ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೭೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನತ, ಈ ದುರ್ಗವನ್ನು ಮಾಡಿದ್ದ ರ ಮರಿರಬಹುದು, ಆ ದಿನ ಹ್ಯಾಗ ನಾನು ಇಲ್ಲಿಯವರೆಗೆ ಬಂದಿದ್ದೇನೆ, ಶಂಕರನ ದರ್ಶನವನ್ನು ಮ0 ಈ ಹೋಗೋಣ. ಒಳ್ಳೆಯ ಜಾಗೃತಸ್ಥಾನವೆಂದು ಹೇಳುತ್ತಾರೆ; ಆದರೆ ಆ ಬ್ರಹ್ಮ ರಾಕ್ಷಸನು ಭೆಟ್ಟಿಯಾದರೆ ! ಆಗಲೊಲ್ಲದೇ ? ಅದಾದರೂ ಹಿಂದಕೊಮ್ಮೆ ನನ್ನ ದೇಶ ಬಂಧುವೇ ಆಗಿತ್ತಲ್ಲವೆ ? ಮುಸಲ್ಮಾನರ ಮರೆ ಮೋಸದಿಂದ ಅದು ಇಹ ಲೋಕದ ಸುಖಕ್ಕೆ ಎರವಾಗಿರುವದಲ್ಲವೆ ? ಅಂದ ಬಳಿಕ ಆ ಬ್ರಹ್ಮರಾಕ್ಷಸನ ಮನ ಸ್ಸಿನಲ್ಲಿಯ ಮುಸಲ್ಮಾನರ ಸೇಡು ತೀರಿಸಿಕೊಳ್ಳುವ ಬುದ್ದಿಯು ಜಾಗ್ರತವಾಗಿ ರಬಹುದು. ನಮ್ಮ ಮಹಾರಾಷ್ಟ್ರದ ಪ್ರತಿ ರೋಮ ರಂಧ್ರದಲ್ಲಿ ಕೂಡ ಸೇಡಿನ ಆವೇಶವು ತುಂಬಿಕೊಂಡಿರುತ್ತದೆ ! ಅಂದ ಬಳಿಕ ನಾವಿಬ್ಬರೂ ಸಮ ದುಃಖಿಗ ಗಿರುವದರಿಂದ ಬೇಗನೇ ಏಕದೇವರಾಗುವೆವು ? ಈ ಮೇರೆಗೆ ವಿಚಾರಮಾಡುತ್ತ ಮಾರ್ಗವನ್ನು ಕ್ರಮಿಸಹತ್ತಿದ ಖಂಡೋಬನು ದೇವಸ್ಥಾನದ ಬಳಿಗಂತು ಬಂದನು. ದೇವಸ್ಥಾನವೇನು ಸಣ್ಣದೆ ! ಅದೊಂದು ಪ್ರಚಂಡವಾದ ಕೋಟೆಯಂತೆಯಿತ್ತು. ಅದರ ಸುತ್ತುಮುತ್ತು ದಟ್ಟಗಿಡಗಳು ಹಬ್ಬಿದ್ದು, ಆ ಗಿಡಗಳ ಆಚೆಯಲ್ಲಿ ದೇವಸ್ಥಾನದ ಸುತ್ತು ಮುತ್ತು ಪ್ರಚಂಡವಾದ ಗೋಡೆಯು ಇತ್ತು. ಆತನು ದೇವಸ್ಥಾನವನ್ನು ಪ್ರವೇಶಿಸುವದಕ್ಕಾಗಿ ಹಾಗೆಯೇ ಮುಂದಕ್ಕೆ ಸಾಗಿದನು. ಆ ದೇವಸ್ಥಾನದ ಪ್ರಚಂಡವಾದ ಮಹಾದ್ವಾರವು ಅಂಬಾರೆ ಹಾಕಿದ ಎರಡು ಅನೆಗಳು ಜೋಡಾಗಿ ಹೆ೦ಗುವಷ್ಟು ಪ್ರಶಸ್ತವಾಗಿತ್ತು. ಒಬ್ಬ ಮನುಷ್ಯನು ನಿಂತು ಒಳಗೆ ಹೋಗುವಷ್ಟು ದಿಡ್ಡಿಯಬಾಗಿಲು ಪ್ರಶಸ್ತವಾಗಿತ್ತು, ಖಂ ಡೋಚಿಯು ಹಾಗೆಯೇ ಮುಂದಕ್ಕೆ ಹೋಗಲು, ದಿಡಿಯಬಾಗಿಲಿಗೆ ಹಾಕುವ ದೊಡ್ಡ ಕೀಲಿಯ ಬಾಗಿಲನು ಒಂದೆ ಬಿದ್ದಿತ್ತು. ಅವನ್ನು ಇಬ್ಬರು ಪ್ರಖಾಶದಿಂದ ಎತ್ತಬಹುದು! ಕೀಲಿಯ ಬಾಗಿಲಮುಂದೆ ಬಿದ್ದದ್ದನ್ನು ನೋಡಿ, ಒಳಗೆ ಹಸರಾದು ಹೋಗಿರಬಹುದು ಬ ಸಂಶಯವು ಖಂಡೋಜಿಯಮನಸ್ಸಿನಲ್ಲಿ ಉತ್ಪನ್ನವಮಿತ್ತು, ಆದರೆ ಅದಕ್ಕೆ ಆತನು ಹೆದರಲಿಲ್ಲ. ಯಾರು ಹೋಗಿರಿಲ್ಲರೆಕೆ, ಬಿಡಲೊಲ್ಲರೇಕೆ, ತಾನೊಂದು ಒಳಗೆ ಹೋಗಿ ದೇವರದರ್ಶನ ತಕೊಂಡು ಬಂದರಾಯಿತೆಂದು ಆತನು ಗು ಡಿ ಯ ನ್ನು ಹೊಕ್ಕನು. ಗುಡಿಯ ಸುತ್ತಲಿನ ಆ ಪ್ರಚಂಡವಾದ ಆವಾರವನ್ನು ನೋಡಿ ಖಂಡೋ 'ಬನು ಬೆರಗಾದನು. ಗರ್ಭಗುಡಿಯ ಎದುರಿಗೆ ಒಂದು ವಿಸ್ತಾರವಾದ ಕುಂಡವು ಇತ್ತು, ಅದನ್ನು ನಾಲ್ಲೂಕಡೆಯಲ್ಲಿ ಹೊಡೆದ ಕಲ್ಲುಗಳಿಂದ ಸುಂದರವಾಗಿ ಕಟ್ಟಿದ್ದು, ಕುಂಡವು ಹಲದಿಂದ ಸಂಪೂರ್ಣವಾಗಿತ್ತು. ' ಅದರಲ್ಲಿ ನಾನಾ ಪ್ರಕಾರದ ಪಕ್ಷಿಗಳು ಜಲ