ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೮೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಸುರಸಗ್ರಂಥಮಾಲಾ ದ್ದಲ್ಲ; ಯಾಕಂದರೆ, ಸ್ವಾಮಿನಿಷ್ಟರನ್ನು ರಕ್ಷಿಸಲಿಕ್ಕೆ ಭಗವತ್ಪಾಛತ್ರವು ಇದ್ದೇ ಇರುತ್ತದೆ, ನಮ್ಮೆಲ್ಲರ ನಿಜವಾದ ಸ್ವಾಮಿನಿಷ್ಠೆಯನ್ನೂ, ಸ್ವದೇಶಪ್ರೀತಿಯನ್ನೂ ಸ್ವಧರ್ಮಾಭಿಮಾನವನ್ನೂ ಪರೀಕ್ಷಿಸುವದಕ್ಕಾಗಿಯೇ ಈ ಬಂಗಾರದಂಥ ಹೊತ್ತು ಬಂದಿರುತ್ತದೆಂದು ತಿಳಿದು, ಎಲ್ಲ ರೂ ಮಹಾರಾಷ್ಟ್ರದ ಉದ್ಧಾರಕ್ಕಾಗಿ ಟೊಂಕ ಕಟ್ಟಿರಿ, ಅವ್ವನವರೇ, ಆಕಾಶದೊಳಗಿನ ನ ಕ ತಗ ಳು ಸೂರ್ಯನಿಲ್ಲದಿರುವಾಗ ಅಂದರೆ ರಾತ್ರಿಯಲ್ಲಿ ಮಾತ್ರ ವಿನುಗುತ್ತವೆ; ಆದರೆ ನಮ್ಮ ಮಹಾರಾಷ್ಟ್ರದೊಳಗಿನ ನಕ್ಷತ್ರಗಳು ಬಾದಶಹನ ಕಾಟವಿದ್ದಾಗ , ಇಲ್ಲದಾಗೂ ಕೂಡಿಯೇ, ಅಂದರೆ ಹಗ .ಲು ರಾತ್ರಿಗಳಲ್ಲಿ ಕೂಡಿಯೇ ಮೀನಗುತ್ತವೆ ! ಅದರಂತೆ, ಆ ಕಾ ಶ ಕ ಅ ೮೦ ಕರ ಭೂತರಾದ ಸೂರ್ಯ-ಚಂದ್ರರು ಮುಣುಗಿದ ಕೂಡಲೆ ಜಗತ್ತು ಕಾಂತಿಹೀನವಾಗು ಇದೆ; ಆದರೆ ಮಹಾರಾಷ್ಟ್ರದ ಪ್ರಭುಗಳು ಅಸ್ತಂಗತವಾಗದಾಗ್ಯೂ, ಆದ ಬಳಿಕ ಅವರ ಪ್ರಕಾಶವು ಜಗತ್ತಿನಲ್ಲಿ ಸೂಸಿ ಹೊರಚೆಲ್ಲುತ್ತದೆ! ಪ್ರಹ್ಲಾದನಂತನ ಈ ಮಾತನ್ನು ಕೇಳಿ ಜಾಣೆಯಾದ ಏಸೂಬಾಯಿಯ ಸಮಾಧಾನಪಟ್ಟು ಆತನನ್ನು ಕುರಿತು-ಪ್ರಹ್ಲಾದನಂತ, ತಾವು ವರ್ಣದಿಂದ ಬ್ರಾಹ್ಮ ಣರೂ, ಆಶ್ರಮದಿಂದ ಗೃಹಸ್ಥರೂ ಆಗಿರುತ್ತೀರಿ . ಇತ ವೈಕಲ್ಯಗಳನ್ನು ನೀವು ಪಾಲಿಸುವಿರಿ. ಆಬಾಸಾಹೇಬರು ನಿಮ್ಮಿಂದ ಇಡಿಸಿರುವ ಅಗ್ನಿಹೋತ್ರವನ್ನು ನಡ ಸುವದಕ್ಕೆ ನೀವು ಅಂತರ್ಯವಾದ ಕರ್ತವ್ಯಾಗ್ನಿಯನ್ನು ಜಾಗೃತಇಡಬೇಕಾಗು ವದಲ್ಲವೆ? ಸಂತ, ನಾವು ಹೆಂಗಸರು, ಮಹಾರಾಜರು ಶೋಕಪೀಡಿತರಾಗಿರುವರು; ಶಿವಾಜಿಯು ಹುಡುಗನಾಗಿರುವನು; ಆದ್ದರಿಂದ ಮಾರ್ಗತೋರಿಸುವ ಭಾರ ವು ನಿಮ್ಮ ಮೇಲೆ ಯೇ ಇರುತ್ತದೆ, ನೀವು ಮಸಲತ್ತು, ಹೇಳಬೇಕು, ಅನ್ನಲು, ಪ್ರಹ್ಲಾದ ಪಂತನು-ಮಾತೃಶ್ರೀ, ಹಾಗಿದ್ದರೂ ಸ್ವಾಮಿಸೇವೆಯ:ು ನಮ್ಮ ಕರ್ತವ್ಯವಲ್ಲವೆ? ಶ್ರೀ ಶಿವಪ್ರಭುವಿನ ಪುಣ್ಯಪ್ರತಾಪವು ಪ್ರೇರೇಪಿಸಿದಂತೆ ನಾವು ಸ್ವಾಮಿ ಸೇವೆ ಯ ನ್ನು ಏಕನಿಷ್ಠೆಯಿಂದ ಮಾಡಬೇಕಲ್ಲವೆ? ಬಾಳಾಸಾಹೇಬರ ವಯಸ್ಸು ಚಿಕ್ಕದಾದ್ದರಿಂದ ರಾಜಾರಾಮ ಮಹಾರಾಜರು ರಾಜಪ್ರತಿನಿಧಿಗಳಾಗಿ ಪೋಷಾಕುಧರಿಸಿ ರಾಜ್ಯವನ್ನು ಪಲ್ಲಾಳಗಡದಲ್ಲಿದ್ದು ನಡಿಸಬೇಕು, ಒಟ್ಟುಗೂಡಿದ ಔರಂಗಜೇಬನ ಬಲಾಢವಾದ ಪ್ರಚಂಡ ಸೈನ್ಯಕ್ಕೆ ನಮ್ಮ ಸೈನ್ಯವು ಇಡಾಗದಾದ್ದರಿಂದ, ನಮ್ಮ ಸೈನ್ಯವನ್ನು ವಿಭಾ ಗಿಸಿ, ನಾಲ್ಕೂ ಕಡೆಯಿಂದ ಔರಂಗಜೇಬನಿಗೆ ತೊಂದರೆ ಕೊಡಬೇಕಾಗುವದು , ನಾವೆ ೪ರೂ ರಾಯಗಡದಲ್ಲಿ ಕುಳಿತುಕೊಂಡರೆ, ಔರಂಗಜೇಬನು ತನ್ನ ಒಟ್ಟುಗೂಡಿದ ಸೈನ್ಯವನ್ನು ರಾಯಗಡದ ಮೇಲೆ ಹೊರಳಿಸಿ, ನಮ್ಮನ್ನು ಮಣ್ಣುಗೂಡಿಸಬಹುದು;