋಗಿ, ಅದನ್ನು ಭದ್ರವಾಗಿ ರಕ್ಷಿಸತೊಡಗಿದಳು. ಇತ್ತ ಏಸೂಬಾಯಿಯು ದುರ್ಗದ ಎಲ್ಲ ಸ್ಥಳಗಳನ್ನು ಕಣ್ಣ ಮುಟ್ಟಿನೋಡುವದಕ್ಕಾಗಿಯೂ, ಸೈನ್ಯವನ್ನು ವ್ಯವಸ್ಥೆಗೊಳಿಸಿ, ಎಲ್ಲ ಕಡೆಗೆ ಬಂದೋಬಸ್ತು ಕಾಯುವುದಕ್ಕಾಗಿಯೂ ಶ್ರೇಷ್ಠ ಸೇನಾನಿಯನ್ನು ಹಿಂದಕ್ಕೆ ದೂಡುವ ಚಂದದಿಂದ ಹೊರಟಳು. ಇಷ್ಟು ವ್ಯವಸ್ಥೆ ಯುಗುವದರೊಳಗೆ, ಮೆಗಲಸೈನ್ಯವು ದುರ್ಗವನ್ನು ಮುತ್ತುವದಕ್ಕಾಗಿ ನಾಲ್ಲೂ ಕಡೆಯಿಂದ ಸಮೀಪಕ್ಕೆ ಬಂತಂಬ ಸುದ್ದಿ ಯನ್ನು ಚಾರರು ಬಂದುಹೇಳಿದರು . ರಾಜ ಕುವರಳು ತನ್ನ ಅತ್ಯುತ್ತಮವಾದ ಕುದುರೆಯನ್ನು ಹತ್ತಿಕೊಂಡು ತಾನಿರುವಸ್ಥಳ ದ ಸುತ್ತುಮುತ್ತಲಿನ ಪ್ರದೇಶ ಭದ್ರತೆಯನ್ನು ಪರೀಕ್ಷಿಸುವದಕ್ಕಾಗಿ ವಿದ್ಯುಲ್ಲತ ಯಂತ ನಾಲ್ಕೂ ಕಡೆಗೆ ಸಂಚರಿಸಹತ್ತಿದಳು, ಆಕೆಯು ಆವೇಶದಿಂದ ಗುಡ್ಡವ ನ್ನು ಇಳಿದುಬರುತ್ತಿರಲು, ಎದುರಿಗೆ, ಒಬ್ಬ ತರುಣ ರಾವುತನು ಬರತೊಡಗಿದನು,