ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೭೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ ೬t ಹೋದ ಬಳಿಕ ಶಿವಾಲಯದ ಮುಂದಿನ ಕುಂಡದ ಮೇಲೆ ಅರ್ತ್ಯ ಬಿಡುವೆವು , ಅಲ್ಲಿ ಯ ಜೊತಿರ್ಲಿಂಗದಿಂದ ಒಸರುವ ಗಂಗಾ ಪ್ರವಾಹವನ್ನು ತರುಬಿ ಕುಂಡವನು ಮಾಡಿರುತ್ತಾರೆ. ಕುಂಡವು ಯಾವಾಗಲೂ ನೀರಿನಿಂದ ಸಂಪೂರ್ಣವಾಗಿ ತುಂಬಿ, ರುತ್ತದೆ. ಅದೇ ಕುಂಡದಿಂದ ಮೇಲೆ ಹೇಳಿರುವ ಸರವು ಹುಟ್ಟಿ ಹರಿಯುತ್ತದೆ. ಅರ್ಥವನ್ನು ಕೊಟ್ಟ ಬಳಿಕ ದೇವರ ಮುಂದೆ ನೈವೇದ್ಯವಿಡುವವು. ಮತ್ತೊಂದು 'ನೈವೇದ್ಯವನ್ನು ಆ ಮೂಲಪುರುಷನ ಸಲುವಾಗಿ ಇಡುವೆವು , ಈ ದಿವಸ ಮೂಲ. ಪುರುಷನ ಅಭ್ಯಂಗಸ್ನಾನದ ಸಲುವಾಗಿ ಒಂದು ಬೆಳ್ಳಿಯ ಜರಂಗದ ಮೇಲೆ ಅಷ್ಟ ಗಂಧವೇ ಮೊದಲಾದ ಸುಗಂಧ ದ್ರವ್ಯಗಳನ್ನು ಸಿದ್ಧ ಮಾಡಿ ಇಡಬೇಕಾಗುವದು ; ಮತ್ತು ಬೆಳ್ಳಿಯ ಗಂಗಾಳದಲ್ಲಿ ನೀರು ತೋಡಿ ಇಡಬೇಕಾಗುವದು ; ಅದರಂತೆ ಉಡಲಿಕ್ಕೆ ಹೊಸ ಧೋತರಜೋಡನ್ನು ಇಡಬೇಕಾಗುವಡು , ಮುಖಶುದ್ಧಿಯ ಸಲುವಾಗಿ ತಾಂಬೂಲವನ್ನು ಸಹ ಇಡಬೇಕಾಗುವದು ! , ಒಟ್ಟಿಗೆ ಹೇಳತಕ್ಕದ್ದೇನಂದರೆ, ಇಂಥ ದಂತ ಕಥೆಗಳು ಜನರಲ್ಲಿ ರೂಢವಾಗಿದ್ದ ದ್ದರಿಂದ, ಆ ಗುಡಿಯ ಸುತ್ತು ಮುತ್ತು ನಾಲ್ಕಾರು ಮೈ ನ ಅಂತರದಲ್ಲಿ ಯಾರೂ ಸುಳಿಯುತ್ತಿದ್ದಿಲ್ಲ! ಆದರೆ ಆ ಅರಣ್ಯದಲ್ಲಿಯ ಸರವು ಪ್ರತ್ಯಕ್ಷ ಶಿವಲಿಂಗದ ಸನ್ನಿಧಿ ಯಿಂದ ಹೊರಟು ಬರುವದರಿಂದ, ಅದನ್ನು ಪವಿತ್ರ ಗಂಗೆಯೆಂದು ತಿಳಿದು ಸದ್ಯಾವ ನೆಯಿಂದ ಮಂಟರು ಸಂಭಾಜಿಯು ದಶಾಹಾಂತದ ಕರ್ಮವನ್ನು ಮಾಡುವದಕ್ಕಾಗಿ ರಾಜಾರಾಮ ಮಹಾರಾಜರನ್ನು ಕೂಡಿಕೊಂಡು ಬಂದಿದ್ದರು , ಈ ಕರ್ಮವನ್ನು ಸಾಂಗ ಮ ಡಿ ಸು ವ ದ ಕಾ ಗಿ ಶ್ರೀ ಸಮರ್ಥರ ಶಿಷ್ಯರಾದ ದಿವಾಕರಭಟ್ಟ, ರ೦ಗ ನಾ ಥ ಸ್ವಾ ಮಿ , ಅಡಸೂಳ, ಬೇರೆ ಮರಾಟ ಸರದಾರರು ಬಂದಿದ್ದರು. ಸುಪ್ರಸಿದ್ಧ ಗಾಗಾಭಟ್ಟರ ಚಿರಂಜೀವರು ಕರ್ಮವನ್ನು ನಡೆಸಿದರು , ಯಥಾ ಸಾಂಗವಾಗಿ ಕರ್ಮವು ಬಹು ಗಾಂಭೀರ್ಯದಿಂದ ಪೂರ್ಣವಾಯಿತು. ಮುಂದಿನ ಮಾರ್ಗವನ್ನು ಕಂಡುಕೊಳ್ಳುವದಕ್ಕಾಗಿ ಮಹಾರಾಷ್ಟ್ರ ಮಂಡಲವು ರಾಜಾರಾಮ ಮಹಾರಾಜರನ್ನು ಕ ರ ಕ ೦ ಡು ರಾ ಯ ಗ ಡ ದ ಮೇಲೆ ಸಾಗಿತು. ಆದರೆ ವಾಚಕರ ಪರಿಚಯದವನಾದ ಖಂಡೋಬಾ ಚೀಟನೀಸನೊಬ್ಬನು ಮಾತ್ರ ರಾಯ ಗಡಕ್ಕೆ ಹೋಗದೆ, ಹಿಂದೆ ಉಳಿದನು , ಸಂಭಾಜಿಯ ಮೇಲೆ ಖಂಡೋಬನ ಭಕ್ತಿಯು ವಿಶೇಷವಾಗಿ ಇದ್ದದ್ದರಿಂದ , ತನ್ನ ಸ್ವಾಮಿಯ ಮರಣದಿಂದ ಆತನಿಗೆ ಬಹಳ ದುಃಖವಾಗಿತ್ತು. ಅದರಂತೆ, ತನ್ನ ಸ್ವಾಮಿಯ ವಂಶಜರು ಮಹಾರಾಷ್ಟ್ರ ರಾಜ್ಯವನ್ನು ಚಿರಕಾಲ ಆಳಬೇಕಂತಲೂ ಆತನು ಚಿ೦ತಿ ಸು ತ್ತಿ ದ್ದನು. ಹೀಗೆ ತನ್ನ