ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೯೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲಾ . ದಿಂದ ಮುಕ್ತಿ ಬಗ್ಗು ಬಡಿದರು; ಕೆಲವರಲ್ಲಿ ಪರಸ್ಪರ ಕಲಹವನ್ನು ಹಚ್ಚಿದರು; ಕೆಲವರಲ್ಲಿ ಮಿತ್ರಭೇದವನ್ನುಂಟುಮಾಡಿದರು; ಕೆಲವರೊಡನೆ ಸ್ನೇಹವನ್ನು ಬಳಿಸಿ ದರು; ಕೆಲವರೊಡನೆ ಶರೀರ ಸಂಬಂಧ ಮಾಡಿದರು; ಕೆಲವರನ್ನು ತಾವಾಗಿ ದರ್ಶ ನಕೆ , ಹೋಗಿ ಒಲಿಸಿಕೊಂಡರು; ಕೆಲವರನ್ನು ಪರಸ್ಪರ ಘಾತಗೊಳಿಸಿದರು; ಕೆಲ ವರ ಜಲದುರ್ಗಗಳಿಗೆ ಪ್ರತಿ ಜಲದುರ್ಗಗಳನ್ನು ನಿರ್ಮಿಸಿದರು, ಹೀಗೆ ಒಂದಲ್ಲಎರಡಲ್ಲ, ನಮ್ಮಂಥ ಪಾಮರರಿಗೆ ಹೇಳಲಶಕ್ಯವಾದ ಉಪಾಯಗಳನ್ನು ನಮ್ಮ ಪೂಜ್ಯ ಮಾವಂದಿರಾದ ಆಬಾಸಾಹೇಬರು ಕೈ ಕೊಂಡಿದ್ದರಲ್ಲವೇ? ಅವನ್ನೆಲ್ಲ ನಾವು ಈಗ ಯಾಕೆ ಪರ್ಯಾಲೋಚಿಸಬಾರದು ? ಈ ಮೇರೆಗೆ ಮಹಾ ತೇಜಸ್ವಿಯಾದ ಏಸೂಬಾಯಿಯು ನುಡಿದನಂತರ ತನ್ನ ಮೈದುನನಾದ ರಾಜಾರಾಮ ಮಹಾರಾಜರನ್ನು ಕುರಿತು-ಪೂಜ್ಯರಾದ ಮೈದುನರೆ, ರಾಜಾರಾಮಮಹಾರಾಜ, ತೆರವಾಗಿದ್ದ ಈ ಸಿಂಹಾಸನದ ಮೇಲೆ ನೀವು ಬಾಲಶಿವಾಜಿ ಯನ್ನು ಕುಳ್ಳಿರಿಸಿದಿರಿ, ನಾನು ಅದನ್ನು ನೋಡಿದೆನು , ಮೈದುನರೇ, ನನ್ನಿಂದ ತಮ, ವಿಷಯದ ಅನಂತ ಅಪರಾಧಗಳು ಘಟಿಸಿರಬಹುದು ! ಅವನ್ನು ತಾವು ಕ್ಷಮಿಸಬೇಕು ! ಲಕ್ಷ ಣನು ಸೀತಾದೇವಿಯು ಅಪರಾಧಗಳನ್ನು ಕ್ಷಮಿಸಿ , ಆ ತನ್ನ ಅತ್ತಿಗೆಯ ಬೆನ್ನು ಕಾಯಲಿಲ್ಲವೆ? ಮಹಾರಾಜ , ಅತ್ತೆಯವರ ಭಯಂಕರವಾದ ಕೊಲೆಯನ್ನು ತಾವು ಮರೆಯಬೇಕೆಂದು ಬೇಡಿಕೊಳ್ಳುವ ಧೈರ್ಯವು ನನಗೆ ಸಾಲದು. ತಾವು ಅದನ್ನೂ ಮರೆಯದಿದ್ದರೆ, ಹಾಗು ಮಹಾರಾಷ್ಟ್ರದ ಅಭಿಮಾನವನ್ನು ತಾವು ಮರೆಯುವಹಾಗಿದ್ದರೆ, ಈ ಪಾಪಿಷಳ ಸಹಗಮನಕ್ಕೆ ಒಪ್ಪಿಗೆಯನ್ನು ಕೊಡಿರಿ, ಈ ನನ್ನ ಕೂಸನ್ನು ನಿಮ್ಮ ಉಡಿಯಲ್ಲಿ ಹಾಕಿಕೊಳ್ಳಿರಿ. ಹ್ಯಾಗಾದರೂ, ಮಾವಂ ದಿರ ಉದ್ದೇಶವು ಸಫಲವಾಯಿತು . ಮಹಾರಾಜ, ಧ ಮ ೯ ರಕ್ಷ ಣ ಕ್ಕಾಗಿ ಮಹಾರಾಜರು ತಮ್ಮ ಪ್ರಾಣವನ್ನು ನಿವಾಳಿಸಿ ಒ ಗೆ ಯ ಲಿಲ್ಲ ವೆ? ಅಂದಬಳಿಕ ಸ್ವಾರ್ಥಾಭಿಲಾಷೆಯಿಂದ ನಾನು ಸಹಗಮನ ಮಾಡಿದರೆ, ಮಾವಂದಿರಿಗಂತು ಇರಲಿ, ಮರಣಕಾಲದಲ್ಲಿ ಜೋತಾಜಿಯ ಮುಖಾಂತರ ಮರಾಟರಿಗೆ ತಮ್ಮ ದಿವ್ಯ ಸಂದೇಶ ಕಳಿಸಿದ ಮಹಾರಾಜರಿಗಾದರೂ ಸ ಮಾ ಧಾ ನ ವಾ ಗ ಬ ಹು ದೋ ? ಮೆದು ನರೇ, ಏಳಿರಿ, ಪ್ರಹ್ಲಾದನಂತರ ಸೂಚನೆಯಂತೆ ನೀವು ಪಾಳಗಡಕ್ಕೆ ರಾಜಪ್ರತಿ ನಿಧಿಗಳಾಗಿ ಶಿವಪ್ರಭುವಿನ ಸಿಂಹಾಸನವನ್ನು ತಕ್ಕೊಂಡು ಹೋಗಿರಿ , ರಾಯ ಗಡದ ಮೇಲೆ ಔರಂಗಜೇಬನ ದೃಷ್ಟಿಯು ಬೀಳಲಿ, ನಮಸೇ ನಾ ಧು ರ೦ ಧರ ಧನಾಜೀ, ತೀವ್ರ ಪ್ರತಾಪಿಯಾದ ಸಂತಾಜೀ, ಮೋಹಿತೇ, ದಾಭಾಡೆ, ನಮ್ಮ