ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+++ ದ್ವಿ ತಿ ಯಾ ೦ ಕ ೦. ++ ಆಸ್ಥಾನ: ಅಮರಾವತಿಯ ಪುರವೀಥಿ. (ಪಕ್ವತಮುನಿಯು ಪ್ರವೇಶಿಸುವನು.) ಪಕ್ವತಂ- ಆಕಾಶವನ್ನು ನೋಡಿ) ಆಹಾ ! ಕಾಲಮಹಿಮೆಯಿಂದ ಪೂ ರ್ಣಚಂದ್ರನು ಎಷ್ಟುಮನೋಹರನಾಗಿ ಪ್ರಕಾಶಿಸುತ್ತಿರುವನು! ನಿಷ್ಕಲ್ಮಷವಾದ ಮತ್ತು ಶಾಂತವಾದ ತನ್ನ ಕಾಂತಿಯಿಂದ ಈ ಗಿನ ಚಂದ್ರನು, ತಮೋಗುಣವನ್ನು ನಿಗ್ರಹಿಸಿ, ಕೇವಲ ಸತ್ವ ನಿಷನಾದ ಯೋಗಿಯಂತೆ ತೋರುತ್ತಿರುವನು. ಕಂ|| ಶರದಭ್ರಸರಿತ್ತಟದೊಳ್ || ಪರಿಶುದ್ರಾಂಬರಪರೀತನಿಜಮೂರ್ತಿ ನಿಶಾ | ಕರಮುನಿ ಜಪನಿಷ್ಠನವೋಲ್ | ಮೆರೆವಂ ಕರವಿಧ್ಯತತಾರಕಾಕ್ಷಾವಳಿಯಿಂ || ಇದಲ್ಲದೆ ಈಗಿನ ಶರತ್ಕಾಲವು, ಕಾಮಿಗಳ ಮನಸ್ಸಿಗೆ ಕಾಮೋದೀ ಪನವನ್ನುಂಟುಮಾಡುತ್ತಿದ್ದರೂ, ಲೋಕಕ್ಕೆ ಹಿಂದುವಿಧವಾ ದ ವಿವೇಕವನ್ನು ಬೋಧಿಸುವಂತಿರುವುದು: ಏಕೆಂದರೆ, ಇದು ವರೆಗೆ ಮೇಘವೃತವಾಗಿ ಕಾಂತಿಗುಂದಿದ್ದ ಸೂರಚಂದ್ರಾ ದಿಗ್ರಹಗಳು, ಈಗ ಆಪೂತ್ವವಾದ ಕಾಂತಿವಿಶೇಷದಿಂದ ಶೋಭಿ ಸುತ್ತಿರುವುದನ್ನು ನೋಡಿದರೆ, ಮನುಷ್ಯನು ಕಾಲವಶದಿಂದ ತಮೋಗುಣದಲ್ಲಿ ಬಿದ್ದು ತೇಜೋಹಾನಿಯನ್ನು ಹೊಂದಿದರೂ, ತಿರುಗಿ ಸನ್ಮಾರ್ಗಪ್ರವರ್ತನೆಯಿಂದ, ತನ್ನ ಸಹಜವಾದ ತೇಜ ಸೃನ್ನು ಹೊರಪಡಿಸಬಹುದೆಂಬುದಕ್ಕೆ ಈ ಕಾಲಸ್ಥಿತಿಯೇ ನಿದ ರ್ಶನವಾಗಿರುವುದು, ಹೇಗೆಂದರೆ