ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ. ನಮ್ಮ “ಶ್ರೀ ಶೇಷಾಚಲ ವೇದ ಮತ್ತು ಸಂಸ್ಕೃತ ಪಾಠಶಾಲೆ”ಯ ಸ್ಥಳಾಂತರದ ಭವಿಷ್ಯವನ್ನು ವರ್ತಿಸುವದಕ್ಕಾಗಿಯೋ ಅನ್ನುವಂತೆ, ಶ್ರೀಗುರುವು ಈ “ಶಿವಪ್ರಭುವಿನ ಪುಣ್ಯ”ವೆಂಬ ಕಾದಂಬರಿಯನ್ನು ನನ್ನ ಕೈಯಿಂದ ಬರೆಸಿದನೆಂಬದರಲ್ಲಿ ಸಂಶಯವಿಲ್ಲ..! ಪಾಠಶಾಲೆಯು ಅಗಡಿಯ ಆನಂದವನದಿಂದ ಹಾವೇರಿಯ ಶ್ರೀರಾಮ ಮಂದಿರಕ್ಕೆ ಬಂದು ಎ.ಟತಿಂಗಳಾಗುತ್ತ ಬಂದಿತು: ಕಾದಂಬರಿಯು ಈಗ ಮುಗಿಯಿತು! ಬಲಿಷ್ಟನಾದ ಔರಂಗಜೇಬ ಬಾದಶಹನ ಸ್ವಾರ್ಥಪರಾಯಣತೆಯ ಉಪಟಲದ ತಾಪದಿಂದ ಸಾತ್ವಿಕನಾದ ರಾಜಾರಾಮನು ಪರಿತಪ್ತನಾದಂತೆ, ಧೂರ್ತರ ನೀಚವಾದ ಸ್ವಾರ್ಥಪರಾಯಣತೆಯ ಕುಟಿಲತಂತ್ರದ ಉಪಟಲದ ತಾಪದಿಂದ ಸತ್ವಹೀನರಾದ ನಾವು ಅತ್ಯಂತವಾಗಿ ಪರಿತಪ್ತರಾದೆವೆಂದು ಹೇಳದೆಯಿರಲಾರೆವು. ಛತ್ರಪತಿ ರಾಜಾರಾಮನು ತನ್ನ ಗುರುವಿನ ಪ್ರಸಾದರೂಪವಾದ ಮಹಾರಾಷ್ಟ್ರ ರಾಜ್ಯದ ಅಭಿಮನವನ್ನು ವಹಿಸಿದ್ದನ್ನು ನಾವು ನಮ್ಮ ಶ್ರೀಗುರುವಿನ ಪ್ರಸಾದರೂಪವಾದ ಪಾತಶಾಲೆಯ ಅಭಿನವನ್ನು ವಹಿಸಿ ಅವು, ಪಾಠಶಾಲಾರೂಪವಾದ ವೃಕ್ಷದ ೧ ವರ್ಷದ ಸಸಿಯನ್ನು ಅನಂದವನದ ದೂ ಪಿತ ಪರಿಸ್ಥಿತಿಯಿಂದ ಕಿತ್ತುಕೊಂಡು ಹೋಗಿ, ಹಾವೇರಿಯ ರಾಮಮಂದಿರದಲ್ಲಿ ಊರು ವಾಗ ನಮಗೆ ಎಷ್ಟು ತ್ರಾಸವಾಗಿರಬಹುದೆಂಬದನ್ನು, ನಮ್ಮ ಈ ಕಾದಂಬರಿಯನ್ನು ಓದಿದ ವಾಚಕರು ತರ್ಕಿಸಬಹುದು. ಬಾದಶಹನು ಕಿಹಚ್ಚಿಸಿದ್ದರಿಂದ ಶಿವಪ್ರಭುವಿನ ಪುಣ್ಯವೃಕ್ಷವು ಫಲಿಸಿದ್ದು ಇಲ್ಲಿಂದ ಮುಂದೆಯೇಯೆಂಬದನ್ನು ಇತಿಹಾಸಜ್ಞರಾದವಾಚಕರಿಗೆ ನಾವು ಹೇಳುವ ಕಾರಣವಿಲ್ಲ; ಅದರತೆ, ಸ್ವಾರ್ಥಪರಾಯಣರಾದ ವಿಘ್ನ ಸಂತೋಷಿಗಳು ಶ್ರೀಗುರುವಿನ ಪಾಠಶಾಲಾ ವೃಕ್ಷವನ್ನು ಕಿತ್ತಿಸಿ ಹಾವೇರಿಯಲ್ಲಿ ಹಚ್ಚಿಸಿರುವದರಿಂದ, ಅದು ಫಲಿಸುವದು ಇನ್ನು, ಮುಂದೆಯೇ ಯೆಂದು ನಾವು ಭಾವಿಸಿರುವೆವು. ಶ್ರೀಗುರುವು ಭವಿಷ್ಯ ರೂಪವಾಗಿಯೇ ಈ ಕಾದಂಬರಿಯನ್ನು ಬರೆಸಿರುವದರಿಂದ, ನಮ್ಮ ಭಾವನೆಯು ನಿರರ್ಥಕವಾದದ್ದೆಂದು ಯಾರೂ ಭಾವಿಸಲಾಗದು ! ಸರಸ ಗ್ರ:ಕಮಾಲಾ ಆಸೀಸ ಹಾವೇರಿ. ತಾ, ೨೩-೯-೯೧೮. ಕನ್ನಡಿನ ಸೇವಕ, ವೇ, ತಿ, ಗಳಗನಾಥ